೧೪ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಾವುದೇ ಅಡೆತಡೆ ಇಲ್ಲದೆ ಮುಗಿದು ಹೋಯ್ತು. ಚೆನ್ನೆöÊ ತಂಡ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು.
ಇದೀಗ ಬಿಸಿಸಿಐಗೆ ಮುಂದಿನ ಐಪಿಎಲ್ ಸಂಫಟಿಸುವತ್ತ ಚಿತ್ತವನ್ನು ನೆಟ್ಟಿದೆ. ಅಲ್ಲದೆ ೨೦೨೨ರ ಐಪಿಎಲ್ ನಲ್ಲಿ ಎರಡು ತಂಡಗಳು ಸೇರಿಕೊಳ್ಳಲಿವೆ.
ಒಟ್ಟು ಹತ್ತು ತಂಡಗಳು ೧೫ನೇ ಆವೃತ್ತಿಯ ಐಪಿಎಲ್ ನಲ್ಲಿ ಭಾಗವಹಿಸಲಿವೆ.
ಹೊಸ ತಂಡಗಳ ಹೆಸರುಗಳನ್ನು ಇದೇ ತಿಂಗಳಲ್ಲಿ ಬಿಸಿಸಿಐ ಘೋಷಣೆ ಮಾಡಲಿದೆ.
ಈ ನಡುವೆ, ಮುಂದಿನ ಐಪಿಎಲ್ ಭಾರತದಲ್ಲೇ ನಡೆಯಲಿದೆ ಎಂದು ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
೨೦೨೧ರ ಐಪಿಎಲ್ ನ ಮೊದಲ ಭಾಗ ಭಾರತದಲ್ಲೇ ನಡೆದಿತ್ತು. ಆದ್ರೆ ಕೋವಿಡ್ ನಿಂದಾಗ ಕೊನೆಯ ಘಳಿಗೆಯಲ್ಲಿ ಯುಎಇಗೆ ಶಿಫ್ಟ್ ಮಾಡಲಾಗಿತ್ತು.
ಮತ್ತೊಂದೆಡೆ ೨೦೨೧ರ ಟಿ-ಟ್ವೆಂಟಿ ವಿಶ್ವಕಪ್ ಕೂಡ ಭಾರತದಲ್ಲೇ ನಡೆಯಬೇಕಿತ್ತು. ಆದ್ರೆ ಕೋವಿಡ್ ನಿಂದಾಗಿ ಯುಎಇನಲ್ಲಿ ನಡೆಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ.
ಹೀಗಾಗಿ ಭಾರತದ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಮತ್ತು ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗಳನ್ನು ಮಿಸ್ ಮಾಡಿಕೊಂಡಿದ್ದಾರೆ.
ಇದನ್ನು ಅರಿತುಕೊಂಡಿರುವ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
೨೦೨೨ರ ಐಪಿಎಲ್ ಭಾರತದಲ್ಲೇ ನಡೆಯಲಿದೆ. ಈ ಟೂರ್ನಿಗೆ ಇನ್ನೂ ಏಳೆಂಟು ತಿಂಗಳುಗಳಿವೆ.
ಆ ಸಮಯದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ
ಐಪಿಎಲ್ ಭಾರತದ ಟೂರ್ನಿಯಾಗಿದೆ. ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳ ಕೂಗು ಚೀರಾಟ ಮುಂದಿನ ವರ್ಷ ಖಂಡಿತ ನೋಡಬಹುದು ಎಂದು ಗಂಗೂಲಿ ಹೇಳಿದ್ದಾರೆ









