IPL 2023 ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ ಮನ್ನಣೆ ಹೆಚ್ಚು..??
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ ಜಾಕ್ ಪಾಟ್ ಹೊಡೆದಿದೆ. ಅದರಲ್ಲೂ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಆಟಗಾರರಿಗೆ ಭಾರಿ ಬೇಡಿಕೆ ಇತ್ತು.
ಹರಾಜಿನಲ್ಲಿ ವಿದೇಶಿ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಮುಗಿಬಿದ್ದವು. ಹರಾಜಿನಲ್ಲಿ ದೇಸಿ ಆಟಗಾರರಿಗಿಂತ ವಿದೇಶಿ ಆಟಗಾರರಿಗೆ ಡಿಮ್ಯಾಂಡ್ ಇತ್ತು.
ಫ್ರಾಂಚೈಸಿಗಳು ವಿದೇಶಿ ಆಟಗಾರರನ್ನು ಖರೀದಿಸಲು 125.05 ಕೋಟಿ ರೂ. ಖರ್ಚು ಮಾಡಿವೆ. ದೇಸಿ ಆಟಗಾರರನ್ನು ಖರೀದಿಸಲು 41.95 ಕೋಟಿ ರೂ. ಖರ್ಚು ಮಾಡಿವೆ.
62.95 ಕೋಟಿ ರೂ. ಕೊಟ್ಟು ಫ್ರಾಂಚೈಸಿಗಳು ವಿದೇಶಿ ಆಲ್ರೌಂಡರ್ಗಳನ್ನು ಖರೀದಿ ಮಾಡಿವೆ. ಭಾರತದ ಆಲ್ರೌಂಡರ್ಗಳಿಗೆ 8 ಕೋಟಿ ರೂ. ವೆಚ್ಚ ಮಾಡಿವೆ.
ವಿದೇಶಿ ಬ್ಯಾಟರ್ಗಳನ್ನು ಖರೀದಿ ಮಾಡಲು 24.05 ಕೋಟಿ ಖರ್ಚು ಮಾಡಿವೆ. 12.45 ಕೋಟಿ ರೂ. ಹಣವನ್ನು ದೇಸಿ ಬ್ಯಾಟರ್ಗಳನ್ನು ಖರೀದಿಸಿವೆ.
ವಿದೇಶಿ ಬೌಲರ್ಗಳಿಗೆ 13.8 ಕೋಟಿ ಖರ್ಚು ಮಾಡಲಾಗಿದೆ. ದೇಸಿ ಬೌಲರ್ಸ್ಗಳಿಗೆ 18.35 ಕೋಟಿ ಖರ್ಚು ಮಾಡಲಾಗಿದೆ. ವಿಕೆಟ್ ಕೀಪರ್ಗಳಿಗೆ 24.25 ಕೋಟಿ ರೂ. ದೇಸಿ ವಿಕೆಟ್ ಕೀಪರ್ಗಳಿಗೆ 3.15 ಕೋಟಿ ರೂ. ಖರ್ಚು ಮಾಡಲಾಗಿದೆ.