IPL 2022 | ಟೀಂ ಇಂಡಿಯಾದಿಂದ ರೋಹಿತ್, ಕೊಹ್ಲಿಗೆ ಗೇಟ್ ಪಾಸ್..?
ಟೀಂ ಇಂಡಿಯಾದಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಗೇಟ್ ಪಾಸ್ ಸಿಗುತ್ತಾ..?
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗಾಗಿ ಯಂಗ್ ಇಂಡಿಯಾಗೆ ಮಣೆ ಹಾಕುತ್ತಾ ಬಿಸಿಸಿಐ..?
ದಿಗ್ಗಜ ಬ್ಯಾಟರ್ ಗಳನ್ನು ಬಿಟ್ಟು ಕಪ್ ಗೆಲ್ಲುತ್ತಾ ಯಂಗ್ ಇಂಡಿಯಾ..?
ಸದ್ಯ ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಮೊಳಕೆ ಹೊಡೆದಿರುವ ಕುತೂಹಲಕಾರಿ ಪ್ರಶ್ನೆಗಳಿವು.
ಇದಕ್ಕೆ ಕಾರಣ 15ನೇ ಸೀಸನ್ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಭಾರತದ ಬ್ಯಾಟಿಂಗ್ ಶಕ್ತಿಗಳೆಂದೇ ಗುರುತಿಸಿಕೊಂಡಿದ್ದ ಕಿಂಗ್ ವಿರಾಟ್ ಕೊಹ್ಲಿ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಕಳಫೆ ಬ್ಯಾಟಿಂಗ್ ಪ್ರದರ್ಶನ.
ಹೌದು..! ಈ ವರ್ಷದ ಅಕ್ಟೋಬರ್ ನಿಂದ ಕಾಂಗೂರು ನಾಡು ಆಸ್ಟ್ರೇಲಿಯಾದಲ್ಲಿ ಚುಟುಕು ಕ್ರಿಕೆಟ್ ನ ಮಹಾ ಸಂಗ್ರಾಮ ನಡೆಯಲಿದೆ.
ಕ್ರಿಕೆಟ್ ಲೋಕದ ಬಲಿಷ್ಠ ತಂಡಗಳು ಈ ವಿಶ್ವಸಮರಕ್ಕಾಗಿ ಸಜ್ಜಾಗುತ್ತಿವೆ. ಆಸೀಸ್ ನಾಡಲ್ಲಿ ವಿಶ್ವಕಪ್ ಗೆಲ್ಲುವ ಕನಸ್ಸಿನಲ್ಲಿ ಎಲ್ಲಾ ತಂಡಗಳು ಇದೆ.
ಅದರಂತೆ ಭಾರತ ಕೂಡ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ.
ಅದಕ್ಕಾಗಿಯೇ ಇಂಡಿಯನ್ ಪ್ರಿಮಿಯರ್ ನಲ್ಲಿ ಮಿಂಚುವ ಪ್ರತಿಭೆಗಳಿಗೆ ಮಣೆ ಹಾಕಿ ಬಲಿಷ್ಠ ತಂಡವನ್ನು ಆಸ್ಟ್ರೇಲಿಯಾಗೆ ಕಳುಹಿಸೋದು ಬಿಸಿಸಿಐನ ಪ್ಲಾನ್ ಆಗಿದೆ.
ಹೀಗಾಗಿಯೇ ಐಪಿಎಲ್ ನ ಪ್ರತಿ ಪಂದ್ಯವನ್ನು ಭಾರತ ತಂಡದ ಆಯ್ಕೆ ಸಮಿತಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದೆ.
ಸದ್ಯ ಈ ಬಾರಿಯ ಐಪಿಎಲ್ ನಲ್ಲಿ ಅರ್ಧದಷ್ಟು ಪಂದ್ಯಗಳು ಮುಕ್ತಾಯವಾಗಿದ್ದು, ಯುವ ಆಟಗಾರರು ಗಮನ ಸೆಳೆದಿದ್ದಾರೆ.
