ಟೋಕಿಯೋ ಪ್ಯಾರಾಲಿಂಪಿಕ್ಸ್ 2021 : ಐತಿಹಾಸಿಕ ಸಾಧನೆ – ಭಾರತಕ್ಕೆ ಒಟ್ಟು 19 ಪದಕ
ಟೋಕಿಯೋ ಪ್ಯಾರಾಲಿಂಪಿಕ್ಸ್ 2021 ರಲ್ಲಿ ಭಾರತವು ಒಟ್ಟು 19 ಪದಕಗಳನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಒಟ್ಟಾರೆ 19 ಪದಕಗಳ ಪೈಕಿ 5 ಚಿನ್ನ , 8 ಬೆಳ್ಳಿ, 6 ಕಂಚು ಪಡೆದು 24 ನೇ ಸ್ಥಾನದಲ್ಲಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್ 2021 ಭಾನುವಾರ ಮುಕ್ತಾಯಗೊಂಡಿದೆ. ಭಾರತ 24 ನೇ ಸ್ಥಾನದಲ್ಲಿ ಉಳಿಯುವ ಮೂಲಕ ತನ್ನ ಪ್ರಯಾಣವನ್ನು ಕೊನೆಗೊಳಿಸಿದೆ. ಆದ್ರೆ ಐತಿಹಾಸಿಕ ಸಾಧನೆ ಮಾಡಿದ ನಮ್ಮ ಹೆಮ್ಮೆಯ ಕ್ರೀಡಾಪಟುಗಳಿಗೆ ಭಾರತೀಯರು , ಪ್ರಧಾನನಿ ಮೋದಿ , ಗಣ್ಯರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.. ರಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಕೇವಲ ನಾಲ್ಕು ಪದಕಗಳನ್ನು ಗೆದ್ದ ಭಾರತ, ಟೋಕಿಯೊದಲ್ಲಿ ದಾಖಲೆಯ 19 ಪದಕಗಳನ್ನು ಗೆದ್ದಿದೆ. ಇದು ಇದುವರೆಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.
ಮೊದಲಿಗೆ ಚಿನ್ನದ ಪದಕ ಗೆದ್ದವರ ಪಟ್ಟಿ
ಅವನಿ ಲೇಖರಾ – ಮಹಿಳೆಯರ 10 ಮೀ. ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್ ಎಚ್ 1 ನಲ್ಲಿ ಚಿನ್ನ ಗೆದ್ದಿದ್ದಾರೆ.
ಸುಮಿತ್ ಅಂತಿಲ್ – ಪುರುಷರ ಜಾವೆಲಿನ್ ಥ್ರೋ ಎಫ್ 64 ರಲ್ಲಿ ಚಿನ್ನ ಗೆದ್ದಿದ್ದಾರೆ.
ಮನೀಷ್ ನರ್ವಾಲ್ – ಪಿ4 ಮಿಶ್ರ 50 ಮೀ. ಪಿಸ್ತೂಲ್ ಎಸ್ ಎಚ್ 1 ರಲ್ಲಿ ಚಿನ್ನ ಗೆದ್ದಿದ್ದಾರೆ.
ಪ್ರಮೋದ್ ಭಗತ್ – ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.
ಕೃಷ್ಣಾ ನಗರ್ – ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ ಎಚ್ 1 – ಚಿನ್ನ ಗೆದ್ದಿದ್ದಾರೆ.
ಬೆಳ್ಳಿ ಗೆದ್ದವರ ಪಟ್ಟಿ
ಸುಹಾಸ್ ಎಲ್ ಯತಿರಾಜ್ – ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ ಎಲ್4 ರಲ್ಲಿ ಬೆಳ್ಳಿಗೆ ಮುತ್ತಿಟ್ಟಿದ್ದಾರೆ.
