ರೈಲ್ವೆ ಸಚಿವಾಲಯವು 15 ನಗರಗಳ ನಡುವೆ ವಿಶೇಷ ರೈಲುಗಳನ್ನು ತೆರೆಯುವುದಾಗಿ ಘೋಷಿಸಿ, ರೈಲ್ವೆ ಟಿಕೆಟ್ ಬುಕಿಂಗ್ ಆರಂಭಿಸಲು ಸೋಮವಾರ ಸಂಜೆ ಸಿದ್ಧತೆ ನಡೆಸುತ್ತಿದ್ದಂತೆ ಐ.ಆರ್.ಸಿ.ಟಿ.ಸಿ ವೆಬ್‌ಸೈಟ್ ಕ್ರ್ಯಾಶ್ ಆಗಿ ಸಂಜೆ 6 ಗಂಟೆಯ ನಂತರ ಬುಕಿಂಗ್ ಆರಂಭವಾಯಿತು.
ಸೋಮವಾರ ಸಂಜೆ 4 ಗಂಟೆಗೆ ರೈಲು ಟಿಕೆಟ್ ಬುಕಿಂಗ್ ಸೇವೆ ಆರಂಭಿಸಲು ಸಿದ್ಧತೆ ನಡೆಸಿತ್ತು. ಕೊನೆಗೂ ಲಾಕ್ ಡೌನ್ ನ ನಡುವೆ ರೈಲ್ವೆ ಟಿಕೆಟ್ ಬುಕಿಂಗ್ ಸೇವೆ ಆರಂಭವಾಗುತ್ತಿದ್ದಂತೆ, ದೇಶಾದ್ಯಂತ ಜನರು ಟಿಕೆಟ್ ಕಾಯ್ದಿರಿಸಲು ನೋಡಿದಾಗ ವೆಬ್‌ಸೈಟ್ ಕ್ರ್ಯಾಶ್ ಆಗಿರುವುದು ಗಮನಕ್ಕೆ ಬಂದಿದೆ. ಸಂಜೆ 4 ಗಂಟೆಗೆ ಆರಂಭವಾಗಬೇಕಿದ್ದ ಟಿಕೆಟ್ ಬುಕಿಂಗ್ ವೆಬ್‌ಸೈಟ್ ಕ್ರ್ಯಾಶ್ ಆದ ಕಾರಣ ಎರಡು ಗಂಟೆ ವಿಳಂಬವಾಗಿ ಆರಂಭವಾಯಿತು.
ದೆಹಲಿಯಲ್ಲಿರುವ ಐ.ಆರ್.ಸಿ.ಟಿ.ಸಿ ಪ್ರಧಾನ ಕಚೇರಿಯಲ್ಲಿನ ಅಧಿಕಾರಿಯೊಬ್ಬರು ವೆಬ್‌ಸೈಟ್ ಕ್ರ್ಯಾಶ್ ಆಗಲು ಕಾರಣ ಏನು ಎಂಬುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ವೆಬ್‌ಸೈಟ್ ಗೆ ಭೇಟಿ ನೀಡುವವರ ಸಂಖ್ಯೆ ಜಾಸ್ತಿಯಾಗಿದೆಯೇ ಅಥವಾ ಇನ್ನೇನಾದರೂ ಕಾರಣವಿದೆಯೇ ಎಂದು ನಾವು ಪರಿಶೀಲಿಸುತ್ತಿದ್ದೇವೆ. ಈ ಮೊದಲು ಇದಕ್ಕಿಂತ ಹೆಚ್ಚು ಟ್ರಾಫಿಕ್ ಬಂದಾಗಲೂ ಈ ರೀತಿ ಆಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಟಿಕೆಟ್ ಬುಕಿಂಗ್ ಮಾಡಲೆಂದು ಎಲ್ಲರೂ ವೆಬ್‌ಸೈಟ್ ಗೆ ಭೇಟಿ ನೀಡುದಿಲ್ಲ. ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಇದೆಯೇ ಎಂಬ ಸುದ್ದಿ ತಿಳಿಯಲು ಮತ್ತು ಟಿಕೆಟ್ ಬುಕಿಂಗ್ ಹೇಗೆ ನಡೆಯುತ್ತದೆ ಎಂಬುದನ್ನು ನೋಡಲು ಅನೇಕರು ವೆಬ್‌ಸೈಟ್ ಗೆ ಭೇಟಿ ನೀಡುತ್ತಾರೆ. ಇದು ಕೂಡ ವೆಬ್‌ಸೈಟ್ ಕ್ರ್ಯಾಶ್ ಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಸೋಮವಾರ ಸಂಜೆ 4.30ಕ್ಕೆ ರೈಲ್ವೆ ಸಚಿವಾಲಯವು ‘ಅಡಚಣೆಗಾಗಿ ಕ್ಷಮಿಸಿ, ಸ್ವಲ್ಪ ಕಾಯಿರಿ’ ಎಂದು ಟ್ವೀಟ್ ಮಾಡಿತ್ತು. ನಂತರ ಟ್ವೀಟ್ ಮಾಡಿದ ಸಚಿವಾಲಯವು ‘ಭಾರತೀಯ ರೈಲ್ವೆಯಲ್ಲಿನ ಪ್ರಯಾಣಿಕರ ಸೇವೆಗಳನ್ನು ಮೇ 12, 2020ರಂದು ಭಾಗಶಃ ಪುನಃಸ್ಥಾಪಿಸಲಾಗುತ್ತದೆ. 15 ನಗರಗಳಿಗೆ 15 ಜೋಡಿ ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ಆನ್ ಲೈನ್ ಇ-ಟಿಕೆಟಿಂಗ್ ಅನ್ನು ಮಾತ್ರ ಐ.ಆರ್.ಸಿ.ಟಿ.ಸಿ ವೆಬ್ ಸೈಟ್ ಮೂಲಕ ನೀಡಲಾಗುತ್ತಿದ್ದು, ಲಗತ್ತಿಸಲಾದ ಪಟ್ಟಿಯನ್ನು ನೋಡಿ ಎಂದಿದೆ.
ಉತ್ತರ ಪ್ರದೇಶದಲ್ಲಿ ಮತ್ತೆ ಅರಳಲಿದೆ ಕಮಲ:ಯುಪಿಯಲ್ಲಿ ಬಿಜೆಪಿಗೆ ಎದುರೇ ಇಲ್ಲ-2027ರಲ್ಲೂ ಬಿಜೆಪಿಗೆ ಭರ್ಜರಿ ಬಹುಮತ ಖಚಿತ ಯೋಗಿ ಭವಿಷ್ಯ
ಮಥುರಾ: ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಭೂತಪೂರ್ವ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಮರಳಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಥುರಾದಲ್ಲಿ...








