ಕ್ರಿಕೆಟ್ ಜಗತ್ತೇ ಕಾಯುತ್ತಿರುವ ಐಪಿಎಲ್ ಹಬ್ಬಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಮಾರ್ಚ್ 29ರಿಂದ ಐಪಿಎಲ್ ಸೀಸನ್ 13 ಶುರುವಾಗಲಿದೆ. ಮಾರ್ಚ್ 29 ರಂದು ಕಳೆದ ಸೀಸನ್ ನಲ್ಲಿ ಫೈನಲ್ ನಲ್ಲಿ ಕಾದಾಡಿದ್ದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಮೂಲಕ, ಈ ಬಾರಿಯ ಸೀಸನ್ ಅದ್ಧೂರಿಯಾಗಿ ಚಾಲನೆ ಪಡೆದುಕೊಳ್ಳಲಿದೆ.
ಮೇ 17 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಲಿದೆ. ಇನ್ನು ಮೇ 24 ರಂದು ಈ ಸೀಸನ್ ನ ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಒಟ್ಟು 50 ದಿನಗಳ ಕಾಲ ಪಂದ್ಯಗಳು ನಡೆಯಲಿದೆ. ಕಳೆದ ಬಾರಿ ಕೇವಲ 44 ದಿನಗಳಲ್ಲಿ ಸೀಸನ್ ಅಂತ್ಯಕಂಡಿತ್ತು.
ಆದ್ರೆ ಬಿಸಿಸಿಐ ಇದುವರೆಗೆ ಶೆಡ್ಯೂಲ್ ನ್ನ ಅಧಿಕೃತವಾಗಿ ಆಗಿ ಘೋಷಣೆ ಮಾಡಿಲ್ಲ. ಆದ್ರೆ ಬಹುತೇಕ ಎಲ್ಲಾ ತಂಡಗಳು ತಮ್ಮ ಪಂದ್ಯಗಳು ಯಾವ್ಯಾವ ದಿನ ನಡೆಯಲಿದೆ ಅನ್ನೋದನ್ನ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಹಂಚಿಕೊಂಡಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳ ವೇಳಾಪಟ್ಟಿ ಹೀಗಿದೆ.