ಚೆನ್ನೈ: 17ನೇ ಆವೃತ್ತಿಯ ಐಪಿಎಲ್ ಟ್ರೋಫಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡ ಗೆದ್ದು ಬೀಗಿದೆ.
ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ ಕೋಲ್ಕತ್ತಾ ಫೈನಲ್ ನಲ್ಲಿ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಟ್ರೋಫಿಗೆ ಮುತ್ತಿಕ್ಕಿದೆ. ಈ ಮೂಲಕ ವಿಜೇತ ತಂಡ 20 ಕೋಟಿ ರೂ. ಹಣ ಹಾಗೂ ಟ್ರೋಫಿ ಪಡೆಯಿತು. ರನ್ನರ್ ಅಪ್ ತಂಡ 13 ಕೋಟಿ ರೂ. ಬಹುಮಾನ ನೀಡಲಾಯಿತು.
ಅಲ್ಲದೇ, ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಲಾಯಿತು. ಸನ್‌ರೈಸರ್ಸ್ ಹೈದರಾಬಾದ್‌ನ ಸ್ಟಾರ್ ಆಲ್‌ರೌಂಡರ್ ನಿತೀಶ್ ರೆಡ್ಡಿ (Nitish Kumar Reddy) ಉದಯೋನ್ಮುಖ ಆಟಗಾರ ಎಂಬ ಪ್ರಶಸ್ತಿ ಗೆದ್ದರು. ಆವೃತ್ತಿಯಲ್ಲಿ ಅತೀ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಕ್ಕಾಗಿ ಅಭಿಷೇಕ್ ಶರ್ಮಾ (Abhishk Sharma) ಸೂಪರ್ ಸಿಕ್ಸರ್ ಆಗಿ ಆಯ್ಕೆಯಾದರು. ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಡೆಲ್ಲಿ ಕ್ಯಾಪಿಟಲ್ಸ್‌ನ ಜೇಕ್ ಫ್ರೇಸರ್ ಮೆಕ್ಗರ್ಕ್ (Jake Fraser-McGurk) ಗೆದ್ದರು. ವಿರಾಟ್ ಕೊಹ್ಲಿಗೆ (Virat Kohli) ಆರೆಂಜ್ ಕ್ಯಾಪ್ ಸಿಕ್ಕರೆ, ಹರ್ಷಲ್ ಪಟೇಲ್ (Harshal Patel) ಪರ್ಪಲ್ ಕ್ಯಾಪ್ ಪಡೆದರು. ಅಲ್ಲದೇ, ಮೂರನೇ ಸ್ಥಾನ ಪಡೆದಿರುವ ರಾಜಸ್ಥಾನ್ ತಂಡ 7 ಕೋಟಿ ರೂ. ಹಾಗೂ ನಾಲ್ಕನೇ ಸ್ಥಾನ ಪಡೆದಿರುವ ಬೆಂಗಳೂರಿಗೆ 6.5 ಕೋಟಿ ರೂ. ನೀಡಲಾಯಿತು.
ಕೋಲ್ಕತ್ತಾ ನೈಟ್ ರೈಡರ್ಸ್ (ವಿಜೇತರು) – 20 ಕೋಟಿ ರೂ. ಮತ್ತು ಟ್ರೋಫಿ
ಸನ್ ರೈಸರ್ಸ್ ಹೈದರಾಬಾದ್ (ರನ್ನರ್ ಅಪ್) – 12.5 ಕೋಟಿ ರೂ. ಮತ್ತು ಟ್ರೋಫಿ
ಹರ್ಷಲ್ ಪಟೇಲ್ (24 ವಿಕೆಟ್)- 10 ಲಕ್ಷ ರೂ. ಮತ್ತು ಪರ್ಪಲ್ ಕ್ಯಾಪ್
ವಿರಾಟ್ ಕೊಹ್ಲಿ (741 ರನ್) – 10 ಲಕ್ಷ ರೂ. ಮತ್ತು ಆರೆಂಜ್ ಕ್ಯಾಪ್
ನಿತೀಶ್ ರೆಡ್ಡಿ (ಉದಯೋನ್ಮುಖ ಆಟಗಾರ)- 10 ಲಕ್ಷ ಮತ್ತು ಟ್ರೋಫಿ
ಸನ್‌ರೈಸರ್ಸ್ ಹೈದರಾಬಾದ್ ( ಫೇರ್‌ಪ್ಲೇ ಪ್ರಶಸ್ತಿ) – 10 ಲಕ್ಷ ಮತ್ತು ಟ್ರೋಫಿ
ಹರ್ಷಲ್ ಪಟೇಲ್ (Dream11 ಗೇಮ್ ಚೇಂಜರ್ ಆಫ್ ದಿ ಸೀಸನ್)- 10 ಲಕ್ಷ ಮತ್ತು ಟ್ರೋಫಿ
ಅಭಿಷೇಕ್ ಶರ್ಮಾ (ಸೀಸನ್‌ನ ಸೂಪರ್ ಸಿಕ್ಸರ್)- 10 ಲಕ್ಷ ರೂ.
ರಮಣದೀಪ್ ಸಿಂಗ್ (ಪರಿಪೂರ್ಣ ಕ್ಯಾಚ್)- 10 ಲಕ್ಷ ರೂ. ಮತ್ತು ಟ್ರೋಫಿ
ಜೇಕ್ ಫ್ರೇಸರ್ ಮೆಕ್ಗರ್ಕ್ (ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್)- 10 ಲಕ್ಷ ಮತ್ತು ಟ್ರೋಫಿ
ವೆಂಕಟೇಶ್ ಅಯ್ಯರ್ (ಕ್ರೆಡ್ ಪವರ್ ಪ್ಲೇಯರ್ ಆಫ್ ದಿ ಸೀಸನ್)- 10 ಲಕ್ಷ ಮತ್ತು ಟ್ರೋಫಿ
ಸುನಿಲ್ ನಾರಾಯಣ್ (ಅತ್ಯಂತ ಮೌಲ್ಯಯುತ ಆಟಗಾರ)- 10 ಲಕ್ಷ ಮತ್ತು ಟ್ರೋಫಿ
ಪಿಚ್ ಮತ್ತು ಗ್ರೌಂಡ್ ಅವಾರ್ಡ್ – ರಾಜೀವ್ ಗಾಂಧಿ ಸ್ಟೇಡಿಯಂ ಹೈದರಾಬಾದ್- 50 ಲಕ್ಷ ಪಡೆದರು.