IPL Mini Bidding 2023 : ಕೊಚ್ಚಿಯಲ್ಲಿ ಮಿನಿ ಐಪಿಎಲ್ ಹರಾಜಿಗೆ ವೇದಿಕೆ ಸಜ್ಜು..!!
ಬಹುನಿರೀಕ್ಷಿತಾ 2023ರ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಶುಕ್ರವಾರ ಕೊಚ್ಚಿಯಲ್ಲಿ ನಡೆಯಲಿದೆ.
16ನೇ ಆವೃತ್ತಿಯಲ್ಲಿ ಬಲಿಷ್ಠ ತಂಡ ಆಯ್ಕೆ ಮಾಡಲು ಎಲ್ಲಾ 10 ಫ್ರಾಂಚೈಸಿಗಳು ಸಜ್ಜಾಗಿವೆ. ಎಲ್ಲಾ ತಂಡಗಳು 25 ಆಟಗಾರರನ್ನು ಆಯ್ಕೆ ಮಾಡಲಿವೆ.
405 ಆಟಗಾರರು ಹರಾಜಿಗೆ ಬರಲಿದ್ದು 273 ಭಾರತೀಯ ಆಟಗಾರರು, 132 ಆಟಗಾರರು ಸೇರಿದಂತೆ ನಾಲ್ಕು ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಒಳಗೊಂಡಿದ್ದಾರೆ.
ಇದರಲ್ಲಿ 119 ಕ್ಯಾಪ್ಡ್ ಪ್ಲೇಯರ್ಸ್ ಮತ್ತು 296 ಅನಕ್ಯಾಪ್ಡ್ ಆಟಗಾರರಿದ್ದಾರೆ. ಎಲ್ಲಾ 10 ಫ್ರಾಂಚೈಸಿಗಳಿಗೆ ಒಟ್ಟು 87 ಸ್ಥಾನಗಳು ಇವೆ. ಇದರಲ್ಲಿ 30 ಸ್ಥಾನಗಳನ್ನು ವಿದೇಶಿ ಆಟಗಾರರು ತುಂಬಲಿದ್ದಾರೆ.
ಈ ಬಾರಿಯ ಹರಾಜಿನಲ್ಲಿ ಅಫ್ಘಾನಿಸ್ತಾನ ದ ಆಫ್ ಸ್ಪಿನ್ನರ್ ಅಲ್ಲಾ ಮೊಹ್ಮದ್ ಘಜಾನ್ ಫರ್ ಅತಿ ಕಿರಿಯ ಆಟಗಾರರಾಗಿದ್ದಾರೆ.
40 ವರ್ಷದ ಅಮಿತ್ ಮಿಶ್ರಾ ಐಪಿಎಲ್ ಆಡುತ್ತಿರುವ ಅತಿ ಹಿರಿಯ ಆಟಗಾರರಾಗಿದ್ದಾರೆ.
ಎಲ್ಲಾ 10 ಫ್ರಾಂಚೈಸಿಗಳು ಹರಾಜಿನಲ್ಲಿ 174.3 ಕೋಟಿ ರೂ. ಹಣವನ್ನು ಖರ್ಚು ಮಾಡಬಹುದಾಗದೆ. ಸನರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ಅತಿ ಹೆಚ್ಚು ಹಣ ಉಳಿಸಿಕೊಡಿದೆ. ಕೋಲ್ಕತ್ತಾ ಬಳಿ ಕಡಿಮೆ ಹಣವಿದೆ.