ಗುರುವಿನ ಮಾತು ತಪ್ಪದ ಇಶಾನ್ ಕಿಶಾನ್… ಕೋಚ್ ತಂದೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಅರ್ಪಣೆ..!

1 min read
Ishan Kishan team india saakshatv

ಗುರುವಿನ ಮಾತು ತಪ್ಪದ ಇಶಾನ್ ಕಿಶಾನ್… ಕೋಚ್ ತಂದೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಅರ್ಪಣೆ..!

Ishan Kishan dedicates match-winning 56 to his childhood coach’s late father

Ishan Kishan team india saakshatvಇಶಾನ್ ಕಿಶಾನ್… ಇಷ್ಟು ದಿನ ಮುಂಬೈ ಇಂಡಿಯನ್ಸ್ ಮತ್ತು ಜಾರ್ಖಂಡ್ ತಂಡದ ಹೊಡಿಬಡಿ ಆಟಗಾರ. ಇದೀಗ ಟೀಮ್ ಇಂಡಿಯಾ ಕ್ರಿಕೆಟಿನ ಸಿಡಿಲ ಮರಿ.
22ರ ಹರೆಯದ ಇಶಾನ್ ಕಿಶಾನ್ ತನ್ನ ಚೊಚ್ಚಲ ಟಿ-ಟ್ವೆಂಟಿ ಪಂದ್ಯದಲ್ಲೇ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ದಾಖಲಿಸಿ ವಿಶ್ವ ಕ್ರಿಕೆಟ್ ನ ಗಮನ ಸೆಳೆದಿದ್ದಾರೆ.
ಅಂದ ಹಾಗೇ ಇಶಾನ್ ಕಿಶಾನ್ ಆಡಿದ ರೀತಿ ಅಚ್ಚರಿ ಏನು ಉಂಟು ಮಾಡಿಲ್ಲ. ಯಾಕಂದ್ರೆ ಈ ಯುವ ಬ್ಯಾಟ್ಸ್‍ಮೆನ್ ತನ್ನ ತಾಕತ್ತು, ಸಾಮಥ್ರ್ಯ ಏನು ಎಂಬುದನ್ನು ಆಗಲೇ ಪ್ರೂವ್ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಜಾರ್ಖಂಡ್ ಪರ ನಿರರ್ಗಳವಾಗಿ ಬ್ಯಾಟ್ ಬೀಸಿ ಟೀಮ್ ಇಂಡಿಯಾದ ಕದ ತಟ್ಟುತ್ತಿದ್ದರು.
ಇದಿಗ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟಿ-ಟ್ವೆಂಟಿ ಪಂದ್ಯದಲ್ಲಿ ಇಶಾನ್ ಕಿಶನ್ ಬ್ಯಾಟಿಂಗ್ ವೈಖರಿಗೆ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯೇ ಫಿದಾ ಆಗಿದ್ದಾರೆ.
ಆರಂಭದಲ್ಲೇ ರಾಹುಲ್ ವಿಕೆಟ್ ಪತನಗೊಂಡಾಗ ಇಶಾನ್ ಕಿಶಾನ್ ಜೊತೆ ಸೇರಿಕೊಂಡ ವಿರಾಟ್ ಕೊಹ್ಲಿ ತಂಡಕ್ಕೆ ಆಧಾರವಾಗಿ ನಿಂತ್ರು. ಗೆಲ್ಲಲೇಬೇಕು, ರನ್ ದಾಖಲಿಸಬೇಕು ಎಂಬ ಹಠದಲ್ಲೇ ಬ್ಯಾಟ್ ಬೀಸುತ್ತಿದ್ದ ವಿರಾಟ್ ಕೊಹ್ಲಿಗೆ ಇಶಾನ್ ಕಿಶಾನ್ ಯಾವುದೇ ರೀತಿಯಲ್ಲೂ ಒತ್ತಡಕ್ಕೆ ಸಿಲುಕುವಂತೆ ಮಾಡಲಿಲ್ಲ.
ಪ್ರತಿ ಹಂತದಲ್ಲೂ ಇಶಾನ್ ಕಿಶಾನ್ ಜೊತೆ ಸಂವಾದ ನಡೆಸುತ್ತಿದ್ದ ನಾಯಕ ವಿರಾಟ್ ಕೊಹ್ಲಿ ಯುವ ಕ್ರಿಕೆಟಿಗನನ್ನು ಉತ್ತೇಜಿಸಿದ ರೀತಿಯೂ ಅದ್ಭುತವಾಗಿತ್ತು. ಬೌಂಡರಿ ಸಿಕ್ಸರ್ ಬಾರಿಸಿದಾಗ ನಾಯಕ ಎಂಬುದನ್ನು ಮರೆತು ಗೆಳೆಯನಂತೆ ತಬ್ಬಿಕೊಂಡು ಸ್ಫೂರ್ತಿ ನೀಡುತ್ತಿದ್ದ ಕೊಹ್ಲಿಯ ನಾಯಕತ್ವ ಇಷ್ಟವಾಗುತ್ತಿತ್ತು.

