IPL 2022 | ಆರ್ ಸಿಬಿ ಬ್ಯಾಟರ್ ಬಗ್ಗೆ ಗವಾಸ್ಕರ್ ಹೇಳಿದ್ದೇನು..?

1 min read
ipl-2022-RCB sunil-gavaskar-backs-dinesh-karthik saaksha tv

ipl-2022-RCB sunil-gavaskar-backs-dinesh-karthik saaksha tv

IPL 2022 | ಆರ್ ಸಿಬಿ ಬ್ಯಾಟರ್ ಬಗ್ಗೆ ಗವಾಸ್ಕರ್ ಹೇಳಿದ್ದೇನು..?

ಟೀಂ ಇಂಡಿಯಾದ ಅನುಭವಿ ವಿಕೆಟ್‌ಕೀಪರ್ ಹಾಗೂ ಆರ್‌ಸಿಬಿ ತಂಡದ ಸ್ಟಾರ್ ದಿನೇಶ್ ಕಾರ್ತಿಕ್ ಐಪಿಎಲ್-2022ರಲ್ಲಿ ಧೂಳೆಬ್ಬಿಸುತ್ತಿದ್ದಾರೆ.

ಕಾರ್ತಿಕ್ ಈ ಋತುವಿನಲ್ಲಿ RCB ತಂಡಕ್ಕೆ ಅತ್ಯುತ್ತಮ ಫಿನಿಶರ್ ಆಗಿ ಮಿಂಚುತ್ತಿದ್ದಾರೆ.

ಉತ್ತಮ ಪ್ರದರ್ಶನ ತೋರುತ್ತಿರುವ ಕಾರ್ತಿಕ್ ಅವರನ್ನು ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಬೇಕು ಎಂದು  ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸಾಲಿಗೆ ಇದೀಗ ಭಾರತೀಯ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ ಸೇರ್ಪಡೆಯಾಗಿದ್ದಾರೆ.

ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡಲು ಕಾರ್ತಿಕ್ ಶ್ರಮಿಸುತ್ತಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ಕಾರ್ತಿಕ್ ಕೊನೆಯ ಬಾರಿಗೆ 2019 ರ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ಆಡಿದ್ದರು.

ipl-2022-RCB sunil-gavaskar-backs-dinesh-karthik  saaksha tv
ipl-2022-RCB sunil-gavaskar-backs-dinesh-karthik saaksha tv

“ಕಳೆದ ವರ್ಷ ನಾನು ಕಾರ್ತಿಕ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ನಾವು ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ 10-12 ದಿನಗಳನ್ನು ಕ್ವಾರಂಟೈನ್‌ನಲ್ಲಿದ್ದೇವು.

ಅವರು ಭಾರತ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಕಾರ್ತಿಕ್ ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಪರ ಆಡಬೇಕೆಂದು ಬಯಸಿದ್ದರು.

ಆದರೆ ಆಗ ಅವರ ಆಸೆ ಈಡೇರಲಿಲ್ಲ. ಬಹುಶಃ ಈ ವರ್ಷ ಅದು ಈಡೇರುತ್ತದೆ. ಏಕೆಂದರೆ ಕಾರ್ತಿಕ್ ಐಪಿಎಲ್ ನಲ್ಲಿ ಮಿಂಚುತ್ತಿದ್ದಾರೆ.

ಹಾಗಾಗಿ ಅವರು ಭಾರತೀಯ ಟಿ20 ವಿಶ್ವಕಪ್ ತಂಡದಲ್ಲಿ ಇರುತ್ತಾರೆ ಎಂಬುದು ನನಗೆ ಖಚಿತವಾಗಿದೆ ಎಂದು ಗವಾಸ್ಕರ್ ತಿಳಿಸಿದ್ದಾರೆ.

ಈ ಋತುವಿನಲ್ಲಿ ಇದುವರೆಗೆ 12 ಪಂದ್ಯಗಳನ್ನು ಆಡಿರುವ ಕಾರ್ತಿಕ್ 274 ರನ್ ಗಳಿಸಿದ್ದಾರೆ. ipl-2022-RCB sunil-gavaskar-backs-dinesh-karthik

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd