ಕೊರೊನಾ ವಿರುದ್ಧ ಹೋರಾಟದಲ್ಲಿ ರಾಮಬಾಣವಾಗಿರುವ ಲಸಿಕೆ ಅಭಿಯಾನವು ವಿಶ್ವಾದ್ಯಂತ ಬಹುತೇಕ ಎಲ್ಲಾ ದೇಶಗಳಲ್ಲಿಯೂ ವೇಗ ಪಡೆದುಕೊಂಡಿದೆ. ಈ ನಡುವೆ ಇಸ್ರೇಲ್ ನಲ್ಲಿ ಲಸಿಕೆಯ 4ನೇ ಡೋಸ್ ಗೆ ತಯಾರಿ ನಡೆಸಲಾಗ್ತಿದೆ. ಹೌದು ಅಂತಿಮವಾಗಿ ಕರೋನವೈರಸ್ ಲಸಿಕೆಯ ನಾಲ್ಕನೇ ಡೋಸ್ ನೀಡಲು ಇಸ್ರೇಲ್ ಸಿದ್ಧತೆ ನಡೆಸುತ್ತಿದೆ.
ಟೋಕಿಯೋ ಪ್ಯಾರಾಲಿಂಪಿಕ್ಸ್ 2021 : ಐತಿಹಾಸಿಕ ಸಾಧನೆ – ಭಾರತಕ್ಕೆ ಒಟ್ಟು 19 ಪದಕ
ವೈರಸ್ ಇಲ್ಲಿದೆ ಮತ್ತು ಇಲ್ಲಿಯೇ ಮುಂದುವರಿಯುತ್ತದೆ, ನಾವು ನಾಲ್ಕನೇ ಚುಚ್ಚುಮದ್ದಿಗೆ ಸಿದ್ಧರಾಗಬೇಕು ಎಂದು ಸಲ್ಮಾನ್ ಜರ್ಕಾ ಖಾನ್ ಸಾರ್ವಜನಿಕ ರೇಡಿಯೊಗೆ ತಿಳಿಸಿದ್ದಾರೆ. ಇನ್ನೂ ಲಸಿಕೆಯ ನಾಲ್ಕನೇ ಡೋಸ್ ಯಾವಾಗ ನೀಡುವುದು ಎಂಬುದನ್ನ ಇನ್ನೂವರೆಗೂ ನಿರ್ದಿಷ್ಟವಾಗಿ ನಿರ್ಧಾರ ಮಾಡಲಾಗಿಲ್ಲ. ಹೆಚ್ಚಿನ ಸಾಂಕ್ರಾಮಿಕ ಡೆಲ್ಟಾ ಸ್ಟ್ರೈನ್ನಂತಹ COVID-19 ಗೆ ಕಾರಣವಾಗುವ SARS-CoV-2 ವೈರಸ್ನ ಹೊಸ ರೂಪಾಂತರಗಳಿಂದ ಉತ್ತಮವಾಗಿ ರಕ್ಷಿಸಲು ಮುಂದಿನ ಬೂಸ್ಟರ್ ಶಾಟ್ ಅನ್ನು ಮಾರ್ಪಡಿಸಬಹುದು ಎಂದು ತಿಳಿಸಿದ್ದಾರೆ.
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ…








