IPL 2023: ಕೋಟಿ ಕೋಟಿ ಲೂಟಿ ಹೊಡೆದ ಇಂಗ್ಲೆಂಡ್ ಆಟಗಾರರು….
ಐಪಿಎಲ್ 2023 ಕ್ಕಾಗಿ ನಡೆದ ಮಿನಿ ಹರಾಜಿನಲ್ಲಿ ಫ್ರಾಂಚೈಸಿಗಳು T20 ಚಾಂಪಿಯನ್ ತಂಡದ ಇಂಗ್ಲೆಂಡ್ ಆಟಗಾರರ ಮೇಲೆ ಹೆಚ್ಚಿನ ಗಮನ ಹರಿಸಿವೆ. ಅದಕ್ಕೆ ತಕ್ಕಂತೆ ಇಂಗ್ಲೆಂಡ್ ಆಟಗಾರರು ಕೋಟಿ ಕೋಟಿ ಹಣವನ್ನ ಲೂಟಿ ಹೊಡೆದಿದ್ದಾರೆ. ಇಂಗ್ಲೆಂಡ್ ನ 8 ಆಟಗಾರರು ಸೇರಿಕೊಂಡು 58 ಕೋಟಿ ಯನ್ನ ಕಬಳಿಸಕೊಂಡಿದ್ದಾರೆ. ಈ ಪೈಕಿ ಮೂವರು ಆಟಗಾರರು 48 ಕೋಟಿಯನ್ನ ಕಮಾಯಿಸಿದ್ದಾರೆ.
ಇಂಗ್ಲೆಂಡ್ನ ಆಲ್ರೌಂಡರ್ ಸ್ಯಾಮ್ ಕರನ್ 18.50 ಕೋಟಿಗೆ ಬಿಕರಿಯಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ರಂತಹ ಆಟಗಾರರನ್ನ ಹಿಂದಿಕ್ಕಿದ್ದಾರೆ. ಸ್ಯಾಮ್ ಕರನ್ ಹೊರತುಪಡಿಸಿ, ಬೆನ್ ಸ್ಟೋಕ್ಸ್ 16.25 ಮತ್ತು ಹ್ಯಾರಿ ಬ್ರೂಕ್ 13.25 ಕೋಟಿಯನ್ನ ಕ್ಯಾಚ ಹಾಕಿಕೊಂಡಿದ್ದಾರೆ. ಹರಾಜಿನಲ್ಲಿ ಖರೀದಿಯಾದ 29 ವಿದೇಶಿ ಆಟಗಾರರಿಗೆ ಫ್ರಾಂಚೈಸಿ ಖರ್ಚು ಮಾಡಿದ ಒಟ್ಟು ಹಣ 125.5 ಕೋಟಿ ರೂ…
ಸ್ಯಾಮ್ ಕರಣ್, ಬೆನ್ ಸ್ಟೋಕ್ಸ್ ಮತ್ತು ಹ್ಯಾರಿ ಬ್ರೂಕ್ ಅಷ್ಟೇ ಅಲ್ಲದೇ ಇಂಗ್ಲೆಂಡಿನ ಇನ್ನೂ ಐವರು ಆಟಗಾರರು ಕೋಟಿ ಕುಳಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಜೋ ರೂಟ್ ಅವರನ್ನ ರಾಜಸ್ಥಾನ್ ರಾಯಲ್ಸ್ 1 ಕೋಟಿಗೆ ಖರೀಸಿತು. ಫಿಲ್ ಸಾಲ್ಟ್ 2 ಕೋಟಿ ರೂ ಗೆ ದೆಹಲಿ ಪಾಲಾದ್ರೂ, ರೀಸ್ ಟೋಪ್ಲಿ 1.9 ಕೋಟಿ ಮತ್ತು ವಿಲ್ ಜಾಕ್ವೆಸ್ 3.2 ಕೋಟಿ ರೂ.ಗೆ ಆರ್ಸಿಬಿ ಫ್ಯಾಮಿಲಿ ಸೇರಿಕೊಂಡಿದ್ದಾರೆ. ಆದಿಲ್ ರಶೀದ್ ಅವರನ್ನು ಹೈದರಾಬಾದ್ ಆರ್ಮಿ 2 ಕೋಟಿಗೆ ಖರೀದಿಸಿತು.
ಸ್ಯಾಮ್ ಕರನ್ ಪಂಜಾಬ್ ತಂಡದ ಬೊಕ್ಕಸವನ್ನ ಖರ್ಚು ಮಾಡಿಸಿದ್ರೆ, 17.50 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಗೆ ಮಣೆ ಹಾಕಿತು. ಸ್ಯಾಮ್ ಕರನ್ ಸಹೋದ್ಯೋಗಿ ಬೆನ್ ಸ್ಟೋಕ್ 16.25 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ವನ್ನ ಕೂಡಿಕೊಂಡಿದ್ದಾರೆ. ಈತ ಡ್ವೇನ್ ಬ್ರಾವೋ ಸ್ಥಾನವನ್ನ ತುಂಬ ಬೇಕಿದೆ.
IPL 2023 : Sam Curran Ben Stokes And Harry Brooks Total 48 Crore In Ipl Auction