IPL 2023 : ಗಾಯದ ಕಾರಣಕ್ಕೆ ಲೀಗ್ ನಿಂದ ಹೊರಬಿದ್ದ CSK ಬೌಲರ್ ಮುಖೇಶ್ ಚೌಧರಿ…
IPL ಆರಂಭಕ್ಕೆ ಕ್ಷಣಗಣನೆ ಎದುರಾಗಿದ್ದು ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿದ್ದಾರೆ. ಲೀಗ್ ನ ಮೊದಲ ಪಂದ್ಯ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಆದರೇ ಟೂರ್ನಿ ಆರಂಭಕ್ಕೂ ಮುನ್ನ ಚೆನೈ ಗೆ ಕೊಂಚ ಹಿನ್ನಡೆಯುಂಟಾಗಿದೆ. ಸಿ ಎಸ್ ಕೆ ವೇಗದ ಬೌಲರ್ ಮುಖೇಶ್ ಚೌಧರಿ ಗಾಯದ ಕಾರಣದಿಂದಾಗಿ 2023 ರ ಐಪಿಎಲ್ ಋತುವಿನಿಂದ ಹೊರಗುಳಿದಿದ್ದಾರೆ. ಇವರ ಬದಲಿಗೆ ಎಡಗೈ ವೇಗಿ ಆಕಾಶ್ ಸಿಂಗ್ ಅವರನ್ನು ಸೇರಿಸಿಕೊಳ್ಳಲಾಗಿದೆ.
2020 ರಲ್ಲಿ ಭಾರತದ ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದ ಆಕಾಶ್ ಸಿಂಗ್ ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಎಡಗೈ ವೇಗಿ ಇದುವರೆಗೆ 9 ಲಿಸ್ಟ್ ಎ ಪಂದ್ಯಗಳು ಮತ್ತು ಐದು ಪ್ರಥಮ ದರ್ಜೆ ಪಂದ್ಯಗಳ ಜೊತೆಗೆ 9 ಟಿ 20 ಪಂದ್ಯಗಳನ್ನು ಆಡಿ ವಿರುದ್ಧ 31 ವಿಕೆಟ್‌ಗಳನ್ನ ಪಡೆದಿದ್ದಾರೆ. ಇದೀಗ ಚೆನೈಗೆ 20 ಲಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕಳೆದ ಋತುವಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿ 16 ವಿಕೆಟ್‌ಗಳನ್ನು ಕಬಳಿಸಿದ್ದ ಮುಕೇಶ್, ಬೆನ್ನು ನೋವಿನ ಗಾಯದಿಂದಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16 ನೇ ಆವೃತ್ತಿಯಿಂದ ಹೊರಗುಳಿದಿದ್ದಾರೆ.
26 ವರ್ಷದ ಮಹಾರಾಷ್ಟ್ರದ ವೇಗಿ ಕಳೆದ ಬಾರಿ CSK ಪರ ಅತುತ್ತಮ ವಿಕೆಟ್ ಟೇಕರ್ ಆಗಿದ್ದರು. ಕಳೆದ ಋತುವಿನ ಮೊದಲು ಹರಾಜಿನಲ್ಲಿ ಅವರನ್ನು ₹ 20 ಲಕ್ಷಕ್ಕೆ ಖರೀದಿಸಲಾತ್ತು. ಸಿ ಎಸ್ ಕೆ ಸಹ ಗಾಯದ ಕಾರಣದಿಂದ ಹಲವು ಆಟಗಾರರನ್ನ ಕಳೆದುಕೊಂಡಿದೆ. ಆಲ್ ರೌಂಡರ್ ಕೈಲ್ ಜೇಮಿಸನ್ ಸಹ ಗಾಯದಿಂದಾಗಿ ಹೊರಗುಳಿದಿದ್ದಾರೆ. ಅವರ ಜಾಗಕ್ಕೆ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಸಿಸಂದಾ ಮಗಾಲಾ ಅವರನ್ನು ಆಯ್ಕೆ ಮಾಡಲಾಗಿದೆ.
IPL 2023: CSK bowler Mukesh Chaudhary out of the league due to injury…