IPL 2022 | ಐಪಿಎಲ್ ನಲ್ಲಿ ತಿಲಕ್ ವರ್ಮ ಹೊಸ ದಾಖಲೆ
ಮುಂಬೈ ಇಂಡಿಯನ್ಸ್ ಆಟಗಾರ ತಿಲಕ್ ವರ್ಮಾ ಐಪಿಎಲ್ ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 61 ರನ್ ಗಳಿಸಿದ್ದ ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಇಶಾನ್ ಕಿಶನ್ (19 ವರ್ಷ 278 ದಿನ) 2018ರ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 58 ರನ್ ಗಳಿಸಿದ್ದರು.
ಆದರೆ, ಐಪಿಎಲ್-2022ರ ಅಂಗವಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ (19 ವರ್ಷ 145 ದಿನ) ಕಿಶನ್ ದಾಖಲೆ ಮುರಿದಿದ್ದಾರೆ.
ಈ ಪಂದ್ಯದಲ್ಲಿ ತಿಲಕ್ ವರ್ಮಾ 33 ಎಸೆತಗಳಲ್ಲಿ 61 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿವೆ.
ಅದೇ ರೀತಿ ತಿಲಕ್ ವರ್ಮಾ ಐಪಿಎಲ್ ವೃತ್ತಿ ಜೀವನದ ಮೊದಲ ಅರ್ಧ ಶತಕ ದಾಖಲಿಸಿದರು.
ಐಪಿಎಲ್-2022 ಮೆಗಾ ಹರಾಜಿನಲ್ಲಿ ತಿಲಕ್ ವರ್ಮಾ ಅವರನ್ನು 70 ಲಕ್ಷ ರೂ.ಗೆ ಖರೀದಿಸಲಾಗಿದೆ. ipl-2022-tilak-varma-youngest-score-half-century-mi