ಅಬುಧಾಬಿ : ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವವನ್ನು ದಿನೇಶ್ ಕಾರ್ತಿಕ್ (Dinesh karthik), ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ.
ಕೆಕೆಆರ್ ತಂಡವನ್ನು ಈ ಆವೃತ್ತಿಯ ಮಧ್ಯಂತರದವರೆಗೆ ಮುನ್ನೆಡೆಸಿದ್ದ ಕಾರ್ತಿಕ್ (Dinesh karthik) ಇಂದು ತಮ್ಮ ನಾಯಕತ್ವದಿಂದ ಹಿಂದೆ ಸರಿದಿದ್ದಾರೆ.
ಹೀಗಾಗಿ ಇಂದು ನಡೆಯುವ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಕೋಲ್ಕತ್ತಾ ತಂಡವನ್ನು ಹೊಸ ನಾಯಕ ಮಾರ್ಗನ್ ಮುನ್ನಡೆಸಲಿದ್ದಾರೆ.
2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ನೇಮಕವಾಗಿದ್ದ ದಿನೇಶ್ ಕಾರ್ತಿಕ್ ಅವರು, ಸುಮಾರು 37 ಪಂದ್ಯಗಳಲ್ಲಿ ಕೋಲ್ಕತ್ತಾ ತಂಡವನ್ನು ಮುನ್ನಡೆಸಿದ್ದರು.
ಇದನ್ನೂ ಓದಿ : ಕ್ರಿಸ್ ಗೇಲ್ ಅವರನ್ನು ಯುನಿವರ್ಸಲ್ ಬಾಸ್ ಅಂತ ಕರೆಯುವುದು ಯಾಕೆ ?
ಈ ಬಾರಿಯ ಐಪಿಎಲ್ ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುವಲ್ಲಿ ದಿನೇಶ್ ಕಾರ್ತಿಕ್ ಅವರು ಕೊಂಚ ಎಡವಿದ್ದರು.
ಜೊತೆಗೆ ಓರ್ವ ಬ್ಯಾಟ್ಸ್ ಮ್ಯಾನ್ ಆಗಿ ಕೂಡ ತಂಡಕ್ಕೆ ಬೇಕಾದಾಗ ಬ್ಯಾಟ್ ಬೀಸುವಲ್ಲಿ ವಿಫಲರಾಗಿದ್ದರು.
ಈ ಕಾರಣದಿಂದ ಮಾರ್ಗನ್ ಅವರಿಗೆ ನಾಯಕ್ವವನ್ನು ಬಿಟ್ಟುಕೊಡುವಂತೆ ಕೆಕೆಆರ್ ಅಭಿಮಾನಿಗಳು ಒತ್ತಾಯಿಸಿದ್ದರು.
ಆದ್ದರಿಂದ ನಾಯಕ್ವ ಬಿಟ್ಟುಕೊಟ್ಟು ಬ್ಯಾಟಿಂಗ್ ಕಡೆ ಹೆಚ್ಚು ಗಮನ ನೀಡಲು ಕಾರ್ತಿಕ್ ತೀರ್ಮಾನ ಮಾಡಿದ್ದಾರೆ.
ಈ ಹಿಂದೆ ಭಾರತದ ಬೌಲರ್ ಶ್ರೀಶಾಂತ್ ಟ್ವೀಟ್ ಮಾಡಿ, ವಿಶ್ವಕಪ್ ವಿನ್ನಿಂಗ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಕೆಕೆಆರ್ ತಂಡವನ್ನು ಮುನ್ನೆಡಸಬೇಕು ಎಂದು ಹೇಳಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel