IPL ಹರಾಜಿನಲ್ಲಿ ಇಶಾಂತ್ ಅನ್ ಸೋಲ್ಡ್ – ಶರ್ಮಾ ವೃತ್ತಿಜೀವನದ ಮೇಲೆ ಪ್ರಭಾವ ಬೀರದು. ಬಾಲ್ಯದ ಕೋಚ್ ಹೇಳಿಕೆ.
ಟೀಂ ಇಂಡಿಯಾ ಪರ ಟೆಸ್ಟ್‌ನಲ್ಲಿ ಕಪಿಲ್ ದೇವ್ ನಂತರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ವೇಗದ ಬೌಲರ್ ಇಶಾಂತ್ ಶರ್ಮ. ಇಂಥಹ ಆಟಗಾರನ್ನ ಐಪಿಎಲ್ ಮೆಗಾ ಹರಾಜಿನಲ್ಲಿ ಖರೀದಿಸಲು ಯಾವುದೇ ತಂಡ ಮುಂದಾಗಿಲ್ಲ. ಇಶಾಂತ್ ಶರ್ಮಾ ಬಿಡ್ ಆಗದೇ ಇರುವುದು ಇದೇ ಮೊದಲೇನಲ್ಲ. ಈ ಹಿಂದೆ 2018ರಲ್ಲಿ ಕೂಡ ಅವರನ್ನು ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಿರಲಿಲ್ಲ.
ಐಪಿಎಲ್‌ನಲ್ಲಿ ಖರೀದಿಯಾಗದ ಹಿನ್ನಲೆಯಲ್ಲಿ ಇಶಾಂತ್ ಅವರ ವೃತ್ತಿಜೀವನದ ಬಗ್ಗೆ ಪ್ರಶ್ನೆಗಳೆದ್ದಿವೆ. ಇಶಾಂತ್ ವೃತ್ತಿಜೀವನ ಈಗ ಕೊನೆಗೊಳ್ಳುವ ಹಂತದಲ್ಲಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ಸಂದರ್ಭದಲ್ಲೂ ಇಶಾಂತ್ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಪಡೆದಿರಲಿಲ್ಲ.
ಐಪಿಎಲ್ ಹರಾಜಿನಲ್ಲಿ ಪ್ರಾಂಚೈಸಿಗಳು ಇಶಾಂತ್ ಅವರನ್ನ ನಿರ್ಲಕ್ಷಿಸುವುದು ಅವರ ಟೆಸ್ಟ್ ವೃತ್ತಿಜೀವನದ ಮೇಲೆ ಪರಿಣಾಮ ಬೀರುವುದಿಲ್ಲ ಬಾಲ್ಯದ ಕೋಚ್ ಶ್ರವಣ್ ಕುಮಾರ್ ಮಾಧ್ಯಮಗಳಿಗೆ ಹೇಳಿದ್ದಾರೆ. ಇನ್ನು 3 ವರ್ಷ ಇಶಾಂತ್ ಆಡಬಹುದು ಎಂದು ತಿಳಿಸಿದ್ದಾರೆ. ಈಗಲೂ ಆತನ ಬೌಲಿಂಗ್ ವೇಗ ಗಂಟೆಗೆ 140 ಕಿಮೀಗಿಂತ ಹೆಚ್ಚಿದೆ. ಹೀಗಿರುವಾಗ ಐಪಿಎಲ್‌ನಲ್ಲಿ ಮಾರಾಟವಾದಿದ್ದ ಮಾತ್ರಕ್ಕೆ ಇಶಾಂತ್ ವೃತ್ತಿಜೀವನವು ಕೊನೆಗೊಳ್ಳುವುದಿಲ್ಲ. ಎಂದಿದ್ದಾರೆ.
ಟಿ20ಯಲ್ಲಿ ಪ್ರಾಂಚೈಸಿಗಳ ಗಮನ ಆಲ್ ರೌಂಡರ್ ಗಳ ಮೇಲೆ ಹೆಚ್ಚು ಎಂದು ಇಶಾಂತ್ ಶರ್ಮಾ ಕೋಚ್ ಅಭಿಪ್ರಾಯ ಪಟ್ಟಿದ್ದಾರೆ. ಈ ಸ್ವರೂಪದ ಆಟದಲ್ಲಿ ತಂಡಗಳು ಬೌಲಿಂಗ್ ಜೊತೆಗೆ ವೇಗವಾಗಿ ರನ್ ಗಳಿಸುವ ಬೌಲರ್‌ಗಳನ್ನು ಹೊಂದಬೇಕೆಂದು ಬಯಸುತ್ತವೆ. ಹಾಗಾಗಿ ತಂಡಗಳ ಗಮನವು ಅನ್‌ಕ್ಯಾಪ್ಡ್ ಯುವ ಆಟಗಾರರ ಮೇಲೆ ಹೆಚ್ಚು ಇರುತ್ತದೆ, ಏಕೆಂದರೆ ಅವರ ಮೂಲ ಬೆಲೆ ಕೂಡ ಕಡಿಮೆ ಇರುತ್ತದೆ ಮತ್ತೊಂದೆಡೆ ಹೆಚ್ಚು ಫಿಟ್ ಆಗಿರುತ್ತಾರೆ.
ಇಶಾಂತ್‌ನಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಎಂದು ಶ್ರವಣ್ ಕುಮಾರ್ ಹೇಳಿದ್ದಾರೆ. ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬುದನ್ನು ನಾವು ಮರೆಯಬಾರದು. ಟೆಸ್ಟ್ ಕ್ರಿಕೆಟ್‌ನಲ್ಲಿ ಕಪಿಲ್ ದೇವ್ ಅವರಿಗಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಕಪಿಲ್ ದೇವ್ 131 ಪಂದ್ಯಗಳಲ್ಲಿ 434 ವಿಕೆಟ್ ಪಡೆದಿದ್ದರೆ, ಜಹೀರ್ ಖಾನ್ 92 ಪಂದ್ಯಗಳಲ್ಲಿ 311 ವಿಕೆಟ್ ಪಡೆದಿದ್ದಾರೆ. ಅದೇ ಸಮಯದಲ್ಲಿ ಇಶಾಂತ್ ಶರ್ಮಾ 105 ಪಂದ್ಯಗಳಲ್ಲಿ 311 ವಿಕೆಟ್ ಪಡೆದಿದ್ದಾರೆ.
ಇಶಾಂತ್ ಹೆಸರಲ್ಲಿ 93 ಐಪಿಎಲ್ ವಿಕೆಟ್
2008 ಮತ್ತು 2021ರ ನಡುವೆ ಆಡಿದ 94 ಪಂದ್ಯಗಳಲ್ಲಿ ಇಶಾಂತ್ ಶರ್ಮಾ 37.02 ಸರಾಸರಿಯಲ್ಲಿ 73 ವಿಕೆಟ್ ಪಡೆದಿದ್ದಾರೆ. ಇಶಾಂತ್ 2013ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದರು. ಈ ಋತುವಿನಲ್ಲಿ ಅವರು 16 ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಪಡೆದಿದ್ದರು. 2019 ರಲ್ಲಿ ಐಪಿಎಲ್‌ಗೆ ಹಿಂತಿರುಗುವಾಗ, ಇಶಾಂತ್ ಅವರ ಖಾತೆಯಲ್ಲಿ 13 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಹೊಂದಿದ್ದರು. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಇಶಾಂತ್ 3 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆಯಲು ಶಕ್ತರಾಗಿದ್ದರು.








