IPL Auction Live : ಆಸೀಸ್ ವೇಗಿ 14 ಕೋಟಿ ಕೊಟ್ಟ ಪಂಜಾಬ್
ಚೆನ್ನೈ : 14ನೇ ಆವೃತ್ತಿಯ ಐಪಿಎಲ್ ಗಾಗಿ ಹರಾಜು ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು ,ಫ್ರಾಂಚೈಸಿಗಳು ಪಕ್ಕಾ ಲೆಕ್ಕಾಚಾರ ಹಾಕಿ ಆಟಗಾರರ ಖರೀದಿಗೆ ಮುಂದಾಗಿದ್ದಾರೆ. ಆಶ್ಚರ್ಯ ಎಂಬಂತೆ ಆಸೀಸ್ ನ ಯುವ ರೈಟ್ ಹ್ಯಾಂಡ್ ಫಾಸ್ಟ್ ಬೌಲರ್ ಜೆಯ್ ರಿಚರ್ಡ್ ಸನ್ ಗೆ ಪಂಜಾಬ್ ತಂಡ 14 ಕೋಟಿ ನೀಡಿ ಖರೀದಿ ಮಾಡಿದೆ. ರಿಚರ್ಡ್ ಸನ್ ಬಿಬಿಎಲ್ ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಆಸೀಸ್ ಪರ 9 ಟಿ 20 ಪಂದ್ಯಗಳನ್ನಾಡಿರುವ ರಿಚರ್ಡ್ ಸನ್ 9 ವಿಕೆಟ್ ಕಬಳಿಸಿದ್ದಾರೆ.
ಇನ್ನು ಹರಾಜಿನಲ್ಲಿ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ 2.40 ಕೋಟಿಗೆ ಮುಂಬೈ ತಂಡ ಸೇರಿದ್ದಾರೆ.
ಹರಾಜಿನಲ್ಲಿ ಟೀಂ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಅನ್ ಸೋಲ್ಡ್ ಆಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಜ್ಜಿ ಟೂರ್ನಿ ಹೊರಬಿದ್ದಂತಾಗಿದೆ. ಇನ್ನು ವೇಗಿ ಉಮೇಶ್ ಯಾದವ್ ಡೆಲ್ಲಿ ತಂಡಕ್ಕೆ ಒಂದು ಕೋಟಿಗೆ ಸೇಲ್ ಆಗಿದ್ದಾರೆ.
ನಾಥನ್ ಕೌಲ್ಟರ್-ನೈಲ್ ಅವರನ್ನು ಮುಂಬೈ ತಂಡ ಐದು ಕೋಟಿಗೆ ಖರೀದಿ ಮಾಡಿದೆ. ಇನ್ನು ವೆಸ್ಟ್ ಇಂಡೀಸ್ ನ ಸೆಲ್ಯೋಟ್ ಬೌಲರ್ ಕಾಟ್ರೆಲ್ ಅನ್ ಸೋಲ್ಡ್ ಆಗಿದ್ದಾರೆ.
ಇನ್ನು ನ್ಯೂಜಿಲೆಂಡ್ ವೇಗಿ ಆಡಂ ಮಿಲಾನ್ ಮುಂಬೈ ತಂಡ ಸೇರಿದ್ದಾರೆ, ಅವರಿಗೆ 3.2 ಕೋಟಿ ಕೊಟ್ಟ ಮುಂಬೈ ಖರೀದಿ ಮಾಡಿದೆ. ಇನ್ನು ಬಾಂಗ್ಲಾ ವೇಗಿ ಮುಸ್ತಾಫಿಜುರ್ ರಹಮಾನ್ ಗೆ ಆರ್ ಆರ್ ತಂಡ 1 ಕೋಟಿ ಕೊಟ್ಟು ಖರೀದಿ ಮಾಡಿದೆ. ಇದಕ್ಕೂ ಮುನ್ನ ಕುಶಾಲ್ ಪೆರೇರಾ, ಕ್ಯಾರಿ, ಸ್ಯಾಮ್ ಬಿಲ್ಲಿಂಗ್ಸ್ ಅನ್ ಸೋಲ್ಡ್ ಆಗಿದ್ದಾರೆ.
ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಡೆವಿಡ್ ಮಲನ್ ಕೇವಲ ಒಂದು 1.50 ಕೋಟಿಗೆ ಪಂಜಾಬ್ ತಂಡವನ್ನ ಸೇರಿಕೊಂಡಿದ್ದಾರೆ.
ಇನ್ನ ಕಳೆದ ವರ್ಷ ಆರ್ ಸಿಬಿ ಪರ ಆಡಿದ್ದ ಕ್ರಿಸ್ ಮೋರಿಸ್ ದಾಖಲೆ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಅವರು 16.25 ಕೋಟಿಗೆ ಆರ್ ಆರ್ ಬಳಗ ಸೇರಿದ್ದಾರೆ.
ಶಿವಂ ದುಬೆ ರಾಜಸ್ಥಾನ ತೆಕ್ಕೆಗೆ ಸೇರಿದ್ದಾರೆ. ಅವರಿಗೆ 4 ಕೋಟಿ ಕೊಟ್ಟ ಆರ್ ಆರ್ ಖರೀದಿ ಮಾಡಿದೆ.
ಇಂಗ್ಲೆಂಡ್ ತಂಡ ಸ್ಟಾರ್ ಆಟಗಾರ ಮೊಯೀನ್ ಅಲಿ ಚೆನ್ನೈ ತಂಡಕ್ಕೆ ಸೇಲ್ ಆಗಿದ್ದಾರೆ. ಅವರಿಗೆ ಚೆನ್ನೈ 7 ಕೋಟಿ ನೀಡಿದೆ.
ಬಾಂಗ್ಲಾ ಆಲ್ ರೌಂಡರ್ ಶಖೀಬ್ ಅಲ್ ಹಸನ್ ಕೆಕೆಆರ್ ತಂಡಕ್ಕೆ ಮರಳಿದ್ದಾರೆ. ಇತ್ತ ಕಳೆದ ಐಪಿಎಲ್ ನಲ್ಲಿ ಠುಸ್ ಆಗಿದ್ದ ಕೇಧಾರ್ ಜಾಧವ್ ಅಲ್ ಸೋಲ್ಡ್ ಆಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಸೀಸ್ ಆಲ್ ರೌಂಡರ್ ಮ್ಯಾಕ್ಸ್ ವೆಲ್ ಗೆ14.25 ಕೋಟಿ ಕೊಟ್ಟು ಖರೀದಿ ಮಾಡಿದೆ.
ಮ್ಯಾಕ್ಸಿಗಾಗಿ ಆರ್ ಸಿಬಿ ಕೆಕೆ ಆರ್ ಚೆನ್ನೈ ಭಾರಿ ಪೈಪೋಟಿ ನಡೆಸಿದವು. ಕೊನೆಗೆ ಆರ್ ಸಿಬಿ 14.25 ಕೋಟಿಗೆ ಮ್ಯಾಕ್ಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ
ಕನ್ನಡಿಗ ಕರುಣ್ ನಾಯರ್ ಅನ್ ಸೋಲ್ಡ್ ಆಗಿದ್ದಾರೆ. ಸ್ಟೀವ್ ಸ್ಮಿತ್ 2.2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಗೆ ಸೇಲ್ ಆಗಿದ್ದಾರೆ.
ಅಲೆಕ್ಸ್ ಹಾಲ್ಸ್ ಅನ್ ಸೋಲ್ಡ್ ಆಗಿದ್ದಾರೆ.
ಜಾಸನ್ ರೋಯ್ ಕೂಡ ಅನ್ ಸೋಲ್ಡ್ ಆಗಿದ್ದಾರೆ.
ಆರೋನ್ ಫಿಂಚ್ ಅನ್ ಸೋಲ್ಡ್ ಆಗಿದ್ದಾರೆ.
ಹನುಮ ವಿಹಾರಿ ಅನ್ ಸೋಲ್ಡ್ ಆಗಿದ್ದಾರೆ.