ADVERTISEMENT
Sunday, July 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಿಎಂ ಡಿಕೆಶಿಗೆ ಸ್ವಪಕ್ಷದವರೇ ಟ್ರಬಲ್..? ಆದ್ರೆ ರಾಜ್ಯ ಬಿಜೆಪಿ – ಜೆಡಿಎಸ್‍ಗೆ ಟ್ರಬಲ್ ಶೂಟರೇ ಟ್ರಬಲ್..?

admin by admin
June 6, 2026
in Newsbeat, Politics, ರಾಜಕೀಯ, ರಾಜ್ಯ
karnataka cm dkshiva kumar

Is CM DK's own party the problem? But is it the troublemakers who are the problem for the state BJP-JDS?

Share on FacebookShare on TwitterShare on WhatsappShare on Telegram

ಡಿ.ಕೆ. ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಿರುವುದು ರಾಜ್ಯ ಬಿಜೆಪಿ ಮತ್ತು ಜೆಡಿಎಸ್‍ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಇತ್ತೀಚಿನ ದಿನಗಳಲ್ಲಿ ಸಿಎಂ ಡಿಕೆಶಿ ಅವರ ನಡವಳಿಕೆಗಳನ್ನು ಗಮನಿಸಿದಾಗ ಬಿಜೆಪಿ ಮತ್ತು ಜೆಡಿಎಸ್‍ಗೆ ಮುಳ್ಳಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳಿವೆ. ಯಾಕಂದ್ರೆ ಟ್ರಬಲ್ ಶೂಟರ್ ಖ್ಯಾತಿಯ ಡಿಕೆಶಿ ಎಲ್ಲವನ್ನೂ ಅಳೆದು ತೂಗಿ ಹೆಜ್ಜೆಯನ್ನಿಡುತ್ತಿದ್ದಾರೆ. ತನ್ನ ಮುಂದಿನ ಯೋಜನೆಗಳನ್ನು ಯೋಚನೆ ಮಾಡಿಕೊಂಡು, ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಕೂಡ ಸುಳ್ಳಲ್ಲ.
ಸಿಎಂ ಪಟ್ಟದಲ್ಲಿ ಕೂತ ಬಳಿಕ ಡಿಕೆಶಿಯೂ ಬದಲಾವಣೆಯಾಗುತ್ತಿದ್ದಾರೆ. ಆಡಳಿತದಲ್ಲೂ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದ್ದಾರೆ. 2028ಕ್ಕೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಹಾಗಂತ ಖಂಡಿತವಾಗಿಯೂ ಡಿಕೆಶಿಗೆ ಸಿಎಂ ಪಟ್ಟ ಹೂವಿನ ಹಾಸಿಗೆಯಲ್ಲ. ಮುಳ್ಳಿನ ಮೇಲೆ ಕುಳಿತುಕೊಂಡೇ ಅಧಿಕಾರ ನಡೆಸಬೇಕು. ಇಲ್ಲಿ ಡಿಕೆಶಿಗೆ ಬಿಜೆಪಿ ಮತ್ತು ಜೆಡಿಎಸ್‍ಗಿಂತಲೂ ಪ್ರಬಲ ವಿರೋಧಿಗಳು ಇರೋದು ಸ್ವಪಕ್ಷದವರೇ. ಹಾಗಾಗಿ ಯಾವುದೇ ತೀರ್ಮಾನವಾಗಿರಲಿ, ನಿರ್ಧಾರವಾಗಲಿ ತೆಗೆದುಕೊಳ್ಳುವುದು ಹಿಂದಿನ ಡಿಕೆಶಿ ರೀತಿಯಲ್ಲಾದ್ರೆ ಅಪಾಯವೂ ತಪ್ಪಿದ್ದಲ್ಲ.
