ಮೈಸೂರು : ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಾಳೆ ಕರ್ನಾಟಕ ಬಂದ್ ಗೆ ರೈತರ ಸಂಘಟನೆಗಳು ಕರೆ ನೀಡಿದೆ.
ಈ ಬಗ್ಗೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, ಈ ಬಂದ್ ನಲ್ಲಿ ರೈತರು ಭಾಗಿಯಾಗ್ತಿಲ್ಲ, ಆದ್ರೆ ರೈತರ ಹೆಸರಿನ ಸಂಘಟನೆಗಳು ಭಾಗಿಯಾಗ್ತಿವೆ.
ಈ ಬಂದ್ ನಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಪರ ಕಾಯ್ದೆ ಜಾರಿ ಮಾಡಿದ್ರೆ ರೈತರಿಗೆ ಆಗುವ ಅನುಕೂಲದ ಬಗ್ಗೆ ನಾವು ಯೋಚನೆ ಮಾಡ್ತಿವಿ.
ಬಂದ್ ಮಾಡುವವರು ಬಂದ್ ನ ಲಾಭದ ಬಗ್ಗೆ ಯೋಚನೆ ಮಾಡುತ್ತಾರೆ.
ಲುಡೋ ಆಟದಲ್ಲಿ ಮೋಸ : ತಂದೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಗಳು
ಹಾಗಾಗಿ ದಳ್ಳಾಳಿ ವ್ಯವಸ್ಥೆಯಿಂದ ರೈತರನ್ನ ಮುಕ್ತ ಮಾಡುವುದು ತಪ್ಪಾ? ರೈತನಿಗೆ ಮತ್ತು ಗ್ರಾಹಕನಿಗೆ ಲಾಭವಿಲ್ಲದ ದಳ್ಳಾಳಿಗೆ ಲಾಭವಿರುವ ಕಾಯ್ದೆ ತಿದ್ದುಪಡಿ ಮಾಡಿದ್ದು ತಪ್ಪಾ? ಎಂದು ಪ್ರಶ್ನಿಸಿದರು.
ಎಪಿಎಂಸಿ ಚುನಾವಣೆಗೆ ಲಕ್ಷಾಂತರ ಖರ್ಚು ಮಾಡಿ ಏಕೆ ನಡೆಸುತ್ತಾರೆ.
ಲಾಭವಿಲ್ಲದೆ ಈ ರೀತಿ ಚುನಾವಣೆ ನಡೆಸಲು ಸಾಧ್ಯವೇ ? ರೈತರಿಂದಲೇ ಸೆಸ್ ಸುಲೀಗೆ ಮಾಡಿ ಲಾಭ ಮಾಡುತ್ತಿರುವವರು ದಳ್ಳಾಳಿಗಳು.
ಸೂಪರ್ ಮಾರ್ಕೆಟ್ ಒಳಗೆ ಬಿಟ್ಟುಕೊಂಡಿದ್ದು ಯಾರು. ವಿರೋಧ ಮಾಡುವುದಿದ್ದರೇ ಸೂಪರ್ ಮಾರ್ಕೆಟ್ ಗಳನ್ನೆ ವಿರೋಧ ಮಾಡಬೇಕಿತ್ತು ಎಂದು ಪ್ರತಾಪ್ ಸಿಂಹ ಗುಡುಗಿದರು.