IPL 2022 | ಸತತ ಸೋಲುಗಳಿಗೆ ಕಾರಣ ಬಿಚ್ಚಿಟ್ಟ ರೋಹಿತ್ ಶರ್ಮಾ
IPL-2022 ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಸತತ ಎಂಟನೇ ಸೋಲನ್ನು ಅನುಭವಿಸಿದೆ.
ಭಾನುವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 36 ರನ್‌ಗಳಿಂದ ಸೋತಿದೆ.
ಇದರೊಂದಿಗೆ ಮುಂಬೈ ಪ್ಲೇ ಆಫ್ ರೇಸ್‌ನಿಂದ ನಿರ್ಗಮಿಸಿದಂತಾಗಿದೆ.
ಇನ್ನು ಲಕ್ನೋ ವಿರುದ್ಧದ ಸೋಲಿನ ಬಗ್ಗೆ ಪಂದ್ಯದ ನಂತರ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಬ್ಯಾಟಿಂಗ್ ಯೂನಿಟ್ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ ಎಂದು ಹೇಳಿದ್ದಾರೆ.
‘‘ಬ್ಯಾಟಿಂಗ್‌ಗೆ ಇದು ಉತ್ತಮ ಪಿಚ್. ಆದರೂ ನಮ್ಮ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು.

ಎದುರಾಳಿ ನೀಡಿದ ಗುರಿ ದೊಡ್ಡದಾಗಿರಲಿಲ್ಲ. ಆದ್ರೆ ಜೊತೆಯಾಟ ನೀಡುವಲ್ಲಿ ನಾವು ವಿಫಲರಾದ್ವಿ.
ನಾನು ಸೇರಿದಂತೆ ಕೆಲವು ಬ್ಯಾಟ್ಸ್‌ಮನ್‌ಗಳ ಅಜಾಗರೂಕ ಹೊಡೆತಗಳು ನಮ್ಮ ಯಶಸ್ಸಿನ ಅವಕಾಶವನ್ನು ಹಾಳುಮಾಡಿದವು.
ವಿಶೇಷವಾಗಿ ಮಿಡಲ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಎದುರಾಳಿ ತಂಡಗಳಲ್ಲಿ ಮಿಡಲ್ ಆರ್ಡರ್ ನಲ್ಲಿ ಚೆನ್ನಾಗಿ ಆಡುತ್ತಿದ್ದಾರೆ, ನಮ್ಮಲ್ಲಿ ಅದು ಸಾಧ್ಯವಾಗಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ
ಮೊದಲು ಬ್ಯಾಟ್ ಮಾಡಿ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಕೆ.ಎಲ್ ರಾಹುಲ್ ಸೆಂಚೂರಿಯೊಂದಿಗೆ 168 ರನ್ ಗಳಿಸಿತು.
ಮುಂಬೈ ಇಂಡಿಯನ್ಸ್ ತಂಡ 136 ರನ್ ಗಳಿಗೆ ಸುಸ್ತಾಯ್ತು. ಇದರೊಂದಿಗೆ 32 ರನ್ ಗಳೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಸೋಲು ಕಂಡಿದೆ. ipl-2022-rohit-sharma-big-statement-after-mumbai-loss-irresponsible