IPL 2022 | ಆರ್ ಸಿಬಿ ವಿರುದ್ಧ ಪರಾಗ್ ಒನ್ ಮ್ಯಾನ್ ಶೋ..!!
ಐಪಿಎಲ್ ನ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರಿಯಾನ್ ಪರಾಗ್, ಐಪಿಎಲ್ನಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ.
ಆರ್ಸಿಬಿ ವಿರುದ್ಧದ ಹಣಾಹಣಿಯಲ್ಲಿ ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ನಲ್ಲೂ ಕಮಾಲ್ ಮಾಡಿದ ರಿಯಾನ್ ಪರಾಗ್, ಬ್ಯಾಟಿಂಗ್ನಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ರು, ಬಳಿಕ ಫೀಲ್ಡಿಂಗ್ನಲ್ಲಿ ನಾಲ್ಕು ಕ್ಯಾಚ್ ಗಳನ್ನ ಪಡೆದರು, ಇದರೊಂದಿಗೆ ಒಂದೇ ಪಂದ್ಯದಲ್ಲಿ ಅರ್ಧಶತಕ ಮತ್ತು ನಾಲ್ಕು ಕ್ಯಾಚ್ಗಳನ್ನು ಹಿಡಿದು ರಾಜಸ್ಥಾನ್ ಗೆಲುವಿನ ಹೀರೋ ಆಗಿ ಮಿಂಚಿದರು. ಅಲ್ಲದೇ ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.
ಎಂಸಿಎ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡ ಆರಂಭದಿಂದಲೇ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಇನ್ನೇನು ತಂಡ 100 ರನ್ ಗಳ ಒಳಗೆ ಆಲ್ ಔಟ್ ಆಗುತ್ತೆ ಎಂದು ಎಲ್ಲರು ಅಂದಾಜಿಸಿದ್ದರು. ಆ ಅಂದಾಜಿನ ಲೆಕ್ಕಾಚಾರಗಳನ್ನು ರಿಯಾನ್ ಪರಾಗ್ ಬುಡಮೇಲು ಮಾಡಿದ್ರು. ಒಂದು ಕಡೆ ವಿಕೆಟ್ ಗಳು ಬೀಳುತ್ತಿದ್ದರೂ ಕ್ರೀಸ್ ಗೆ ಕಚ್ಚಿ ಬ್ಯಾಟ್ ಬೀಸಿದ ರಿಯಾನ್ ಆಕರ್ಷಕ ಅರ್ಧಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್ ಗಳಲ್ಲಿ 31 ಎಸೆತಗಳನ್ನು ಎದುರಿಸಿದ ಪರಾಗ್, 3 ಬೌಂಡರಿ, 4 ಸಿಕ್ಸ್ ಗಳ ನೆರವಿನಿಂದ ಅಜೇಯ 56 ರನ್ ಗಳಿಸಿದರು. ಹೀಗಾಗಿ ರಾಯಲ್ಸ್ ತಂಡ ನಿಗದಿತ 20ಗಳಲ್ಲಿ 144 ರನ್ ಗಳನ್ನು ಕಲೆಹಾಕಿತು.
ಇದಾದ ಬಳಿಕ ರಾಜಸ್ಥಾನ್ ತಂಡಕ್ಕೆ ಫೀಲ್ಡಿಂಗ್ನಲ್ಲೂ ಆಸರೆಯಾದ ಪರಾಗ್, 4 ಕ್ಯಾಚ್ ಹಿಡಿದು ಮಿಂಚಿದರು. ಆ ಮೂಲಕ ವಿರಾಟ್ ಕೊಹ್ಲಿ, ಶಹಬಾಜ್ ಅಹ್ಮದ್, ಸುಯಾಶ್ ಪ್ರಭುದೇಸಾಯಿ ಹಾಗೂ ಹರ್ಷಲ್ ಪಟೇಲ್ ವಿಕೆಟ್ ಪತನಕ್ಕೆ ಕಾರಣರಾದರು.
ರಿಯಾನ್ ಪರಾಗ್ ಅವರ ಈ ಆಲ್ರೌಂಡ್ ಪ್ರದರ್ಶನದಿಂದ ರಾಜಸ್ಥಾನ್ ರಾಯಲ್ಸ್, ಬ್ಯಾಟಿಂಗ್ನಲ್ಲಿ 144 ರನ್ಗಳ ಪೈಪೋಟಿ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಆರ್ಸಿಬಿ, ಬ್ಯಾಟಿಂಗ್ ವೈಫಲ್ಯದಿಂದಾಗಿ 29 ರನ್ಗಳ ಹೀನಾಯ ಸೋಲುಕಂಡಿತು. ಅಲ್ಲದೇ ರಾಜಸ್ಥಾನ್ ಗೆಲುವಿನ ಹೀರೋ ಆಗಿ ಮಿಂಚಿದ ರಿಯಾನ್ ಪರಾಗ್, ಐಪಿಎಲ್ನಲ್ಲಿ ತಮ್ಮ ಚೊಚ್ಚಲ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
IPLನಲ್ಲಿ ಒಂದೇ ಪಂದ್ಯದಲ್ಲಿ 4 ಕ್ಯಾಚ್(ಭಾರತೀಯರು):
ಸಚಿನ್ ತೆಂಡುಲ್ಕರ್ v ಕೆಕೆಆರ್, ಮುಂಬೈ (2008)
ರಾಹುಲ್ ತೆವಾಟಿಯಾ v ಎಂಐ, ಮುಂಬೈ (2019)
ರವೀಂದ್ರ ಜಡೇಜಾ v ಆರ್ಆರ್, ಮುಂಬೈ (2021)
ರಿಂಕು ಸಿಂಗ್ v ಜಿಟಿ, ನವಿ ಮುಂಬೈ (2022)
ರಿಯಾನ್ ಪರಾಗ್ v ಆರ್ಸಿಬಿ, ಪುಣೆ (2022)
IPL 2022 RCB vs Parag One Man Show