ದೇವೇಂದ್ರ ಜಬಾರಿಯಾ – ಪುರುಷರ ಜಾವೆಲಿನ್ ಥ್ರೋ ಎಫ್ 46 ರಲ್ಲಿ ಬೆಳ್ಳಿ ಗೆದ್ದಿದ್ದಾರೆ.
ನಿಶಾದ್ ಕುಮಾರ್ – ಪುರುಷರ ಹೈ ಜಂಪ್ ಟಿ47 ರಲ್ಲಿ ಬೆಳ್ಳಿ ಗೆದ್ದಿದ್ದಾರೆ.
ಭಾವಿನಾ ಬೇನ್ ಪಟೇಲ್ – ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನಿಸ್ ಕ್ಲಾಸ್ 4 ರಲ್ಲಿ ಬೆಳ್ಳಿ ಗೆದ್ದಿದ್ದಾರೆ.
ಯೋಗೇಶ್ ಕಥೋನಿಯಾ – ಪುರುಷರ ಡಿಸ್ಕಸ್ ಥ್ರೋ ಎಫ್ 56 ರಲ್ಲಿ ಬೆಳ್ಳಿ ಗೆದ್ದಿದ್ದಾರೆ.
ಸಿಂಘರಾಜ್ ಅಡಾನ್ – ಪಿ4 ಮಿಶ್ರ 50 ಮೀ ಪಿಸ್ತೂಲ್ ಎಸ್ ಎಚ್1 ರಲ್ಲಿ ಬೆಳ್ಳಿ ಗೆದ್ದಿದ್ದಾರೆ.
ಮಾರಿಯಪ್ಪನ್ ತಂಗವೇಲು – ಪುರುಷರ ಹೈಜಂಪ್ ಟಿ63 ರಲ್ಲಿ ಬೆಳ್ಳಿ ಗೆದ್ದಿದ್ದಾರೆ.
ಪ್ರವೀಣ್ ಕುಮಾರ್ – ಪುರುಷರ ಹೈಜಂಪ್ ಟಿ64 , ಬೆಳ್ಳಿ ಗೆದ್ದಿದ್ದಾರೆ.
ಸುಂದರ್ ಸಿಂಘ್ ಗುರ್ಜರ್ – ಪುರುಷರ ಜಾವೆಲಿನ್ ಥ್ರೋ ಎಫ್ 46 ರಲ್ಲಿ – ಬೆಳ್ಳಿ
ಕಂಚು ಗೆದ್ದವರ ಪಟ್ಟಿ
ಸಿಂಘ್ ರಾಜ್ ಅಡಾನ್ ಗೆ ಮತ್ತೊಂದು ಪದಕ – ಪುರುಷರ 10 ಮೀ. ಪಿಸ್ತೂಲ್ ಶೂಟಿಂಗ್ ಎಸ್ ಎಚ್ 1 ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ.
ಶರದ್ ಕುಮಾರ್ – ಪುರುಷರ ಹೈಜಂಪ್ ಟಿ63 ನಲ್ಲಿ ಕಂಚು ಗೆದ್ದಿದ್ದಾರೆ.
ಅವನಿ ಲೇಖರಾಗೂ ಮತ್ತೊಂದು ಪದಕ – ಮಹಿಳೆಯರ 50 ಮೀ ರೈಫಲ್ 3 ಪೊಸಿಷನ್ , ಶೂಟಿಂಗ್ ಎಸ್ ಎಚ್ 1 ರಲ್ಲಿ ಕಂಚು ಗೆದ್ದಿದ್ದಾರೆ.
ಹರ್ವಿಂದರ್ ಸಿಂಗ್ – ಪುರುಷರ ವೈಯಕ್ತಿಕ ರಿಕರ್ವ್ ಆರ್ಚರಿಯಲ್ಲಿ ಕಂಚು
ಮನೋಜ್ ಸರ್ಕಾರ್ – ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ ಎಲ್3 ನಲ್ಲಿ ಕಂಚು ಗೆದ್ದಿದ್ದಾರೆ.