ಸಿಎಂ ಪಟ್ಟಕ್ಕೇರಿದ ಎರಡೇ ದಿನದಲ್ಲಿ ಮೂವರು ಸಚಿವರ ಅಸಮಾಧಾನ ಸ್ಫೋಟಗೊಂಡಾಗ ಎಲ್ಲವನ್ನೂ ಸರಿ ಮಾಡುತ್ತೇನೆ ಅಂತ ಸಂಯಮದಿಂದಲೇ ಹೇಳಿದ್ದಾರೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನ ಸಭೆಗೆ ಆಗಮಿಸಿದಾಗ ಡಿಕೆಶಿ ಜೊತೆಯಲ್ಲೇ ವಿಧಾನ ಸೌಧದಲ್ಲಿರುವ ಪ್ರತಿಮೆಗಳಿಗೆ ಪುಷ್ಪಾರ್ಚಣೆ ಮಾಡಿದ್ದ್ದ ಮುನಿಯಪ್ಪ ಮರುದಿನವೇ ಅಸಮಾಧಾನ ಹೊರಹಾಕಿದ್ದರು.ಇನ್ನೊಂದೆಡೆ ಮಾತಿಗೆ ತಪ್ಪಿದ್ದಾರೆ ಅಂತ ರಾಮಲಿಂಗಾ ರೆಡ್ಡಿ ರಾಜೀನಾಮೆಯನ್ನೇ ನೀಡಿದ್ದರು. ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಕೆ.ಜೆ.ಜಾರ್ಜ್ ಇಲಾಖೆಯ ಅಧಿಕಾರಿಯನ್ನು ಬದಲಾವಣೆ ಮಾಡಿದ್ದಾರೆ ಅಂತ ಆಕ್ರೋಶವೇ ಹೊರಹಾಕಿದ್ದರು.
ಅದೇನೋ ಗೊತ್ತಿಲ್ಲ. ಈ ಎಲ್ಲಾ ಘಟನೆಗಳು ನಡೆದಿರುವುದು ರಾಜ್ಯಕ್ಕೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಆಗಮಿಸಿದಾಗಲೇ ಆಗಿರುವುದು ವಿಶೇಷ. ಇದು ಒಂದು ರೀತಿಯಲ್ಲಿ ಡಿಕೆಶಿಗೆ ಪ್ಲಸ್ ಪಾಯಿಂಟ್ ಆಗಿದೆ. ಅಲ್ಲದೆ ರಾಹುಲ್ ಗಾಂಧಿಯವರ ಖಡಕ್ ಸಂದೇಶದ ಮುಂದೆ ಹಿರಿಯರ ಶಾಸಕರು ಸೈಲೆಂಟ್ ಆಗಿದ್ದರು. ಅಲ್ಲದೆ ಮುನಿಯಪ್ಪನವರು ಮುನಿಸು ಮರೆತ್ರೆ, ಜಾರ್ಜ್ ಅವರು ಮತ್ತೆ ಚಾರ್ಜ್ ಆದ್ರು.
ಇನ್ನೊಂದೆಡೆ, ಗೆಳೆಯ ರಾಮಲಿಂಗಾ ರೆಡ್ಡಿ ಅವರ ಅಸಮಾಧಾನವನ್ನು ತಣಿಸಲು ಸ್ವತಃ ಸಿಎಂ ಡಿಕೆಶಿವಕುಮಾರ್ ಅವರೇ ಅಖಾಡಕ್ಕೆ ಧುಮುಕಿ ಸದ್ಯಕ್ಕೆ ಭಿನ್ನರಾಗಗಳನ್ನು ನಿಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ ಡಿಕೆಶಿಗೆ ಇನ್ನಷ್ಟು ಟ್ರಬಲ್‍ಗಳು ಸ್ವಪಕ್ಷದಿಂದಲೇ ಎದುರಾಗೋದು ಖಚಿತ ಮತ್ತು ನಿಶ್ವಿತ.
ಇತ್ತ ಕಾಂಗ್ರೆಸ್ ಮತ್ತು ಡಿಕೆಶಿ ಸರ್ಕಾರದ ಬೆಳವಣಿಗೆಗಳ ಬಗ್ಗೆ ಪ್ರತಿಪಕ್ಷ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ತಮ್ಮ ಪಕ್ಷವೇ ಮನೆಯೊಂದು ಮೂರು ಬಾಗಿಲು ಆಗಿದೆ. ಅದನ್ನು ಸರಿಪಡಿಸಿಕೊಳ್ಳುವುದು ಬಿಟ್ಟು ಕಾಂಗ್ರೆಸ್ ಪಕ್ಷದಲ್ಲಿನ ಅಸಮಾಧಾನಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೂ ಬರೀ ಸಿದ್ದರಾಮಯ್ಯ ಹಾಗೂ ಅಲ್ಲಿನ ನಾಯಕರ ಬಗ್ಗೆ ಬೈಯುವುದನ್ನು ಬಿಟ್ಟು ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಪಕ್ಷವಾಗಿ ಬಿಜೆಪಿ ಯಾವುದಾದ್ರೂ ಒಂದೇ ಒಂದು ಹೋರಾಟವನ್ನು ಮಾಡಿದೆಯಾ..? ಸರ್ಕಾರದ ಲೋಪದೋಷಗಳನ್ನು ಪಟ್ಟಿಮಾಡಿಕೊಂಡು ವಿಧಾನಸಭೆಯಲ್ಲಿ ಜೋರು ಧ್ವನಿಯಲ್ಲಿ ಬಿಜೆಪಿ- ಜೆಡಿಎಸ್ ನಾಯಕರು ಮಾತನಾಡಿದ್ದಾರಾ..? ಪ್ರತಿಪಕ್ಷಗಳೇ ವೀಕ್ ಆಗಿರುವಾಗ ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ಸರ್ಕಾರ ಕೂಡ ರಾಜ್ಯದ ಅಭಿವೃದ್ದಿ ಮತ್ತು ಸಮಸ್ಯೆಗಳ ಬಗ್ಗೆ ಅಸಡ್ಡೆ ತೋರಿಸಿರುವುದು ವಿಪರ್ಯಾಸವೇ ಸರಿ.
ಹೌದು, ಈಗ ರಾಜ್ಯದ ಸಿಎಂ ಡಿ.ಕೆ. ಶಿವಕುಮಾರ್. ಅಹಂಕಾರಿ, ಯಾರ ಮಾತು ಕೇಳಲ್ಲ.. ಭ್ರಷ್ಟಚಾರದ ಆರೋಪ ಬಿಟ್ರೆ ಡಿಕೆಶಿಯವರನ್ನು ವೈಯಕ್ತಿಕವಾಗಿ ಟೀಕೆ ಮಾಡುವ ಯಾವ ವಿಷ್ಯಗಳು ಇಲ್ಲ. ಈ ಹಿಂದೆ ಬಿಜೆಪಿಯವರಿಗೆ ಏನು ವಿಷ್ಯ ಸಿಗದೇ ಇದ್ದಾಗ ಸಿದ್ದರಾಮಯ್ಯನವರು ಹಿಂದೂ ವಿರೋಧಿ ಎಂದು ಟೀಕಿಸುತ್ತಿದ್ದರು. ಆದ್ರೆ ಡಿಕೆಶಿಯವರನ್ನು ಹಿಂದೂ ವಿರೋಧಿ ಅಂತ ಹೇಳುವ ಯಾವ ನೈತಿಕತೆಯೂ ಬಿಜೆಪಿಯವರಿಗಿಲ್ಲ. ಧರ್ಮ, ದೇವರು, ನಂಬಿಕೆ, ನಿಷ್ಠೆ ವಿಚಾರದಲ್ಲಿ ಡಿಕೆಶಿಯವರ ಮುಂದೆ ಯಾವ ಬಿಜೆಪಿ ನಾಯಕನೂ ಮುಂಚೂಣಿಗೆ ಬರಲ್ಲ. ಕೇವಲ ಬಾಯಿ ಮಾತಿಗೆ ಅಷ್ಟೇ ಸೀಮಿತವಾಗಿರುವ ರಾಜ್ಯ ಬಿಜೆಪಿ ನಾಯಕರು ಇನ್ನಾದ್ರೂ ಎಚ್ಚೆತ್ತುಕೊಳ್ಳಬೇಕಿದೆ.
ಅಂದ ಹಾಗೇ, ಮೊನ್ನೆ ಸಿಎಂ ಡಿಕೆಶಿ ಘೋಷಣೆ ಮಾಡಿರುವ ಭಾರತ್ ಜೋಡೋ ಯುವಕರ ಸಂಘದ ಹಿಂದೆ ಮಾಸ್ಟರ್ ಪ್ಲಾನೇ ಇದೆ. ಬಿಜೆಪಿಗೆ ತಳಮಟ್ಟದಲ್ಲಿ ಆರ್‍ಎಸ್‍ಎಸ್ ಹೇಗೆ ಕೆಲಸ ಮಾಡುತ್ತಿದೆಯಾ ಅದೇ ರೀತಿ ಭಾರತ್ ಜೋಡೋ ಯುವಕರ ಸಂಘ ಕೂಡ ಕಾಂಗ್ರೆಸ್‍ಗೆ ಶಕ್ತಿ ತುಂಬಲಿದೆ. ಮೊದಲೇ ಸಂಘಟನಾ ಚತುರನಾಗಿರುವ ಡಿಕೆಶಿ ಈ ಯೋಜನೆಯನ್ನು ಸರಿಯಾಗಿ ಕಾರ್ಯರೂಪಕ್ಕೆ ತಂದ್ರೆ ಹಿಂದೂತ್ವದ ಅಮಲಿನಲ್ಲಿರುವ ಬಿಜೆಪಿಗೆ ಅಪಾಯ ತಪ್ಪಿದ್ದಲ್ಲ.
