ಐಪಿಎಲ್ ಸೀಸನ್ 15ಕ್ಕೆ ಮುಹೂರ್ತ ಫಿಕ್ಸ್..!

1 min read
IPL

ಐಪಿಎಲ್ ಸೀಸನ್ 15ಕ್ಕೆ ಡೇಟ್ ಫಿಕ್ಸ್, ಏಪ್ರಿಲ್ 2ಕ್ಕೆ ಚೆನ್ನೈನಲ್ಲಿ ಮೊದಲ ಪಂದ್ಯ..?

ಐಪಿಎಲ್ ಸೀಸನ್ 15ಕ್ಕೆ ಲೆಕ್ಕಾಚಾರಗಳು ನಡೆಯುತ್ತಿದೆ.

ಎರಡು ಹೊಸ ತಂಡಗಳು ಐಪಿಎಲ್ ಟೂರ್ನಿ ಸೇರಿಕೊಂಡಿದ್ದು ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಮಧ್ಯೆ ಮೆಗಾ ಆಕ್ಷನ್ ಮತ್ತು ತಂಡಗಳ ಪುನರಾಚನೆ ಬಗ್ಗೆ ಕೂಡ 10 ಫ್ರಾಂಚೈಸಿಗಳು ಲೆಕ್ಕಾಚಾರ ಆರಂಭಿಸಿವೆ.

ಇದೆಲ್ಲದರ ಮಧ್ಯೆ ಬಿಸಿಸಿಐ ಐಪಿಎಲ್ 2022ರ ವೇಳಾಪಟ್ಟಿಯನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ.

ಮೂಲಗಳ ಪ್ರಕಾರ ಐಪಿಎಲ್ 15 ನೇ ಸೀಸನ್ನ ವೇಳಾಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಲಾಗಿದೆಯಂತೆ.

IPL saaksha tv

ಏಪ್ರಿಲ್ 2 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ಪ್ರಾರಂಭವಾಗುವ ಸಾಧ್ಯತೆಯಿದೆ.

ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆಯಂತೆ.

8 ತಂಡಗಳ ಬದಲು 10 ತಂಡಗಳು ಟೂರ್ನಿಯಲ್ಲಿ ಇರುವುದರಿಂದ ಪಂದ್ಯಗಳು ಮತ್ತಷ್ಟು ರೋಚಕವಾಗಿರಲಿದೆ.

8 ತಂಡಗಳಿದ್ದಾಗ ಒಂದು ಸೀಸನ್ ನಲ್ಲಿ 60 ಪಂದ್ಯಗಳು ನಡೆಯುತ್ತಿದ್ದವು. ಆದರೆ ಈಗ ಎರಡು ಹೊಸ ತಂಡಗಳ ಸೇರ್ಪಡೆ ಆಗಿವೆ.

ಹೀಗಾಗಿ ಪಂದ್ಯಗಳ ಸಂಖ್ಯೆ 74 ಕ್ಕೆ ಏರಲಿದೆ. ಜೂನ್ ಮೊದಲ ವಾರದಲ್ಲಿ ಐಪಿಎಲ್ ಫೈನಲ್ ನಡೆಯುವ ಎಲ್ಲಾ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd