ಚಾಂಪಿಯನ್ ತಂಡಗಳ ಗುದ್ದಾಟದಲ್ಲಿ ಗೆಲ್ಲೋರು ಯಾರು..?
Fantasy Cricket Tips
ಬೆಂಗಳೂರು : ಈ ಬಾರಿಯ ಐಪಿಎಲ್ 27ನೇ ಪಂದ್ಯದಲ್ಲಿ ಚಾಂಪಿಯನ್ ತಂಡಗಳು ಗುದ್ದಾಡಲಿವೆ. ಐಪಿಎಲ್ ನ ಮೋಸ್ಟ್ ಸಕ್ಸಸ್ ಫುಲ್ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದು ಮುಖಾಮುಖಿಯಾಗಲಿವೆ.
ಹೆಡ್ ಟು ಹೆಡ್
ಐಪಿಎಲ್ ನಲ್ಲಿ ಈವರೆಗೂ ಈ ಎರಡೂ ತಂಡಗಳು 30 ಬಾರಿ ಮುಖಾಮುಖಿಯಾಗಿದ್ದು, ಮುಂಬೈ ಮೇಲುಗೈ ಸಾಧಿಸಿದೆ. ಅಂಬಾನಿ ಹುಡುಗರು 18 ಬಾರಿ ಗೆದ್ದು ಬೀಗಿದ್ರೆ, ಚೆನ್ನೈ 12 ಬಾರಿ ಮುಂಬೈ ತಂಡವನ್ನ ಮಣಿಸಿದೆ.
ಗ್ರೌಂಡ್ ರಿಪೋರ್ಟ್
ಇಂದಿನ ಪಂದ್ಯ ದೆಹಲಿ ಮೈದಾನದಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಈವರೆಗೂ ನಡೆದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಗೆ ಹೆಚ್ಚು ಅನುಕೂಲವಾಗಿರೋದನ್ನ ನಾವು ಗಮನಿಸಬಹುದು. ಮೊದಲು ಬ್ಯಾಟಿಂಗ್ ಮಾಡಿದವರು 170 ರನ್ ಗಳಿಸಿದರೂ ಕೂಡ ಚೇಸಿಂಗ್ ಮಾಡುವ ತಂಡ ಗೆಲ್ಲುವ ಸಾಧ್ಯತೆಗಳಿವೆ. ಆದ್ದರಿಂದ ಟಾಸ್ ಗೆದ್ದ ಟೀಂ ಚೇಸಿಂಗ್ ಮಾಡುವ ಅವಕಾಶಗಳು ಹೆಚ್ಚಿವೆ.
ಬಲಾಬಲಗಳೇನು..?
ಚೆನ್ನೈ ತಂಡ ತುಂಬಾ ಸ್ಟ್ರಾಂಗ್ ಆಗಿ ಕಾಣುತ್ತಿದೆ. ಮೊದಲ ಮ್ಯಾಚ್ ಸೋತ ಬಳಿಕ ಸತತ ಐದು ಮ್ಯಾಚ್ ಗಳಲ್ಲಿ ಗೆಲುವು ಸಾಧಿಸಿ ಮುನ್ನುಗ್ಗುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ತಂಡ ಸಾಲಿಡ್ ಆಗಿದೆ.
ಮುಂಬೈ ತಂಡ ಈ ಬಾರಿ ಮೊದಲಿನಂತೆ ಕಾಣುತ್ತಿಲ್ಲ. ಚೆನ್ನೈ ಪಿಚ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದೆ. ಆದ್ರೆ ಕಳೆದ ಪಂದ್ಯದಲ್ಲಿ ಡಿ ಕಾಕ್, ಕೃನಾಲ್, ಪೋಲಾರ್ಡ್, ರೋಹಿತ್ ಪಾರ್ಮ್ ಗೆ ಬಂದಿರೋದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಆದ್ರೆ ಸೂರ್ಯಕುಮಾರ್ ಅವರಿಂದ ದೊಡ್ಡ ಇನ್ನಿಂಗ್ಸ್ ಬಾಕಿ ಇದೆ. ಇದು ಬಿಟ್ಟರೇ ಬೌಲಿಂಗ್ ನಲ್ಲಿ ತಂಡ ತುಂಬಾ ಸ್ಟ್ರಾಂಗ್ ಆಗಿದೆ. ಒಟ್ಟಾರೆ ತಂಡದಲ್ಲಿ ಸ್ವಲ್ಪ ಸಮಸ್ಯೆ ಇದ್ದರೂ ತಂಡ ಉತ್ತಮವಾಗಿಯೇ ಇದೆ.
ಸಂಭಾವ್ಯ ತಂಡ
ಮುಂಬೈ : ಡಿ ಕಾಕ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶಾನ್, ಹಾರ್ಧಿಕ್ ಪಾಂಡ್ಯ, ಪೋಲಾರ್ಡ್, ಕೃನಾಲ್, ಕೋಲ್ಟರ್ ನೈಲ್, ಟ್ರೆಂಟ್ ಬೋಲ್ಟ್, ರಾಹುಲ್ ಚಹಾರ್, ಬೂಮ್ರಾ.
ಚೆನ್ನೈ : ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲಸಿಸ್, ಮೋಯಿನ್ ಅಲಿ, ಸುರೇಶ್ ರೈನಾ, ರಾಯುಡು, ಧೋನಿ, ಜಡೇಜಾ, ಸ್ಯಾಮ್ ಕರನ್, ಶರ್ದೂಲ್ ಠಾಕೂರ್, ದೀಪಕ್ ಚಹಾರ್, ತಾಹಿರ್
ಫ್ಯಾಂಟಸಿ ಪಿಕ್ಸ್
ವಿಕೆಟ್ ಕೀಪರ್ : ಡಿ ಕಾಕ್
ಬ್ಯಾಟ್ಸ್ ಮೆನ್ : ಫಾಫ್ ಡುಪ್ಲಸೀಸ್ ( ನಾಯಕ ) , ರೋಹಿತ್ ಶಮಾ, ಸೂರ್ಯ ಕುಮಾರ್, ಗಾಯಕ್ವಾಡ್
ಆಲ್ ರೌಂಡರ್ : ರವೀಂದ್ರ ಜಡೇಜಾ, ಪೋಲಾರ್ಡ್, ಮೋಯಿನ್ ಅಲಿ ( ಉಪನಾಯಕ)
ಬೌಲರ್ : ರಾಹುಲ್ ಚಹಾರ್, ಬೂಮ್ರಾ, ದೀಪಕ್ ಚಹಾರ್