ಹಾಗೇ, ಎಸ್‍ಐಆರ್ ಬಗ್ಗೆಯೂ ಸಿಎಂ ಡಿಕೆಶಿ ಎಚ್ಚರಿಕೆಯ ನಡೆಯನ್ನಿಟ್ಟಿದ್ದಾರೆ. ಪಕ್ಷದ ಪ್ರತಿಯೊಬ್ಬ ಶಾಸಕರಿಗೆ, ನಾಯಕರಿಗೂ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಆದ್ರೆ ಬಿಜೆಪಿ ನಾಯಕರು ಇದರ ಬಗ್ಗೆ ತಲೆನೇಕೆಡಿಸಿಕೊಂಡಿಲ್ಲ. ಹೇಗಿದ್ರೂ ಪ್ರಧಾನಿ ಮೋದಿ, ಅಮಿತ್ ಶಾ ಇದ್ದಾರಲ್ವಾ ಎಂಬ ಅಸಡ್ಡೆಯಲ್ಲಿ ಮುಳುಗಿದ್ದಾರೆ. ಬಿಜೆಪಿಯ ಹೋರಾಟ, ಹಾರಾಟ ಎಲ್ಲವೂ ಬಿಎಸ್‍ವೈ, ಅನಂತ್ ಕುಮಾರ್ ಕಾಲದಲ್ಲೇ ಮುಗಿದು ಹೋಯ್ತು. ಪ್ರಸ್ತುತ ಬಿಜೆಪಿ ಇದೇ ನಾಯಕರನ್ನು ಮುಂದಿಟ್ಟುಕೊಂಡು ಮುನ್ನಡೆದ್ರೆ ರಾಜ್ಯದಲ್ಲಿ ಬಿಜೆಪಿ ಕತೆ ಮುಗಿದ ಹಾಗೆ.
ಇನ್ನೊಂದೆಡೆ, ಡಿಕೆಶಿ ಸಿಎಂ ಆಗಿರೋದು ಜೆಡಿಎಸ್‍ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಕ್ಕಲಿಗರ ಪ್ರಭಾವಿ ನಾಯಕನಾಗಿ ಬೆಳೆಯುತ್ತಿರುವ ಡಿಕೆಶಿಯಿಂದ ಒಕ್ಕಲಿಗ ಮತಗಳು ಕಳೆದುಕೊಳ್ಳುತ್ತೇವೆ ಎಂಬ ಆಂತಕವಂತೂ ಇದ್ದೆ. ಹಾಗೇ ನೋಡಿದ್ರೆ ಬಿಜೆಪಿ ನಾಯಕರಿಗಿಂತ ಜೆಡಿಎಸ್‍ನ ಯುವ ನಾಯಕ ನಿಖಿಲ್ ಕುಮಾರ್ ಸ್ವಾಮಿ ಕನಿಷ್ಠ ರಾಜ್ಯ ಪ್ರವಾಸ ಮಾಡಿಕೊಂಡು ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಕೇವಲ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗುತ್ತಿದ್ದಾರೆ. ರಾಜ್ಯ ಬಿಜೆಪಿಯ ಮಾಸ್ ಲೀಡರ್ ಯಾರು ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ.
ಹೀಗಾಗಿ ಬಿಜೆಪಿ – ಜೆಡಿಎಸ್ ನಾಯಕರು ಇನ್ನಾದ್ರೂ ಎಚ್ಚೆತ್ತುಕೊಳ್ಳಬೇಕು. ಸರ್ಕಾರದ ಲೋಪದೋಷಗಳ ಬಗ್ಗೆ ಜೋರು ಧ್ವನಿಯಲ್ಲಿ ಮಾತನಾಡಬೇಕು. ಬೀದಿಗಿಳಿದು ಹೋರಾಟ ನಡೆಸಬೇಕು. ಹಾಗೇ ಸರ್ಕಾರದ ಜನಪರ ಯೋಜನೆಗಳನ್ನು ಬೆಂಬಲಿಸಬೇಕು. ಅದು ಬಿಟ್ಟು ಪ್ರತಿಯೊಂದನ್ನು ಬಾಯಿ ಮಾತಿನಲ್ಲೇ ವಿರೋಧಿಸುವುದಲ್ಲ. ಬದಲಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಬರೀ ಮೋದಿ, ಅಮಿತ್ ಶಾ ಭಜನೆ ಮಾಡಿಕೊಂಡು ಕುಳಿತರೆ ಆಗಲ್ಲ. ಇನ್ನಾದ್ರೂ ಎಚ್ಚೆತ್ತುಕೊಳ್ಳಿ.. ಯಾಕಂದ್ರೆ ಸಿಎಂ ಸಿದ್ದರಾಮಯ್ಯ ಅಲ್ಲ.. ಸಿಎಂ ಡಿ.ಕೆ. ಶಿವಕುಮಾರ್.

ಸನತ್ ರೈ

Related posts

FIFA RING

fifa ring – ಕೌಂಟ್‍ಡೌನ್ ಶುರು..! ಮೆಸ್ಸಿ ಹುಡುಗರಾ..? ಯಮಲ್ ಗೆಳೆಯರಾ..? ಫಿಫಾ ಟ್ರೋಫಿ ಯಾರ ಮುಕುಟಕ್ಕೆ..? ಚಿನ್ನದ ಪದಕ ಯಾರ ಕೊರಳಿಗೆ..? ರಾಜಮುದ್ರೆಯಂತಹ ಫಿಫಾ ರಿಂಗ್ ಯಾರ ಕೈ ಬೆರಳಿಗೆ..?

July 19, 2026
Why newly married couple separate in Ashadha

Astro- ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ..? 

July 19, 2026
Tags: #cmdkshiteam#cmdkshivakumar#nikhilkumaraswamy#vijeyendraBJPCongressJDSKarnatakacmR Ashoksiddaramiah
ShareTweetSendShare
Join us on:

Related Posts

FIFA RING

fifa ring – ಕೌಂಟ್‍ಡೌನ್ ಶುರು..! ಮೆಸ್ಸಿ ಹುಡುಗರಾ..? ಯಮಲ್ ಗೆಳೆಯರಾ..? ಫಿಫಾ ಟ್ರೋಫಿ ಯಾರ ಮುಕುಟಕ್ಕೆ..? ಚಿನ್ನದ ಪದಕ ಯಾರ ಕೊರಳಿಗೆ..? ರಾಜಮುದ್ರೆಯಂತಹ ಫಿಫಾ ರಿಂಗ್ ಯಾರ ಕೈ ಬೆರಳಿಗೆ..?

by admin
July 19, 2026
0

ಕೌಂಟ್‍ಡೌನ್ ಶುರು..! ಮೆಸ್ಸಿ ಹುಡುಗರಾ..? ಯಮಲ್ ಗೆಳೆಯರಾ..? ಫಿಫಾ ಟ್ರೋಫಿ ಯಾರ ಮುಕುಟಕ್ಕೆ..? ಚಿನ್ನದ ಪದಕ ಯಾರ ಕೊರಳಿಗೆ..? ರಾಜಮುದ್ರೆಯಂತಹ ಫಿಫಾ ರಿಂಗ್ ಯಾರ ಕೈ ಬೆರಳಿಗೆ..?...

Why newly married couple separate in Ashadha

Astro- ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ..? 

by admin
July 19, 2026
0

ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ..? ಆಷಾಡ ಮಾಸ ಬಂದರೇ ಸಾಕು ಮನೆಯಲ್ಲಿ ಯಾವುದೇ ರೀತಿಯ ಶುಭಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಒಬ್ಬರಿಗೆ ಮಾತ್ರ...

ದೆಹಲಿಯಲ್ಲಿ ದಂಗೆ ಎದ್ದ ಕಾಕ್ರೋಚ್ ಪಡೆ: ಪ್ರಧಾನ್ ಆಯ್ತು ಈಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ ಶುರು

ದೆಹಲಿಯಲ್ಲಿ ದಂಗೆ ಎದ್ದ ಕಾಕ್ರೋಚ್ ಪಡೆ: ಪ್ರಧಾನ್ ಆಯ್ತು ಈಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ ಶುರು

by Shwetha
July 19, 2026
0

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಸರಣಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಈಗ ಕೇಂದ್ರ ಸರ್ಕಾರದ ಬುಡಕ್ಕೆ ಬಂದು ತಲುಪಿವೆ. ಕಳೆದ 21 ದಿನಗಳಿಂದ ದೆಹಲಿಯ...

ಕುಡಿಯುವ ನೀರು ಕೃಷಿಗೆ ಬಳಸಬೇಡಿ: ರೈತರಿಗೆ ಸಿಎಂ ಡಿ ಕೆ ಶಿವಕುಮಾರ್ ಖಡಕ್ ವಾರ್ನಿಂಗ್

ಕುಡಿಯುವ ನೀರು ಕೃಷಿಗೆ ಬಳಸಬೇಡಿ: ರೈತರಿಗೆ ಸಿಎಂ ಡಿ ಕೆ ಶಿವಕುಮಾರ್ ಖಡಕ್ ವಾರ್ನಿಂಗ್

by Shwetha
July 19, 2026
0

ರಾಜ್ಯದಲ್ಲಿ ಮಳೆಯ ಅಭಾವ ತಲೆದೂರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರೈತರಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ. ಜಲಾಶಯಗಳಿಂದ ಹರಿಸಲಾಗುತ್ತಿರುವ ನೀರನ್ನು ಕೇವಲ ಕುಡಿಯುವ...

ಕರಾವಳಿ ವಿವಾದಕ್ಕೆ ಅಂತ್ಯ ಹಾಡಿದ ರಾಜ್ ಬಿ ಶೆಟ್ಟಿ: ವಿವಾದ ಮಾಡೋದು ನಮಗೂ ನೋವು ತರುತ್ತೆ ಎಂದು ಕ್ಷಮೆಯಾಚಿಸಿದ ನಟ -ಕಂಟೆಂಟ್ ಇಲ್ಲ ಅಂತ ಟೀಕಿಸಿದವರಿಗೆ ಪ್ರೀಮಿಯರ್ ಶೋ ಮೂಲಕವೇ ಉತ್ತರ

ಕರಾವಳಿ ವಿವಾದಕ್ಕೆ ಅಂತ್ಯ ಹಾಡಿದ ರಾಜ್ ಬಿ ಶೆಟ್ಟಿ: ವಿವಾದ ಮಾಡೋದು ನಮಗೂ ನೋವು ತರುತ್ತೆ ಎಂದು ಕ್ಷಮೆಯಾಚಿಸಿದ ನಟ -ಕಂಟೆಂಟ್ ಇಲ್ಲ ಅಂತ ಟೀಕಿಸಿದವರಿಗೆ ಪ್ರೀಮಿಯರ್ ಶೋ ಮೂಲಕವೇ ಉತ್ತರ

by Shwetha
July 19, 2026
0

ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಗುರುದತ್ ಗಾಣಿಗ ನಡುವಿನ ಸಂಭಾವನೆ ಹಾಗೂ ಡಬ್ಬಿಂಗ್ ವಿವಾದದಿಂದ ಸದ್ದು ಮಾಡುತ್ತಿದ್ದ ಕರಾವಳಿ ಚಿತ್ರದ ಕುರಿತು ನಟ ರಾಜ್ ಬಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram