ಮಿನಿ ಹರಾಜಿಗೆ ಡೇಟ್ ಫಿಕ್ಸ್… ಡಿಸೆಂಬರ್ ನಲ್ಲಿ ಬಿಡ್ಡಿಂಗ್…
2023 ರ IPL ಗಾಗಿ ಮಿನಿ ಹರಾಜು ಪ್ರಕ್ರಿಯೇ ಈ ವರ್ಷದ ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆ ಇದೆ. ಡಿಸೆಂಬರ್ 16 ಅತ್ಯಂತ ಸಂಭವನೀಯ ದಿನಾಂಕವಾಗಿದೆ. IPL ಪ್ರಾಥಮಿಕ ವೇಳಾ ಪಟ್ಟಿಯ ಬಗ್ಗೆ ಬಿಸಿಸಿಐ/ಐಪಿಎಲ್ ಆಡಳಿತದಿಂದ ಸುಳಿದು ಪಡೆದ ನಂತರ ಪ್ರಾಂಚೈಸಿಗಳು ಇತ್ತೀಚಿಗೆ ಅನೌಪಚಾರಿಕವಾಗಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಮಿನಿ ಹರಾಜಿಗೆ ಸ್ಥಳ ಇನ್ನೂ ನಿಗದಿಯಾಗಿಲ್ಲ. ಹರಾಜಿನಲ್ಲಿ ಪ್ರತಿ ತಂಡವು ಕನಿಷ್ಠ INR 5 ಕೋಟಿ ಬಂಡವಾಳದೊಂದಿಗೆ ಪ್ರಾರಂಬಿಸಬಹುದು. ಹಾರಾಜಿನ ಮಿತಿಯನ್ನ INR 95 ಕೋಟಿಗೆ ಹೆಚ್ಚಿಸಲಾಗಿದೆ, ಕಳೆದ ವರ್ಷಕ್ಕಿಂತ INR 5 ಕೋಟಿ ಹೆಚ್ಚಾಗಿದೆ. ಫ್ರ್ಯಾಂಚೈಸ್ ತನ್ನ ಆಟಗಾರರನ್ನ ಬಿಡುಗಡೆ ಮಾಡಿದರೆ, ಪರ್ಸ್ ಬ್ಯಾಲೆನ್ಸ್ ಇನ್ನೂ ದೊಡ್ಡದಾಗಲಿದೆ. ಬೆಳೆಯಬಹುದು.
ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಐಪಿಎಲ್‌ನ ಮುಂದಿನ ಆವೃತ್ತಿಯ ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದೆ ಮತ್ತು ಅದರ ಬಗ್ಗೆ ಫ್ರಾಂಚೈಸಿಗಳಿಗೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ IPL ಅಭಿಮಾನಿಗಳಿಗ ಸೌರವ್ ಗಂಗೂಲಿ ಗುಡ್ ನ್ಯೂಸ್ ನಿಡಿದ್ದು, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ ಐಪಿಎಲ್ ಈಗ ತನ್ನ ಹಳೆಯ ಸ್ವರೂಪಕ್ಕೆ ಅಂದರೆ ಹೋಮ್ – ವೇ ಸ್ವರೂಪಕ್ಕೆ ಮರಳಲಿದೆ ಎಂದಿದ್ದಾರೆ. ಈ ಮೂಲಕ ಎಲ್ಲಾ 10 ತಂಡಗಳು ತವರು ನೆಲದಲ್ಲಿ ಆಡುವ ಅವಕಾಶ ಪಡೆಯಲಿವೆ.