IPL 2022 | ಶುಭ್ಮನ್ ಗಿಲ್ ಬ್ಯಾಟಿಂಗ್ ಬಗ್ಗೆ ಸೆಹ್ವಾಗ್ ವಿಮರ್ಶೆ
ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಗುಜರಾತ್ ಟೈಟಾನ್ಸ್ ಕ್ರಿಕೆಟಿಗ ಶುಭ್ಮನ್ ಗಿಲ್ ಅವರ ಪ್ರದರ್ಶನವನ್ನು ಟೀಕಿಸಿದ್ದಾರೆ.
ಟಿ20 ಮಾದರಿಯಲ್ಲಿ ಮಿಂಚಬೇಕಾದರೆ ಹಿಟ್ಟಿಂಗ್ ಆಡಬೇಕು, ಅಂತವರೇ ಯಶಸ್ವಿಯಾಗುತ್ತಾರೆ.
ಗಿಲ್ ಈ ವಿಷಯದ ಮೇಲೆ ಕೇಂದ್ರೀಕರಿಸಬೇಕು ಎಂದು ಸೆಹ್ವಾಗ್ ಸಲಹೆ ನೀಡಿದ್ದಾರೆ.
ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಪಂದ್ಯದಲ್ಲಿ ಮ್ಯಾಥ್ಯೂ ವೇಡ್ ಜೊತೆಗೂಡಿ ಶುಭ್ಮನ್ ಗಿಲ್ ಗುಜರಾತ್ ಇನ್ನಿಂಗ್ಸ್ ಆರಂಭಿಸಿದರು.
ಆದರೆ, ಮೂರು ಎಸೆತಗಳನ್ನು ಎದುರಿಸಿದ ಆರಂಭಿಕ ಬ್ಯಾಟ್ಸ್ ಮನ್ ರನ್ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು.
ಈ ಹಿನ್ನೆಲೆಯಲ್ಲಿ ಸೆಹ್ವಾಗ್ ಮಾತನಾಡುತ್ತಾ, ”ನನ್ನ ಅಭಿಪ್ರಾಯದಲ್ಲಿ ಗಿಲ್ ಉತ್ತಮ ಏಕದಿನ ಆಟಗಾರ ಮಾತ್ರ!
ಯಾಕೆಂದರೆ ಟಿ20 ಕ್ರಿಕೆಟ್ ನಲ್ಲಿ.. ಅದರಲ್ಲೂ ಪವರ್ ಪ್ಲೇನಲ್ಲಿ ಬೌಂಡರಿ ಬಾರಿಸುವವರು ಮಾತ್ರ ಯಶಸ್ವಿಯಾಗುತ್ತಾರೆ. ಗಿಲ್ ಇದನ್ನು ಗಮನಿಸಬೇಕು ಎಂದಿದ್ದಾರೆ. ipl-2022-Sehwag questions Gill’s batting after 3-ball duck