Ishan Kishan dedicates match-winning 56 to his childhood coach’s late father

Ishan Kishan team india saakshatv virat kohliಇಶಾನ್ ಕಿಶಾನ್ ಸಹಜವಾಗಿ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿರುವುದರಿಂದ ಸ್ವಲ್ಪ ಒತ್ತಡಕ್ಕೆ ಸಿಲುಕಿದ್ದರು. ಆದ್ರೆ ಬ್ಯಾಟಿಂಗ್ ಲಯ ಕಂಡುಕೊಂಡ ನಂತರ ಇಂಗ್ಲೀಷ್ ಬೌಲರ್ ಗಳ ಬೇವರಿಳಿಸಿದ್ರು.
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್ ಕ್ರಿಸ್ಟ್ ಅವರನ್ನು ಮಾದರಿಯಾಗಿಟ್ಟುಕೊಂಡು ಕ್ರಿಕೆಟ್ ಆಡಲು ಕಲಿತ ಇಶಾನ್ ಕಿಶಾನ್ ಸಾಕಷ್ಟು ಭರವಸೆ ಮೂಡಿಸಿದ್ದಾರೆ.
ಮೂಲತಃ ಬಿಹಾರದವರಾಗಿದ್ರೂ ಕ್ರಿಕೆಟ್ ಜರ್ನಿ ಶುರು ಮಾಡಿದ್ದು ಜಾರ್ಖಂಡ್ ಮೂಲಕ. 19 ವಯೋಮಿತಿ, ಭಾರತ ಎ ತಂಡ, ಮುಂಬೈ ಇಂಡಿಯನ್ಸ್ ತಂಡದ ಪರ ಅದ್ಭುತವಾಗಿ ಬ್ಯಾಟ್ ಬೀಸಿದ್ದ ಇಶಾನ್ ಕಿಶಾನ್ ಅವರು ಟೀಮ್ ಇಂಡಿಯಾದ ಕದ ತಟ್ಟುತ್ತಲೇ ಇದ್ರು. ಈಗ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ್ರೆ ಟೀಮ್ ಇಂಡಿಯಾಗೆ ಮತ್ತೊಬ್ಬ ಹೊಡಿಬಡಿ ಆಟಗಾರ ಸಿಕ್ಕಾಂತಾಗುತ್ತೆ.
ಇನ್ನು ಚೊಚ್ಚಲ ಟಿ-20 ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದ ಭಾರತದ ನಾಲ್ಕನೇ ಆಟಗಾರನಾಗಿ ಇಶಾಂತ್ ಕಿಶಾನ್ ಹೊರಹೊಮ್ಮಿದ್ದಾರೆ. ಈ ಹಿಂದೆ ಅಜಿಂಕ್ಯಾ ರಹಾನೆ, ರಾಬಿನ್ ಉತ್ತಪ್ಪ ಮತ್ತು ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದರು.

