ಅಂತರಾಷ್ಟ್ರೀಯ ಕ್ರಿಕೆಟ್ ಗೆ ಇಸುರು ಉದಾನ ಗುಡ್ ಬೈ
ಕೊಲಂಬೊ : ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಇಸುರುವ ಉದಾನ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ಭಾರತದ ವಿರುದ್ಧ ಟಿ 20 ಸರಣಿಯನ್ನು 2-1ರಿಂದ ಗೆದ್ದ ಖುಷಿಯಲ್ಲಿರುವ ಲಂಕಾ ಮಂಡಳಿಗೆ ಈ ನಿರ್ಧಾರ ಆಘಾತ ತಂದಿದೆ. ಮತ್ತೊಂದೆಡೆ ಉದಾನ ಇತ್ತೀಚೆಗೆ ಮುಕ್ತಾಯಗೊಂಡ ಟಿ 20 ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಭಾರತದ ವಿರುದ್ಧ ಎರಡು ಪಂದ್ಯಗಳನ್ನಾಡಿದ್ದ ಅವರು, ಐದು ಓವರ್ ಬೌಲ್ ಮಾಡಿ 39 ರನ್ ಕೊಟ್ಟು ಒಂದೂ ವಿಕೆಟ್ ಪಡೆಯದೇ ನಿರಾಸೆ ಅನುಭವಿಸಿದ್ದರು. ಇದಕ್ಕು ಮುನ್ನ ಏಕದಿನ ಸರಣಿಯಲ್ಲಿ ಒಂದು ಪಂದ್ಯವನ್ನಾಡಿದ್ದ ಉದಾನ ಹೇಳಿಕೊಳ್ಳುವಂತಹ ಪ್ರರ್ದಶನ ನೀಡುವ ವಿಫಲರಾಗಿದ್ದರು.
33 ವರ್ಷದ ಉದಾನ, 2009 ರ ಜೂನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ 20 ಪಂದ್ಯವೊಂದರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಈ ವರೆಗೂ 21 ಏಕದಿನ ಪಂದ್ಯಗಳನ್ನಾಡಿರುವ ಅವರು 237 ರನ್ ಗಳಿಸಿ 18 ವಿಕೆಟ್ ಪಡೆದಿದ್ದರು. 34 ಟಿ 20 ಪಂದ್ಯಗಳಲ್ಲಿ 256 ರನ್ ಬಾರಿಸಿ, 27 ರನ್ ಗಳನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ತಂಡದಲ್ಲಿ ಆಲ್ ರೌಂಡರ್ ಪ್ರದರ್ಶನ ನೀಡುವ ಉದಾನ, ಈ ಬಾರಿಯ ಟಿ-20 ವಿಶ್ವಕಪ್ ನಲ್ಲಿ ಲಂಕಾದ ಪ್ರಮುಖ ಅಸ್ತ್ರ ಆಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಸೂಪರ್ 12 ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾದ ಶ್ರೀಲಂಕಾ ತಂಡವು ಐಲೆರ್ಂಡ್, ನಮೀಬಿಯಾ ಮತ್ತು ನೆದಲ್ಯಾರ್ಂಡ್ಸ್ ಗಳನ್ನು ಗುಂಪು ಹಂತದಲ್ಲಿ ಆಡಲಿದೆ.