ಮೊಹ್ಮದ್ ಸಿರಾಜ್ ಗೆ ಕೊಡ್ತಾರಾ ಕೋಕ್..?
ಮೊಹ್ಮದ್ ಸಿರಾಜ್ ಗೆ ತಂಡದಿಂದ ಕೋಕ್ ಕೊಡಬೇಕು, ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಒತ್ತಾಯವಾಗಿದೆ.
ಯಾಕಂದರೇ ಈ ಬಾರಿ ಆರ್ ಸಿಬಿಯ ಸದ್ಯದ ಪರಿಸ್ಥಿತಿಗೆ ಒಂದು ಹಂತದಲ್ಲಿ ಸಿರಾಜ್ ಕೂಡ ಮುಖ್ಯ ಕಾರಣ.
ಯಾಕಂದರೇ ಮೆಗಾ ಹರಾಜಿಗೂ ಸಿರಾಜ್ ಅವರನ್ನು ಬೆಂಗಳೂರು ಫ್ರಾಂಚೈಸಿ ರಿಟೈನ್ಡ್ ಮಾಡಿಕೊಂಡಿತ್ತು.
ಆದ್ರೆ ಸಿರಾಜ್ ಆರ್ ಸಿಬಿ ಫ್ರಾಂಚೈಸಿಯ ಭರಸವೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಪ್ರತಿ ಪಂದ್ಯದಲ್ಲೂ ಸಿರಾಜ್ ವಿಕೆಟ್ ಪಡೆಯೋದಿರಲಿ, ಕನಿಷ್ಠ ರನ್ ಗಳಿಗೆ ಕಡಿವಾಣ ಹಾಕುವಲ್ಲಿ ಪದೇ ಪದೇ ವಿಫಲರಾಗುತ್ತಿದ್ದಾರೆ.
ಹೀಗಾಗಿ ಸಾಕಷ್ಟು ಪಂದ್ಯದಲ್ಲಿ ಬೆಂಗಳೂರು ಸೋಲು ಅನುಭಸಬೇಕಾಗಿದೆ. ಹೀಗಾಗಿ ಆರ್ ಸಿಬಿ ಫ್ಯಾನ್ಸ್ ಸಿರಾಜ್ ಮೇಲೆ ಕೋಪಗೊಂಡಿದ್ದಾರೆ.
ಅಂದಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಗೆಲುವೊಂದೇ ದಾರಿ. ಪ್ಲೇ ಆಫ್ ಕನಸು-ನನಸು ಆಗಬೇಕು ಅಂದರೆ ಸಾಧಿಸಬೇಕು. ಅದಾದಮೇಲೆ ಡೆಲ್ಲಿ ಕ್ಯಾಪಿಟಲ್ ಸೋಲಿಗೆ ಪ್ರಾರ್ಥನೆ ಮಾಡಬೇಕು. ಹೀಗಾಗಿ ಈ ಪಂದ್ಯವನ್ನು ಗೆದ್ದರು ಕೂಡ ಆರ್ ಸಿಬಿ ಪ್ಲೇ ಆಫ್ ಕನಸು ಲೆಕ್ಕಾಚಾರದಲ್ಲಿ ಮಾತ್ರ ಉಳಿಯುತ್ತದೆ.

ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯ ಗೆದ್ದ ಮೇಲೆ ಆರ್ಸಿಬಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಡುತ್ತಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಪಂದ್ಯ ಗೆದ್ದರೆ ಅದು ನಾಲ್ಕನೇ ಸ್ಥಾನಕ್ಕೆ ಇರುತ್ತದೆ ಯಾಕಂದ್ರೆ ಡೆಲ್ಲಿ ಕ್ಯಾಪಿಟಲ್ಸ್ ರನ್ ರೇಟ್ ಆರ್ಸಿಬಿ ಗಿಂತ ಹೆಚ್ಚಿದೆ. ಹೀಗಾಗಿ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಲೇಬೇಕು.
ಮತ್ತೊಂದು ಕಡೆಯಲ್ಲಿ ರಾಜಸ್ಥಾನ ರಾಯಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯವನ್ನು ಕೂಡ ರಾಜಸ್ಥಾನ್ ರಾಯಲ್ಸ್ ಗೆದ್ದರೆ ಎರಡನೇ ಸ್ಥಾನಕ್ಕೆ ಏರುತ್ತದೆ. ಡೆಲ್ಲಿ ಮತ್ತು ರಾಜಸ್ಥಾನ್ ರಾಯಲ್ಸ್ ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದರೆ ಆರ್ಸಿಬಿ ಕನಸು ನುಚ್ಚುನೂರಾಗುತ್ತದೆ.
ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ತನ್ನ 14 ನೇ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ. ಇದು ಆರ್ ಸಿಬಿ ಪಾಲಿಗೆ ಡು ಆರ್ ಡೈ ಪಂದ್ಯವಾಗಿದೆ. ಈ ಪಂದ್ಯದಲ್ಲಿ ರೆಡ್ ಅಂಡ್ ಗೋಲ್ಡ್ ಪಾಳಯ ಗೆಲುವು ಸಾಧಿಸಲೇಬೇಕು. ಹೀಗಾಗಿ ತಂಡದಲ್ಲಿ ಒಂದು ಬದಲಾವಣೆ ಮಾಡುವ ಸಾಧ್ಯತೆಗಳಿವೆ.
ಇಂದಿನ ಪಂದ್ಯಕ್ಕಾಗಿ ಆರ್ ಸಿಬಿ ಯ ಪ್ಲೇಯಿಂಗ್ ಇಲೆವೆನ್ ನಿಂದ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಕೋಕ್ ನೀಡಬಹುದು. ಯಾಕಂದರೇ ಸಿರಾಜ್ ಈ ಆವೃತ್ತಿಯಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಅವರ ಬದಲಿಗೆ ಮತ್ತೊಬ್ಬ ವೇಗಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಐಪಿಎಲ್ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಪ್ರತಿ ಪಂದ್ಯವೂ ಸಿಕ್ಕಾಪಟ್ಟೆ ಕುತೂಹಲ ಕೆರಳಿಸುತ್ತಿದೆ. IPL 2022 siraj out from rcb playing 11