ಐಪಿಎಲ್ 2021- ಪಂಜಾಬ್ ಕಿಂಗ್ಸ್ ಗೆ ಸೋಲುಣಿಸಿದ ಕೆಕೆಆರ್

1 min read
Eion morgan kkr ipl 2021 saakshatv

ಐಪಿಎಲ್ 2021- ಪಂಜಾಬ್ ಕಿಂಗ್ಸ್ ಗೆ ಸೋಲುಣಿಸಿದ ಕೆಕೆಆರ್
rahul tripati kkr ipl 2021 saakshatvಪ್ರಸಿದ್ಧ್ ಕೃಷ್ಣ, ಪ್ಯಾಟ್ ಕಮಿನ್ಸ್ ಮತ್ತು ಸುನೀಲ್ ನರೇನ್ ಅವರ ಮಾರಕ ಬೌಲಿಂಗ್ ದಾಳಿಯ ನೆರವನ್ನು ಪಡೆದ ಕೆಕೆಆರ್ ತಂಡ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 21ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಐದು ವಿಕೆಟ್ ಗಳಿಂದ ಪರಾಭವಗೊಳಿಸಿತ್ತು.
ಈ ಮೂಲಕ ಕೆಕೆಆರ್ ತಂಡ ಟೂರ್ನಿಯಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದ್ರೆ, ಪಂಜಾಬ್ ಕಿಂಗ್ಸ್ ನಾಲ್ಕನೇ ಸೋಲು ಅನುಭವಿಸಿದೆ.
ಅಹಮದಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ ಗೆಲ್ಲಲು 123 ರನ್ ಗಳ ಸವಾಲಿಗೆ ಪ್ರತ್ಯುತ್ತರವಾಗಿ ಐದು ವಿಕೆಟ್ ಕಳೆದುಕೊಂಡು 16.4 ಓವರ್ ಗಳಲ್ಲಿ 126 ರನ್ ದಾಖಲಿಸಿ ಗೆಲುವಿನ ನಗೆ ಬೀರಿತ್ತು.
ಕೆಕೆಆರ್ ತಂಡದ ಪರ ರಾಹುಲ್ ತ್ರಿಪಾಠಿ 41 ರನ್ ದಾಖಲಿಸಿದ್ರೆ, ನಾಯಕನ ಆಟವನ್ನಾಡಿದ ಇಯಾನ್ ಮೊರ್ಗಾನ್ ಅಜೇಯ 47 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು.
ಇನ್ನುಳಿದಂತೆ ಶುಬ್ಮನ್ ಗಿಲ್ 9 ರನ್ ಗಳಿಸಿದ್ರೆ, ನಿತೀಶ್ ರಾಣಾ ಶೂನ್ಯ ಸುತ್ತಿದ್ರು. ಹಾಗೇ ಸುನೀಲ್ ನರೇನ್ ಶೂನ್ಯ ಸುತ್ತಿದ್ರೆ, ಆಂಡ್ರೆ ರಸೇಲ್ ಹೋರಾಟ 10 ರನ್ ಗೆ ಸೀಮಿತವಾಯ್ತು. ದಿನೇಶ್ ಕಾರ್ತಿಕ್ ಅಜೇಯ 10 ರನ್ ಗಳಿಸಿದ್ರು.
prasiddh krishna saakshatv ipl 2021 kkrಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತ್ತು. ತಂಡದ ಪರ ಮಯಾಂಕ್ ಅಗರ್ ವಾಲ್ 31 ರನ್ ಹಾಗೂ ಕ್ರಿಸ್ ಜೋರ್ಡಾನ್ 30 ರನ್ ದಾಖಲಿಸಿದ್ರು. ನಾಯಕ ರಾಹುಲ್, ಕ್ರಿಸ್ ಗೇಲ್, ದೀಪಕ್ ಹೂಡಾ, ನಿಕೊಲಾಸ್ ಪೂರನ್ ನಿರಾಸೆ ಮೂಡಿಸಿದ್ರು.
ಕೆಕೆಆರ್ ತಂಡದ ಪರ ಪ್ಯಾಟ್ ಕಮಿನ್ಸ್ ಮತ್ತು ಸುನೀಲ್ ನರೇನ್ ತಲಾ ಎರಡು ವಿಕೆಟ್ ಉರುಳಿಸಿದ್ರೆ, ಪ್ರಸಿದ್ಧ್ ಕೃಷ್ಣ ಮೂರು ವಿಕೆಟ್ ಕಬಳಿಸಿದ್ರು. ಕೆಕೆಆರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಯಾನ್ ಮೊರ್ಗಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd