IPL 2022 | ಫಾಫ್.. ಕೊಹ್ಲಿ ವಿಕೆಟ್ ಪಡೆದ ಜಾನ್ಸನ್ ಹೇಳಿದ್ದೇನು..?
ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 9 ವಿಕೆಟ್ ಗಳಿಂದ ಜಯ ಸಾಧಿಸಿರೋದು ಗೊತ್ತಿರುವ ವಿಚಾರವೇ.
ಆದ್ರೆ ಸನ್ ರೈಸರ್ಸ್ ಗೆಲುವಿಗೆ ಅಡಿಪಾಯ ಹಾಕಿದ್ದು, ಯುವ ಬೌಲರ್ ಮಾರ್ಕೋ ಜಾನ್ಸನ್..
ಹೌದು..! ಮುಂಬೈನ ಬ್ರೆಬೋರ್ನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು. ಈ ಪರೇಡ್ ಆರಂಭವಾಗಿದ್ದು, ಜಾನ್ಸನ್ ಎಸೆದ ಎರಡನೇ ಔವರ್ ನಿಂದ.
ಜಾನ್ಸನ್ ತಮ್ಮ ಮೊದಲ ಓವರ್ ನಲ್ಲಿ ಮೊದಲು 5 ರನ್ ಗಳಿಸಿದ್ದ ಫಾಫ್ ಡುಪ್ಲಸಿಸ್ ವಿಕೆಟ್ ಪಡೆದರು.
ನಂತರದ ಎಸೆತದಲ್ಲಿಯೇ ವಿರಾಟ್ ಕೊಹ್ಲಿ ಅವರನ್ನ ಗೋಲ್ಡನ್ ಡಕ್ ಮಾಡಿದರು.
ಇದೇ ಓವರ್ ನ ಕೊನೆಯ ಎಸೆತದಲ್ಲಿಯೇ ಅನೂಜ್ ರಾವತ್ ಅವರನ್ನ ಪೆವಿಲಿಯನ್ ಗೆ ಕಳುಹಿಸಿದರು.
ಇಲ್ಲಿಗೆ ಕೇವಲ 8 ರನ್ ಗಳಿಗೆ ಆರ್ ಸಿಬಿ ತಂಡ ಪ್ರಮುಖ ಬ್ಯಾಟರ್ ಗಳನ್ನು ಜಾನ್ಸನ್ ಔಟ್ ಮಾಡಿ ಹೈದರಾಬಾದ್ ತಂಡಕ್ಕೆ ಮೇಲು ಗೈ ತಂದುಕೊಟ್ಟರು.
ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದ ಯುವ ಬೌಲರ್, ಒಂದೇ ಓವರ್ ನಲ್ಲಿ ಮೂರು ವಿಕೆಟ್ ಪಡೆದಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ವಿಶ್ವದ ಶ್ರೇಷ್ಠ ಬ್ಯಾಟರ್ ಗಳಾದ ಫಾಫ್ ಡುಪ್ಲಸಿಸ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಬ್ಯಾಕ್ ಟು ಬ್ಯಾಕ್ ಔಟ್ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಈ ಪ್ರದರ್ಶನವನ್ನು ಹೀಗೆ ಮುಂದುವರೆಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ipl-2022-Stuff of dreams from Marco Jansen