Rishabh Pant | ಪಂತ್ ನಿನ್ಗೆ ಬುದ್ಧಿ ಇಲ್ಲವಾ..?
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನಗತ್ಯವಾಗಿ ಡಿಆರ್ ಎಸ್ ಅನ್ನ ವೃಥಾ ಮಾಡಿಕೊಂಡರು.
ಯಾವುದೇ ಪಂದ್ಯವಿರಲಿ ರಿವ್ಯೂಗೆ ಹೋಗುವ ಮುನ್ನಾ ಕೀಪರ್ ಅಭಿಪ್ರಾಯವನ್ನು ಕೇಳುತ್ತಾರೆ.
ಯಾಕಂದರೇ ಬ್ಯಾಟರ್ ಔಟ್ ಆಗಿದ್ದಾರೋ ಇಲ್ಲವೋ ಎಂಬುದು ಬ್ಯಾಟರ್ ಗೆ ಚೆನ್ನಾಗಿ ಗೊತ್ತಾಗಿರುತ್ತೆ.
ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಇದಕ್ಕೆ ವಿಭಿನ್ನವಾಗಿದ್ದಾರೆ.
ಲಲಿತ್ ಯಾದವ್ 11ನೇ ಓವರ್ ಅನ್ನ ಎಸೆದರು. ಲಲಿತ್ ಎಸೆದ ನಾಲ್ಕನೇ ಎಸೆತವನ್ನ ಎವಿನ್ ಸ್ವೀಪ್ ಶಾಟ್ ಆಡಲು ಪ್ರಯತ್ನಿಸುತ್ತಿರುವಾಗ, ಅದು ಲೆಗ್ ಸ್ಟಂಪ್ ಮೇಲೆ ಹೋಗಿದೆ.
ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಬೌಟ್ ಎಂದು ಅಪೀಲ್ ಮಾಡಿದ್ರು. ಆಗ ಫೀಲ್ಡ್ ಅಂಪೇರ್ ನಾಟೌಟ್ ಎಂದು ಘೋಷಿಸಿದ್ರು.
ಆಗ ವಿಕೆಟ್ ಕೀಪರ್ ಆಗಿ ಪಂತ್ ನಿರ್ಣಯ ತೆಗೆದುಕೊಳ್ಳದೇ ಇತರೆ ಆಟಗಾರರ ಅಭಿಪ್ರಾಯ ಕೇಳಿದ್ರು. ಆಗ ಅವರು ಚೆಂಡು ಹತ್ತಿರದಿಂದ ಹೋಗಿದ್ದು, ಔಟ್ ಆಗುವ ಅವಕಾಶಗಳಿವೆ ಎಂದರು.
ಇದರಿಂದ ಮರು ಯೋಚನೆ ಮಾಡದೇ ಪಂತ್ ರಿವ್ಯೂಗೆ ಹೋದ್ರು. ಆದ್ರೆ ಅದು ನಾಟೌಟ್ ಆಗಿತ್ತು.
ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿವ್ಯೂವನ್ನು ಕಳೆದುಕೊಳ್ತು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು, ಪಂತ್ ಅವರನ್ನ ಟ್ರೋಲ್ ಮಾಡುತ್ತಿದ್ದಾರೆ. IPL 2022 rishabh-pant-taken-worst-review









