ಟೆಲ್ ಅವಿವ್: ಇಸ್ರೇಲ್- ಹಮಾಸ್ ಉಗ್ರರ ಮಧ್ಯೆ ನಡೆಯುತ್ತಿರುವ ಯುದ್ಧ ಭೀಕರತೆ ಪಡೆದಿದ್ದು, ಮತ್ತಷ್ಟು ಕರಾಳತೆ ಪಡೆಯುವ ಮುನ್ಸೂಚನೆಯನ್ನು ಇಸ್ರೇಲ್ ನೀಡಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu),ಇಸ್ರೇಲ್ ಸೇನೆ ಸಿಂಹ ಇದ್ದಂತೆ. ಶತ್ರುಗಳು ನಡೆಸಿದ ದೌರ್ಜನ್ಯ ನಾವು ಮರೆಯಲು ಸಾಧ್ಯವೇ ಇಲ್ಲ. ಎಂದಿಗೂ ಹಮಾಸ್ ಕ್ಷಮಿಸುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಶತ್ರುಗಳನ್ನು ನಮ್ಮ ಬಲದಿಂದ ಹೊಡೆಯುತ್ತಿದ್ದೇವೆ ಎಂದು ಮತ್ತಷ್ಟು ದಾಳಿ ಉಗ್ರವಾಗಿರಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.
ಈಗಾಗಲೇ ನಡೆದ ಯುದ್ಧದಲ್ಲಿ ಹಮಾಸ್ನ (Hamas) 1,300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಗಾಜಾ ಹಾಗೂ ವೆಸ್ಟ್ ಬ್ಯಾಂಕ್ ನಲ್ಲಿ 1,900ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಗಡಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಸೈನಿಕರನ್ನು ಇಸ್ರೇಲ್ ನಿಯೋಜನೆ ಮಾಡಿದೆ.