ಚಂದ್ರಯಾನ ಯಶಸ್ಸಿನ ಬೆನ್ನಲ್ಲಿಯೇ ಸದ್ಯ ಇಸ್ರೋ ಸದ್ಯ ಸೂರ್ಯಯಾನಕ್ಕೆ ತಯಾರಿ ನಡೆಸುತ್ತಿದೆ. ಸೆಪ್ಟೆಂಬರ್ 2ರಂದು ಸೌರನೌಕಿ ಆದಿತ್ಯ ಎಲ್ 1 ಉಡಾವಣೆಗೆ ಸಿದ್ಧತೆ ನಡೆಸಿದೆ.
ಇಸ್ರೋ ಈಗಾಗಲೇ ಆದಿತ್ಯ ಎಲ್ 1 ಸಿದ್ಧಪಡಿಸಿದ್ದು, ಸೌರ ಕರೊನ ಎಂದು ಕರೆಯುವ ಸೂರ್ಯನ ಹೊರ ವಾತಾವರಣ ಹಾಗೂ ಸೀಟು ಎಂದು ಗುರುತಿಸುವ ಸೌರ ಬಿರುಗಾಳಿ ರಹಸ್ಯ ಅಧ್ಯಯನಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 2ರಂದು ನೌಕೆ ಉಡಾವಣೆಯಾಗುವ ಸಾಧ್ಯತೆ ಇದೆ.
ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಬ್ಯಾಗ್ರೇಂಜಿಯನ್ ಪಾಯಿಂಟ್ ನಲ್ಲಿ ಆದಿತ್ಯ ನೆಲೆ ನಿಂತು ಸೂರ್ಯನ ಅಧ್ಯಯನ ಮಾಡಲಿದೆ ಎನ್ನಲಾಗಿದೆ. ಆದಿತ್ಯ ಎಲ್ -1 ಉಡಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಇಸ್ರೋ ವಿಜ್ಞಾನಿಗಳು, ಬಹುತೇಕ ಸೆಪ್ಟೆಂಬರ್ 2ರಂದೇ ಆದಿತ್ಯ ಎಲ್ 1 ಉಡಾವಣೆ ಮಾಡುವ ಸಾಧ್ಯತೆ ಇದ್ದು, ಇಂದು ಅಥವಾ ನಾಳೆ ಅಧಿಕೃತ ದಿನಾಂಕ ಘೋಷಣೆಯಾಗಲಿದೆ. ಸೂರ್ಯಯಾನ ಮೀಷನ್ ಮೂಲಕ ಸೂರ್ಯನ ಕುರಿತು ಇಸ್ರೋ ಅಧ್ಯಯನ ನಡೆಸಲಿದೆ.