ಹಿರಿಯ ಆಟಗಾರರು ಫಾರ್ಮ್ ಗೆ ಬಂದಿದ್ದಾರೆ. ಈ ಖುಷಿಯನ್ನ ಅನುಭವಿಸುವ ಸ್ಥಿತಿಯಲ್ಲಿ ಬಿಸಿಸಿಐ ಇಲ್ಲ.
ಯಾಕಂದರೇ ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಪ್ಲೇಯರ್ ಗಳಾದ ನಾಯಕ ರೋಹಿತ್ ಶರ್ಮಾ, ಕಿಂಗ್ ವಿರಾಟ್ ಕೊಹ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದಾರೆ.
ಈ ಇಬ್ಬರೂ ಬ್ಯಾಟಿಂಗ್ ನಲ್ಲಿ ಸದ್ದು ಮಾಡುತ್ತಲೇ ಇಲ್ಲ. ಬದಲಿಗೆ ಎರಡೆರಡು ಬಾರಿ ಗೋಲ್ಡನ್ ಡಕ್ ಆಗಿದ್ದಾರೆ.
ಆರ್ ಸಿಬಿಯನ್ನು ಪ್ರತಿನಿಧಿಸುತ್ತಿರುವ ವಿರಾಟ್ ಕೊಹ್ಲಿ ಎಂಟು ಪಂದ್ಯದಲ್ಲಿ ಕೇವಲ 119 ರನ್ ಮಾತ್ರ ಗಳಿಸಿದ್ದಾರೆ.
ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ 130 ರನ್ ಗಳ ಆಸು ಪಾಸಿನಲ್ಲಿಯೇ ಇದ್ದಾರೆ.
ಸದ್ಯ ಇವರಿಬ್ಬರು ತಂಡಗಳಿಗೆ ಭಾರವಾಗಿದ್ದಾರೆ. ಹೀಗಾಗಿ ಇವರು ರೆಸ್ಟ್ ಪಡೆದುಕೊಳ್ಳಬೇಕು ಎಂದು ಹಿರಿಯ ಕ್ರಿಕೆಟಿಗರು ಸೂಚಿಸುತ್ತಿದ್ದಾರೆ.
ಇದೇ ಕಾರಣಕ್ಕೆ ಬಿಸಿಸಿಐನ ಬಿಗ್ ಬಾಸ್ ಗಳು ರೋಹಿತ್ ಶರ್ಮಾ, ಮತ್ತು ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾದಿಂದ ಕೋಕ್ ನೀಡುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ.
ಅದರಲ್ಲೂ ಮುಖ್ಯವಾಗಿ ರೋಹಿತ್ ಶರ್ಮಾ ಕ್ಯಾಪ್ಟಿನ್ಸಿಯಲ್ಲೂ ವೈಫಲ್ಯ ಅನುಭವಿಸಿದ್ದಾರೆ.
ಸತತ ಎಂಟು ಪಂದ್ಯಗಳಲ್ಲಿ ಮುಂಬೈ ಸೋತಿದೆ. ಹೀಗಾಗಿ ವಿಶ್ವಕಪ್ ಗೂ ಮುನ್ನಾ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಯುವಕರಿಗೆ ಚಾನ್ಸ್ ನೀಡುವ ಯೋಚನೆಯೂ ಬಿಸಿಸಿಐಗಿದೆ.
ಒಟ್ಟಿನಲ್ಲಿ ಮುಂದಿನ ವಿಶ್ವಕಪ್ ಗೆ ತಂಡ ಕಟ್ಟುವ ಅವಸರದಲ್ಲಿ ಬಿಸಿಸಿಐ ಇದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹೊರತುಪಡಿಸಿ ಬಲಿಷ್ಠ ಟೀಂ ಕಟ್ಟುತ್ತಾ ಕಾದು ನೋಡಬೇಕು.
ಆದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಅತ್ಯುತ್ತಮ ಬ್ಯಾಟರ್ ಗಳಾಗಿದ್ದು, ಒಂದೇ ಒಂದು ಇನ್ನಿಂಗ್ಸ್ ನಲ್ಲಿ ಫಾರ್ಮ್ ಗೆ ಮರಳುವ ತಾಕತ್ತು ಇಬ್ಬರಿಗೂ ಇದೆ. ipl-2022-Rohit sharma, virat kohli knockout Team India