IPL ನ KING ಕೆ.ಎಲ್.ರಾಹುಲ್..!!
ಕ್ರಿಕೆಟ್ ಹಬ್ಬ ಇಂಡಿಯನ್ ಪ್ರಿಮಿಯರ್ ಲೀಗ್ ಶುರುವಾಗಿ 14 ವರ್ಷಗಳು ಕಳೆದಿದೆ. ಸದ್ಯ 15 ನೇ ಆವೃತ್ತಿಯ ಪಂದ್ಯಾವಳಿಗಳು ರಸವತ್ತಾಗಿಯೇ ನಡೆಯುತ್ತಿವೆ. ಪ್ರತಿಬಾರಿಯಂತೆಯೇ ಐಪಿಎಲ್ ನಲ್ಲಿ ಎಂಟರ್ ಟೈನ್ಮೆಂಟ್ ಗೆ ಕೊರತೆಯೇ ಇಲ್ಲ. ಪ್ರತಿ ಪಂದ್ಯದಲ್ಲೂ ಒಂದಾಲ್ಲ ಒಂದು ರೋಚಕ ಸನ್ನಿವೇಷ ಅಭಿಮಾನಿಗಳ ಮನಸೋರೆಗೊಳಿಸುತ್ತಿದೆ.
ಈ ನಡುವೆ ಐಪಿಎಲ್ ನ ಕಿಂಗ್ಸ್ ಯಾರು ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ. ಇದಕ್ಕೆ ಆಯಾ ಕಾಲಕ್ಕೆ ತಕ್ಕಂತೆ ಒಬ್ಬೊಬ್ಬರ ಹೆಸರು ಬರುತ್ತಿದೆ. ಆ ಪಟ್ಟಿಯಲ್ಲಿ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್, 360 ಡಿಗ್ರಿ ಎಬಿಡಿ ವಿಲಿಯರ್ಸ್, ಮಿಸ್ಟರ್ ಐಪಿಎಲ್ ಸುರೇಶ್ ರೈನಾ, ವಿಶ್ವ ಕ್ರಿಕೆಟ್ ನ ಕಿಂಗ್ ವಿರಾಟ್ ಕೊಹ್ಲಿ ಹೆಸರುಗಳು ಕೇಳಿಬರುತ್ತಿವೆ.
ಆದ್ರೆ ಸದ್ಯದ ಮಟ್ಟಿಗೆ ಇಂಡಿಯನ್ ಪ್ರಿಮಿಯರ್ ಲೀಗ್ ನ ಕಿಂಗ್ ಒನ್ ಅಂಡ್ ಓನ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನ ಐಪಿಎಲ್ ನ ದಾಖಲೆಗಳು ಕೂಡ ಸಾರಿ ಹೇಳುತ್ತಿವೆ.
ಹೌದು..!! ಕೆ.ಎಲ್.ರಾಹುಲ್ ಟೀಂ ಇಂಡಿಯಾದ ರಾಕಿಂಗ್ ಸ್ಟಾರ್..!! ಟೆಸ್ಟ್, ಏಕದಿನ, ಟಿ 20 ಹೀಗೆ ಎಲ್ಲಾ ಮಾದರಿಯಲ್ಲೂ ರನ್ ಸುನಾಮಿಯನ್ನ ಎಬ್ಬಿಸುತ್ತಿರುವ ಆಟಗಾರ. ಕ್ರಿಕೆಟ್ ಬುಕ್ ನಲ್ಲಿರುವ ಎಲ್ಲಾ ಶಾಟ್ ಗಳನ್ನು ಸಲೀಸಾಗಿ ಆಡುವ ರಾಹುಲ್ ಟೀಂ ಇಂಡಿಯಾದ ಬ್ಯಾಟಿಂಗ್ ಶಕ್ತಿಯಾಗಿ ಬೆಳೆದು ನಿಂತಿದ್ದಾರೆ.

ಜೊತೆಗೆ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಎಂಬಂತೆ ರಾಹುಲ್ ಗುರುತಿಸಿಕೊಳ್ಳುತ್ತಿದ್ದಾರೆ. ರೋಹಿತ್ ಶರ್ಮಾರ ಮಾಸ್.. ವಿರಾಟ್ ಕೊಹ್ಲಿ ಕ್ಲಾಸ್ ಎರಡನ್ನೂ ಮೈಗೂಡಿಸಿಕೊಂಡಿರುವ ರಾಹುಲ್ ಐಪಿಎಲ್ ನಲ್ಲಿಯೂ ಕಮಾಲ್ ಮಾಡುತ್ತಿದ್ದಾರೆ.
ಅಂದಹಾಗೆ ಕೆ.ಎಲ್.ರಾಹುಲ್ ಅವರನ್ನ ಐಪಿಎಲ್ ನ ಕಿಂಗ್ ಅನ್ನೋಕೆ ಕಾರಣ,,, 2018 ರಿಂದ ರಾಹುಲ್ ಅವರ ಬ್ಯಾಟಿಂಗ್ ದರ್ಬಾರ್..!! ಐಪಿಎಲ್ ನಲ್ಲಿ ಈವರೆಗೂ 102 ಪಂದ್ಯಗಳನ್ನಾಡಿರುವ ರಾಹುಲ್ 3641 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳಿವೆ.
ಇದರೊಂದಿಗೆ ಐಪಿಎಲ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ರಾಹುಲ್, ನಾಲ್ಕನೇ ಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್ 6 ಮತ್ತು ವಿರಾಟ್ 5 ಶತಕಗಳ ಮೂಲಕ ರಾಹುಲ್ ಗಿಂತ ಮುಂದೆ ಇದ್ದಾರೆ. ಆದರೆ ಇನ್ನು ಕೆಲವೇ ಪಂದ್ಯಗಳಲ್ಲಿ ಗೇಲ್, ಕೊಹ್ಲಿ ಅವರನ್ನರಾಹುಲ್ ಮೀರಿಸಿದ್ರೂ ಅಚ್ಚರಿ ಇಲ್ಲ.
ಇದಲ್ಲದೇ ರಾಹುಲ್ 2018 ರಿಂದ ಪ್ರತಿ ಸೀಸನ್ ನಲ್ಲೂ 500ಕ್ಕೂ ಹೆಚ್ಚು ರನ್ ಗಳಿಸುತ್ತಿದ್ದಾರೆ. 2018ರಲ್ಲಿ 659 ರನ್ ಗಳಿಸಿದ್ದ ರಾಹುಲ್, 2019ರಲ್ಲಿ 593 ರನ್ ಸಿಡಿಸಿದ್ದರು. 2020 ರಲ್ಲಿ 670 ರನ್, 2021ರಲ್ಲಿ 626 ರನ್, 2022ರ ಈ ಸೀಸನ್ ನಲ್ಲಿ ಈವರೆಗೂ 368 ರನ್ ಗಳಿಸಿದ್ದಾರೆ. ಹೀಗಾಗಿಯೇ ಕ್ರಿಕೆಟ್ ಅಭಿಮಾನಿಗಳು ಕೆ.ಎಲ್.ರಾಹುಲ್ ಅವರನ್ನ ಇಂಡಿಯನ್ ಪ್ರಿಮಿಯರ್ ಲೀಗ್ ನ ಕಿಂಗ್ ಎನ್ನುತ್ತಿದ್ದಾರೆ. IPL’s KING KL Rahul