ಇನ್ನು ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಇಶಾನ್ ಕಿಶಾನ್ ಅಲ್ಲೂ ಕೂಡ ಉದಾರತೆಯನ್ನು ಪ್ರದರ್ಶಿಸಿದ್ದಾರೆ. ಸಾಮಾನ್ಯವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಾಗ ಆಟಗಾರರು ಕೋಚ್ ಅಥವಾ ಹೆತ್ತವರಿಗೆ ಅರ್ಪಣೆ ಮಾಡುವುದು ಸಹಜ. ಆದ್ರೆ ಇಶಾನ್ ಕಿಶಾನ್ ಈ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನ ಕೋಚ್ ಅವರ ತಂದೆಗೆ ಅರ್ಪಣೆ ಮಾಡಿದ್ದಾರೆ. ಇಶಾನ್ ಕಿಶಾನ್ ಅವರ ಕೋಚ್ ಪಂದ್ಯಕ್ಕೆ ಮುನ್ನವೇ ಕನಿಷ್ಠ ನೀನು ಅರ್ಧಶತಕ ದಾಖಲಿಸಿ ತನ್ನ ತಂದೆಗೆ ಅರ್ಪಣೆ ಮಾಡಬೇಕು ಎಂದು ಹೇಳಿದ್ದರಂತೆ. ಗುರುವಿನ ಮಾತಿಗೆ ತಪ್ಪದ ಶಿಷ್ಯ ಇಶಾನ್ ಕಿಶಾನ್ ಅರ್ಧಶತಕ ದಾಖಲಿಸಿದ್ದು ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಗುರುವಿನ ಅಣತಿಯಂತೆ ಅವರ ತಂದೆಗೆ ಅರ್ಪಣೆ ಮಾಡಿದ್ದರು. ಇಶಾನ್ ಕಿಶಾನ್ ಕೋಚ್ ಅವರ ತಂದೆ ಇತ್ತಿಚೆಗಷ್ಟೇ ನಿಧನರಾಗಿದ್ದರು.
ಇದೇ ವೇಳೆ, ಇಶಾನ್ ಕಿಶಾನ್ ನಾಯಕ ವಿರಾಟ್ ಕೊಹ್ಲಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಾಯಕ ಕೊಹ್ಲಿಯವರಿಂದ ಕಲಿಯುವುದು ಸಾಕಷ್ಟಿದೆ. ಅವರ ಆಟವನ್ನು ಐಪಿಎಲ್ ನಲ್ಲಿ ಹತ್ತಿರದಿಂದ ನೋಡಿದ್ದೆ. ಹಾಗೇ ಟಿವಿಯಲ್ಲೂ ನೋಡ್ತಾ ಇದ್ದೆ. ಇದೀಗ ಟೀಮ್ ಇಂಡಿಯಾದ ಪರ ನೋಡಿದ್ದೇನೆ. ಅವರ ಆಕ್ರಮಣಕಾರಿ ಪ್ರವೃತ್ತಿ, ಕಲಿಯುವ ಹಠ, ಗೆಲ್ಲಬೇಕು ಅನ್ನೋ ಛಲ, ಸಹ ಆಟಗಾರರಿಗೆ ನೀಡುವ ಸ್ಫೂರ್ತಿ ಹೀಗೆ ಅವರಿಂದ ಕಲಿಯುವುದು ತುಂಬಾನೇ ಇದೆ ಎಂದು ಇಶಾನ್ ಕಿಶಾನ್ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಈಗ ಯುವ ಆಟಗಾರರ ದಂಡು ಸಾಲು ಸಾಲಾಗಿ ನಿಂತಿದ್ದಾರೆ. ಶುಬ್ಮನ್ ಗಿಲ್, ಪೃಥ್ವಿ ಶಾ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್ ಹೀಗೆ ಅದ್ಭುತ ಪ್ರತಿಭೆಗಳಿದ್ದಾರೆ. ಹೀಗಾಗಿ ಹಿರಿಯ ಹಾಗೂ ಅನುಭವಿ ಆಟಗಾರರಿಗೆ ಎಚ್ಚರಿಕೆಯ ಸಂದೇಶವೂ ರವಾನಿಯಾಗುತ್ತಿದೆ. ಒಟ್ಟಾರೆ ಅವಕಾಶಗಳನ್ನು ಕಳೆದುಕೊಂಡ್ರೆ ಟೀಮ್ ಇಂಡಿಯಾದಲ್ಲಿ ಹಿರಿಯ ಆಟಗಾರರೇ ಇರಲಿ, ಭರವಸೆಯ ಯುವ ಆಟಗಾರರೇ ಇರಲಿ, ಖಾಯಂ ಸ್ಥಾನ ಯಾರಿಗೂ ಇಲ್ಲ. ಯಾಕಂದ್ರೆ 2021ರಿಂದ ಯಂಗ್ ಇಂಡಿಯಾದ ಕಾರುಬಾರು ಶುರುವಾಗುತ್ತಿದೆ.

#Ishan Kishan #indiaengland2ndt-20 #saakshatvsportsnews #cricket @bcci viratkohli

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd