ಕೊಹ್ಲಿ ಜೊತೆಗಿನ ವಿವಾದ : ಮೌನ ಮುರಿದ ಯಾದವ್ ಹೇಳಿದ್ದೇನು..?
ಮುಂಬೈ : ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ನಡುವಿನ ವಿವಾದ ಈ ಬಾರಿಯ ಐಪಿಎಲ್ ನಲ್ಲಿ ಭಾರಿ ಸದ್ದು ಮಾಡಿತ್ತು.
ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ವಿರುದ್ಧದ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಮತ್ತು ವಿರಾಟ್ ಇಬ್ಬರು ದಿಟ್ಟಿಸಿ ನೋಡಿಕೊಂಡಿದ್ದರು.
ಇದು ಆನ್ ದಿ ಫೀಲ್ಡ್ ಮತ್ತು ಆಫ್ ದಿ ಫೀಲ್ಡ್ ಎರಡರಲ್ಲೂ ಭಾರಿ ಚರ್ಚೆಗೆ ಕಾರಣವಾಗಿತ್ತು.
ಟೀಂ ಇಂಡಿಯಾಗೆ ವಿಭಜಿತ ನಾಯಕತ್ವ ಬೇಕಾ : ಕಪಿಲ್ ಹೇಳಿದ್ದೇನು..?
ಕೊಹ್ಲಿ ಅಭಿಮಾನಿಗಳು ವಿರಾಟ್ ಪರ ಸೋಶಿಯಲ್ ಮೀಡಿಯಾದಲ್ಲಿ ಬ್ಯಾಟ್ ಬೀಸಿದ್ರೆ, ವಿರಾಟ್ ವಿರೋಧಿಗಳು ಯಾದವ್ ಪರ ನಿಂತಿದ್ದರು.
ಐಪಿಎಲ್ ಮುಗಿದು ಮುಂಬೈ ಚಾಂಪಿಯನ್ ಆದ ಬಳಿಕಯೂ ಈ ಬಗ್ಗೆ ಅಲ್ಲಲ್ಲಿ ಚರ್ಚೆ ಆಗುತ್ತೇ ಇದ್ದು, ಅಂದಿನ ನಡೆದ ಘಟನೆ ಬಗ್ಗೆ ಸೂರ್ಯಕುಮಾರ್ ಯಾದವ್ ಕೊನೆಗೂ ಮೌನ ಮುರಿದಿದ್ದಾರೆ.
ಸೂರ್ಯ ಕುಮಾರ್ ಟೀಂ ಇಂಡಿಯಾದ ಎಬಿಡಿ
ವಿರಾಟ್ ಕೊಹ್ಲಿಯವರು ಮೈದಾನದಲ್ಲಿ ಯಾವಾಗಲೂ ಆಕ್ರಮಣಕಾರಿಯಾಗಿ ಇರುತ್ತಾರೆ.
ಅದು ಮುಂಬೈ ವಿರುದ್ಧದ ಪಂದ್ಯವಾಗಲಿ ಅಥವಾ ಯಾವುದೇ ಫ್ರಾಚೈಸಿಗಾಗಿ ಆಡುತ್ತಿರಲಿ ಕೊಹ್ಲಿ ಆಕ್ರಮಣಕಾರಿಯಾಗಿಯೇ ಕಾಣಿಸುತ್ತಾರೆ.
ಅಂದು ನಮ್ಮ ತಂಡಕ್ಕೂ ಮತ್ತು ಆರ್ಸಿಬಿ ತಂಡಕ್ಕೂ ಆ ಪಂದ್ಯ ಬಹಳ ಪ್ರಮುಖವಾಗಿತ್ತು.
ಇಬ್ಬರು ಗೆಲ್ಲಲೇ ಬೇಕಿದ್ದ ಪಂದ್ಯವಾದ ಕಾರಣ ಇಬ್ಬರು ಅಗ್ರೆಸ್ಸಿವ್ ಆಗಿದ್ದವು. ಈ ಕಾರಣದಿಂದ ಅಂದು ಆ ಕ್ಷಣದಲ್ಲಿ ಮಾತ್ರ ಮೈದಾನದಲ್ಲಿ ನಾವಿಬ್ಬರೂ ದಿಟ್ಟಿಸಿ ನೋಡಿಕೊಂಡಿದ್ದವು.
ಪಂದ್ಯವಾದ ಬಳಿಕ ಡಗೌಟ್ ಗೆ ಬಂದ ಕೊಹ್ಲಿ ಚೆನ್ನಾಗಿ ಆಡಿದೆ ವೆಲ್ ಡನ್ ಎಂದು ಹೇಳಿ ಹೋದರು.
ನಮ್ಮಿಬ್ಬರ ಮಧ್ಯೆ ಯಾವುದೇ ವಿವಾದವಿಲ್ಲ ಎಂದು ಎಲ್ಲಾ ವದಂತಿಗಳಿಗೆ ಚರ್ಚೆಗಳಿಗೆ ಯಾದವ್ ಫುಲ್ ಸ್ಟಾಪ್ ಇಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel