ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯವನ್ನಾಡಲು ತುದಿಗಾಲಿನಲ್ಲಿ ನಿಂತಿದೆ. ಇಂದಿನ ಮ್ಯಾಚ್ ನಲ್ಲಿ ಆರ್ ಸಿಬಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಕೋಟ್ಯಾಂತರ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆರ್ ಸಿಬಿ ಅಭಿಮಾನಿಗಳಂತೂ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಇಂದಿನ ಪಂದ್ಯಕ್ಕಾಗಿ ಕಾತರರಾಗಿದ್ದಾರೆ.
ಇಂದೇ ಆ ಸಾಧನೆ ಮಾಡ್ತಾರ ಕೊಹ್ಲಿ..?
ಆರ್ ಸಿಬಿ ತಂಡದ ಸಾರಥಿ ವಿರಾಟ್ ಕೊಹ್ಲಿ ಇನ್ನೊಂದು ಪಂದ್ಯ ಗೆದ್ದರೇ ನಾಯಕನಾಗಿ 50 ಮ್ಯಾಚ್ ಗಳನ್ನು ಗೆದ್ದ ಸಾಧನೆ ಮಾಡಲಿದ್ದಾರೆ. ಆರ್ ಸಿಬಿ ಕ್ಯಾಪ್ಟನ್ ಆಗಿ ವಿರಾಟ್ ಕೊಹ್ಲಿ ಈವರೆಗೆ 49 ಗೆಲುವುಗಳನ್ನು ದಾಖಲಿಸಿದ್ದಾರೆ. ಒಂದು ವೇಳೆ ಇಂದಿನ ಪಂದ್ಯ ಗೆದ್ದರೆ ಈ ಗೆಲುವಿನ ಸಂಖ್ಯೆ 50ಕ್ಕೇರಲಿದೆ. ಈ ಸಾಧನೆಯನ್ನು ಈವರೆಗೆ ಕೇವಲ 3 ನಾಯಕರಿಂದಷ್ಟೇ ಮಾಡಲು ಸಾಧ್ಯವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ನಾಯಕನಾಗಿ 100 ಗೆಲುವು ದಾಖಲಿಸಿದ್ದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ 71 ಗೆಲುವು ದಾಖಲಿಸಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ 60 ಗೆಲುವುಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಇದಲ್ಲದೇ ಕೊಹ್ಲಿ ಈ ಪಂದ್ಯದಲ್ಲಿ ಕೇವಲ 20 ರನ್ ಬಾರಿಸಿದರೇ ಹೈದರಾಬಾದ್ ತಂಡದ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮೆನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಳಿದ್ದಾರೆ. ಸದ್ಯ ಎಸ್ ಆರ್ ಹೆಚ್ ವಿರುದ್ಧ ವಿರಾಟ್ 13 ಮ್ಯಾಚ್ ಗಳನ್ನು ಆಡಿದ್ದು, 504 ರನ್ ಗಳನ್ನು ಚಚ್ಚಿದ್ದಾರೆ.








