5 ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ಕೊಡಿ ಪ್ಲೀಸ್
ಮುಂಬೈ : ತಂಡದಲ್ಲಿ ಐದು ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ಕೊಡಿ ಎಂದು ಐಪಿಎಲ್ ಫ್ರಾಂಚೈಸಿಗಳು ಬಿಸಿಸಿಐಗೆ ಒತ್ತಾಯಿಸಿವೆ.
ಸದ್ಯ ಐಪಿಎಲ್ ನಲ್ಲಿ ಭಾಗವಹಿಸುವ ತಂಡದ ಆಡುವ 11ರಲ್ಲಿ ನಾಲ್ಕು ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ಕೊಡಲಾಗಿದೆ.
ಆದರೆ ಈ ನಿಯಮವನ್ನು ಬದಲಿಸಿ ಆಡುವ 11ರ ಬಳಗದಲ್ಲಿ ಐದು ವಿದೇಶಿ ಆಟಗಾರರನ್ನು ಆಡಿಸುವ ಅವಕಾಶ ನೀಡಬೇಕು ಎಂದು ಫ್ರಾಂಚೈಸಿಗಳು ಒತ್ತಾಯ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.
ಫ್ರಾಂಚೈಸಿಗಳ ಈ ಬೇಡಿಕೆ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಈ ವಿಚಾರದ ಬಗ್ಗೆ ನಾವು ಗಂಭೀರವಾದ ಚರ್ಚೆ ಮಾಡಿಲ್ಲ. ಕೆಲ ಫ್ರಾಂಚೈಸಿಗಳು ಈ ವಿಚಾರವನ್ನು ಬಿಸಿಸಿಐ ಗಮನಕ್ಕೆ ತಂದಿವೆ.
ಫ್ರಾಂಚೈಸಿಗಳ ಈ ಬೇಡಿಕೆ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅಂತಹ ಮಧುರ ಕ್ಷಣಗಳು ಮತ್ತೆ ಮತ್ತೆ ಬರುವುದಿಲ್ಲ..!
ಫ್ರಾಂಚೈಸಿಗಳ ವಾದವೇನು..?
ಐದು ವಿದೇಶಿ ಆಟಗಾರರನ್ನು ಪ್ಲೇಯಿಂಗ್ ಇಲೆವೆನ್ ನಲ್ಲಿ ಆಡಿಸಲು ಫ್ರಾಂಚೈಸಿಗಳು ಒತ್ತಾಯ ಮಾಡುತ್ತಿರುವುದು ಬಿಸಿಸಿಐಗೆ ಹೊಸ ತಲೆನೋವು ತಂದಿದೆ.
ನಾವು ಕೋಟಿ ಕೋಟಿ ಕೊಟ್ಟು ವಿದೇಶಿ ಆಟಗಾರರನ್ನು ಖರೀದಿ ಮಾಡುತ್ತೇವೆ. ಆದ್ರೆ ಅವರನ್ನು ಆಡುವ 11ರಲ್ಲಿ ಆಡಿಸಲು ಆಗುತ್ತಿಲ್ಲ. ಹೀಗಾಗಿ ನಿಯಮವನ್ನು ಬದಲಾವಣೆ ಮಾಡಿ ಎಂದು ಫ್ರಾಂಚೈಸಿಗಳು ಒತ್ತಾಯಿಸುತ್ತಿವೆ.
ಇನ್ನು ಫ್ರಾಂಚೈಸಿಗಳ ಈ ವಾದಕ್ಕೆ ವಿರೋಧವೂ ಕೂಡ ವ್ಯಕ್ತವಾಗಿದೆ. ಈಗಲೇ ಸ್ವದೇಶಿ ಆಟಗಾರರಿಗೆ ಸೂಕ್ತ ಸ್ಥಾನ ಸಿಗುತ್ತಿಲ್ಲ. ಕೊಹ್ಲಿ ಜೊತೆಗಿನ ವಿವಾದ : ಮೌನ ಮುರಿದ ಯಾದವ್ ಹೇಳಿದ್ದೇನು..?
ಈ ಮಧ್ಯೆ ಆಡುವ 11ರ ಬಳಗದಲ್ಲಿ ಐದು ವಿದೇಶಿ ಆಟಗಾರಿಗೆ ಅವಕಾಶ ನೀಡಿದರೆ, ಭಾರತದ ಸ್ಥಳೀಯ ಆಟಗಾರಿಗೆ ಅನ್ಯಾಯವಾಗುತ್ತದೆ ಎಂದು ಕೆಲವರು ವಾದಿಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










