ADVERTISEMENT
Thursday, December 11, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸೆಪ್ಟೆಂಬರ್ ನಲ್ಲಿ ಐಪಿಎಲ್ ಪಾರ್ಟ್-2 

Mahesh M Dhandu by Mahesh M Dhandu
May 22, 2021
in Newsbeat, Sports, ಕ್ರೀಡೆ
IPL Auction
Share on FacebookShare on TwitterShare on WhatsappShare on Telegram

ಸೆಪ್ಟೆಂಬರ್ ನಲ್ಲಿ ಐಪಿಎಲ್ ಪಾರ್ಟ್-2

ಕೊರೊನಾದಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ ದ್ವಿತೀಯಾರ್ಧ ಯಾವಾಗ..? ಹೇಗೆ..? ನಡೆಯುತ್ತೆ ಅನ್ನೋದನ್ನ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಜಾತಕಪಕ್ಷಿಗಳಿಂತೆ ಕಾದುಕುಳಿತಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಇನ್ನೂ 31 ಪಂದ್ಯಗಳು ಉಳಿದುಕೊಂಡಿದ್ದು, ಈ ಮ್ಯಾಚ್ ಗಳನ್ನ ಯಾವಾಗ ಆಡಿಸಬೇಕು ಎಂದು ಬಿಸಿಸಿಐ ಮಂಥನ ಮಾಡುತ್ತಿದೆ. ಹೇಗಾದರೂ ಒಂದು ರೀತಿಯಲ್ಲಿ ಇನ್ನುಳಿದ ಐಪಿಎಲ್ ಪಂದ್ಯಗಳನ್ನ ಆಡಿಸಬೇಕು ಎಂದು ಬಿಸಿಸಿಐ ಪ್ರಯತ್ನಗಳನ್ನು ನಡೆಸುತ್ತಿದೆ.

Related posts

RCB ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

RCB ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

December 11, 2025
ಕರ್ನಾಟಕ ಭೂ ಕಂದಾಯ ಕಾಯ್ದೆ 1964: ಪ್ರಮುಖ ತಿದ್ದುಪಡಿ ಮಂಡನೆಗೆ ರಾಜ್ಯ ಸರ್ಕಾರ ಸಜ್ಜು

ಕರ್ನಾಟಕ ಭೂ ಕಂದಾಯ ಕಾಯ್ದೆ 1964: ಪ್ರಮುಖ ತಿದ್ದುಪಡಿ ಮಂಡನೆಗೆ ರಾಜ್ಯ ಸರ್ಕಾರ ಸಜ್ಜು

December 11, 2025

ಹಾಗಾದ್ರೆ ಬಿಸಿಸಿಐಗೆ ಇರುವ ಆಯ್ಕೆಗಳೇನು ಅಂತ ನೋಡೊದಾದ್ರೆ.. ಅದಕ್ಕೆ ಸಿಗೋ ಉತ್ತರ ಸೆಪ್ಟೆಂಬರ್..!! ಯಾಕೆಂದ್ರೆ ಈ ಬಾರಿಯ ಟಿ 20 ವಿಶ್ವಕಪ್ ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ನಲ್ಲಿ ಐಪಿಎಲ್ ನಡೆದರೇ ಸೂಕ್ತ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಐಪಿಎಲ್ ಸೆಪ್ಟೆಂಬರ್ ನಲ್ಲಿ ನಡೆದರೇ ಆಗ ಅಂತರಾಷ್ಟ್ರೀಯ ಪಂದ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿರುವ ಕಾರಣ ಎಲ್ಲಾ ಸ್ಟಾರ್ ಆಟಗಾರರು ಟೂರ್ನಿಗೆ ಲಭ್ಯವಾಗಲಿದ್ದಾರೆ.

IPL

ಒಂದು ವೇಳೆ ಏನಾದರೂ ನವೆಂಬರ್ – ಡಿಸೆಂಬರ್ ನಲ್ಲಿ ಐಪಿಎಲ್ ನಡೆದರೇ ಆಗ ಸಾಕಷ್ಟು ಆಟಗಾರರು ಐಪಿಎಲ್ ನಿಂದ ದೂರ ಉಳಿಯಬೇಕಾಗುತ್ತಿದೆ. ನವೆಂಬರ್ ನಲ್ಲಿ ಸಾಕಷ್ಟು ಅಂತರಾಷ್ಟ್ರೀಯ ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಸೆಪ್ಟೆಂಬರ್ ನಲ್ಲಿ ಐಪಿಎಲ್ ನಡೆಸುವ ಯೋಚನೆಯಲ್ಲಿದೆ ಎಂದು ಹೇಳಲಾಗುತ್ತಿದೆ.

