ಹಮಾಸ್ ಉಗ್ರ ಸಂಘಟನೆಯ ದಾಳಿಗೆ ಪ್ರತ್ಯುತ್ತರ : ಗಾಜಾಪಟ್ಟಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಇಸ್ರೇಲ್ : ಇಸ್ರೇಲ್ ನಲ್ಲಿ ಹಮಾಸ್ ಉಗ್ರ ಸಂಘಟನೆಯ ಅಟ್ಟಹಾಸ ಮುಂದುವರೆದಿದೆ. ಇಸ್ರೇಲ್ ನ ಗಡಿಭಾಗದಲ್ಲಿ ಕೃಷಿಕರು ನೆಲೆಸಿರುವ ಕೆಲ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಹಮಾನ್ ಉಗ್ರ ಸಂಘಟನಾಕಾರರು ಬಾಂಬ್ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಗಾಜಾಪಟ್ಟಿ ಮೇಲೆ ಯುದ್ಧವಿಮಾನಗಳಿಂದ ದಾಳಿ ನಡೆಸಲಾಗಿದೆ. ಈ ಬಗ್ಗೆ ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ.
ಹಮಾಸ್ ಸಂಘಟನೆ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸುತ್ತಿದ್ದ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಲಾಗಿದೆ ಎಂದೂ ಇಸ್ರೇಲ್ ಹೇಳಿದೆ. ಹಮಾಸ್ ಬೆಂಬಲಿತ ಕಾರ್ಯಕರ್ತರು ಬಾಂಬ್ಗಳನ್ನು ತುಂಬಿದ್ದ ಬಲೂನ್ಗಳನ್ನು ಬಳಸಿ, ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಆಗಿರುವ ಹಾನಿಯ ಕುರಿತು ಹೆಚ್ಚಿನ ವಿವರಗಳು ಲಭ್ಯವಿಲ್ಲ ಎಂದೂ ಮಿಲಿಟರಿ ಹೇಳಿದೆ.
ಮೇ ತಿಂಗಳಲ್ಲಿ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಮಿಲಿಟರಿ ಮಧ್ಯೆ 11 ದಿನಗಳ ಕಾಲ ಸಂಘರ್ಷ ಏರ್ಪಟ್ಟಿತ್ತು. ನಂತರ, ಕದನ ವಿರಾಮ ಘೋಷಿಸಲಾಗಿತ್ತು. ಇದಾದ ನಂತರ ಈಗ ಇಸ್ರೇಲ್ ಮಿಲಿಟರಿ ಗಾಜಾ ಪಟ್ಟಿ ಮೇಲೆ ನಡೆಸಿದ ಮೂರನೇ ದಾಳಿ ಇದಾಗಿದೆ ಎಂದು ಮೂಲಗಳು ಹೇಳಿವೆ.