ಟೆಲ್ ಅವೀವ್: ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, 78 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇನ್ನೊಂದೆಡೆ ಹಮಾಸ್ ಬಂಡುಕೋರರ ಸುರಂಗದಲ್ಲಿ ಐವರು ಒತ್ತೆಯಾಳುಗಳ ಶವ ಪತ್ತೆಯಾಗಿದೆ ಎನ್ನಲಾಗಿದೆ.
ಉತ್ತರ ಗಾಜಾದಲ್ಲಿ ಹಮಾಸ್ ಉಗ್ರರ ಭೂಗತ ಸುರಂಗ ಜಾಲದಲ್ಲಿ ಸೆರೆಯಲ್ಲಿದ್ದ ಐವರು ಇಸ್ರೇಲಿ ಒತ್ತೆಯಾಳುಗಳ ಶವಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಇಸ್ರೇಲ್ ದಾಳಿ ಕ್ರಿಸ್ಮಸ್ ದಿನವಾದ ಸೋಮವಾರ ಬೆಳಗ್ಗೆವರೆಗೂ ಮುಂದುವರಿಯಿತು. ಈ ವೇಳೆ ಗಾಜಾದ ಅಲ್-ಬುರೇಜ್ನ ಮೇಲೆ ಇಸ್ರೇಲ್ ತೀವ್ರ ವೈಮಾನಿಕ ದಾಳಿ ನಡೆಸಿದೆ. ಮಾಘಜಿ ನಿರಾಶ್ರಿತರ ಶಿಬಿರದಲ್ಲಿ 70 ಜನ ಸಾವನ್ನಪ್ಪಿದ್ದಾರೆ ಎನ್ನಾಗಿದೆ. ಬೆಥ್ ಲೆಹೆಮ್ನಲ್ಲಿ ಪ್ಯಾಲೇಸ್ತೇನಿ ಜನರು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅ.7ರಂದು ಹಮಾಸ್, ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ 200ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಸೆರೆ ಹಿಡಿದಿತ್ತು. ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಹಮಾಸ್ 105 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಇಸ್ರೇಲ್ 200 ಪ್ಯಾಲೇಸ್ತೇನಿ ಕೈದಿಗಳನ್ನು ಬಿಡುಗಡೆ ಮಾಡಿದೆ.