ಆದ್ರೆ ಸೆಪ್ಟೆಂಬರ್ ನಲ್ಲಿ ಐಪಿಎಲ್ ನಡೆಸಬೇಕಾದ್ರೆ ಕನಿಷ್ಠ ಮೂರು ವಾರಗಳ ವಿಂಡೋ ಬೇಕಾಗುತ್ತದೆ. ಆದ್ರೆ ಅಷ್ಟು ಕಾಲಾವಧಿ ನಮಗೆ ದೊರಕುತ್ತಾ ಅನ್ನೋದು ಈಗ ಪ್ರಶ್ನೆಯಾಗಿದೆ. ಯಾಕೆಂದ್ರೆ ಸೆಪ್ಟೆಂಬರ್ 14ರವರೆಗೂ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸೆಣಸಾಡಲಿದೆ. ಈ ಅವಧಿಯಲ್ಲಿ ಐಪಿಎಲ್ ನಡೆಸಬೇಕಾದರೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಪಂದ್ಯಗಳನ್ನು ಕಡಿತಗೊಳಿಸಬೇಕು. ಒಂದು ವೇಳೆ ಏನಾದ್ರೂ ಸೆಪ್ಟೆಂಬರ್ ನ ಮೊದಲ ವಾರದಲ್ಲಿ ಇಂಗ್ಲೆಂಡ್ ಟೂರ್ ಮುಗಿದ್ರೆ ಇನ್ನುಳಿದ ಮೂರು ವಾರದಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ಆಯೋಜಿಸಬಹುದು ಅನ್ನೋದು ಬಿಸಿಸಿಐ ಲೆಕ್ಕಾಚಾರವಾಗಿದೆ. ಇದೇ ಕಾರಣಕ್ಕಾಗಿ ಬಿಸಿಸಿಐ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಗೆ ಒಂದು ಮನವಿಯನ್ನೂ ಸಹ ಮಾಡಿಕೊಂಡಿದೆ. ಈ ಮನವಿಯಲ್ಲಿ ಮುಖ್ಯವಾಗಿ ಇಂಡೋ ಆಂಗ್ಲೋ ಟೆಸ್ಟ್ ಸರಣಿಯನ್ನು ಆದಷ್ಟು ಬೇಗ ಆಡಸಬೇಕು ಅಂದ್ರೆ ಜುಲೈ ತಿಂಗಳ ಎರಡನೇ ವಾರದಲ್ಲಿ ಸರಣಿ ಆರಂಭಿಸುವ ಬಗ್ಗೆ ಮನವಿ ಮಾಡಿದೆ. ಆದ್ರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‍ನಿಂದ ಈ ಬಗ್ಗೆ ಯಾವುದೇ ರಿಪ್ಲೇ ಬಂದಿಲ್ಲ.

ಆದ್ರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಏನಾದ್ರೂ ಬಿಸಿಸಿಐನ ಮನವಿಗೆ ಸ್ಪಂದಿಸಿ, ಜುಲೈನಲ್ಲೆ ಟೆಸ್ಟ್ ಸರಣಿ ನಡೆಸಲು ಓಕೆ ಅಂದ್ರೆ ಸೆಪ್ಟೆಂಬರ್ ನಲ್ಲಿ ಮತ್ತೆ ಐಪಿಎಲ್ ಹಂಗಾಮ ಶುರುವಾಗಲಿದೆ.

Tags: CricketIPLRCB
ShareTweetSendShare
Join us on:

Related Posts

RCB ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

RCB ಅಭಿಮಾನಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

by Shwetha
December 11, 2025
0

ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ, ವಿಶೇಷವಾಗಿ RCB ಫ್ಯಾನ್ಸ್‌ಗಳಿಗೆ ರಾಜ್ಯ ಸರ್ಕಾರದಿಂದ ಸಂತಸದ ಸುದ್ದಿ ಬಂದಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿರುವಂತೆ, ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಸೇರಿದಂತೆ ಕ್ರಿಕೆಟ್...

ಕರ್ನಾಟಕ ಭೂ ಕಂದಾಯ ಕಾಯ್ದೆ 1964: ಪ್ರಮುಖ ತಿದ್ದುಪಡಿ ಮಂಡನೆಗೆ ರಾಜ್ಯ ಸರ್ಕಾರ ಸಜ್ಜು

ಕರ್ನಾಟಕ ಭೂ ಕಂದಾಯ ಕಾಯ್ದೆ 1964: ಪ್ರಮುಖ ತಿದ್ದುಪಡಿ ಮಂಡನೆಗೆ ರಾಜ್ಯ ಸರ್ಕಾರ ಸಜ್ಜು

by Shwetha
December 11, 2025
0

ರಾಜ್ಯದಲ್ಲಿ ಭೂ ಸಂಬಂಧಿತ ಕಾನೂನುಗಳನ್ನು ಸ್ಮಾರ್ಟ್ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ಬಹು ನಿರೀಕ್ಷಿತ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿ ಮಂಡನೆಗೆ ಬರುತ್ತಿದೆ. ರಾಜ್ಯ ರೆವಿನ್ಯೂ...

ಧರ್ಮಸ್ಥಳದ ವಿರುದ್ಧದ ಮಹಾ ಷಡ್ಯಂತ್ರ ಬಯಲು: ಶವ ಹೂತ ಕಥೆ ಕಟ್ಟಿದ ಬುರುಡೆ ಗ್ಯಾಂಗ್‌ಗೆ ಸಂಕಷ್ಟ, ಕ್ಷೇತ್ರಕ್ಕೆ ಸಿಕ್ತು ಕ್ಲೀನ್ ಚಿಟ್!

ಧರ್ಮಸ್ಥಳದ ವಿರುದ್ಧದ ಮಹಾ ಷಡ್ಯಂತ್ರ ಬಯಲು: ಶವ ಹೂತ ಕಥೆ ಕಟ್ಟಿದ ಬುರುಡೆ ಗ್ಯಾಂಗ್‌ಗೆ ಸಂಕಷ್ಟ, ಕ್ಷೇತ್ರಕ್ಕೆ ಸಿಕ್ತು ಕ್ಲೀನ್ ಚಿಟ್!

by Shwetha
December 11, 2025
0

ಬೆಳ್ತಂಗಡಿ: ನಾಡಿನ ಪವಿತ್ರ ಯಾತ್ರಾ ಸ್ಥಳ ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ದುರುದ್ದೇಶದಿಂದ ಹೆಣೆಯಲಾದ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಭಾರಿ ಷಡ್ಯಂತ್ರದ ಮುಖವಾಡ ಕಳಚಿದೆ....

RTO ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಟ್ಟುನಿಟ್ಟಿನ ಬ್ರೇಕ್: ಸಚಿವರ ಎಚ್ಚರಿಕೆ

RTO ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಟ್ಟುನಿಟ್ಟಿನ ಬ್ರೇಕ್: ಸಚಿವರ ಎಚ್ಚರಿಕೆ

by Shwetha
December 11, 2025
0

ರಾಜ್ಯದಲ್ಲಿನ RTO ಕಚೇರಿಗಳಲ್ಲಿ ನಡೆದುಬಂದಿರುವ ಮಧ್ಯವರ್ತಿಗಳ ಹಾವಳಿಗೆ ಸರ್ಕಾರ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಮಧ್ಯವರ್ತಿಗಳ ಮೂಲಕ ಕೆಲಸ ಮಾಡಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾರಿಗೆ ಮತ್ತು...

ನಮ್ಮಲ್ಲಿ ಅಕ್ಕಿ ತಂದು ಸುರಿಯಬೇಡಿ ಭಾರತದ ವಿರುದ್ಧ ಟ್ರಂಪ್ ಗರಂ :ಭಾರತದ ಅಕ್ಕಿ ಆಮದಿಗೆ ಬ್ರೇಕ್ ಹಾಕಲು ಟ್ರಂಪ್ ನಿರ್ಧಾರ

ನಮ್ಮಲ್ಲಿ ಅಕ್ಕಿ ತಂದು ಸುರಿಯಬೇಡಿ ಭಾರತದ ವಿರುದ್ಧ ಟ್ರಂಪ್ ಗರಂ :ಭಾರತದ ಅಕ್ಕಿ ಆಮದಿಗೆ ಬ್ರೇಕ್ ಹಾಕಲು ಟ್ರಂಪ್ ನಿರ್ಧಾರ

by Shwetha
December 11, 2025
0

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ 'ಅಮೆರಿಕ ಫಸ್ಟ್' ನೀತಿಯನ್ನು ಪ್ರಬಲವಾಗಿ ಪ್ರತಿಪಾದಿಸಿದ್ದು, ಭಾರತದ ವ್ಯಾಪಾರ ವಲಯಕ್ಕೆ ದೊಡ್ಡ ಆಘಾತ ನೀಡಿದ್ದಾರೆ. ಅಮೆರಿಕದ ಮಾರುಕಟ್ಟೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram