ಚಿತ್ರದುರ್ಗ: ವಿಶೇಷಚೇತನರೊಬ್ಬರಿಗೆ (Disabled Person) ಸರ್ಕಾರದಿಂದ ವಿಶೇಷ ಸ್ಕೀಂ (Govt Scheme) ಮಾಡಿಸಿಕೊಡುತ್ತೇನೆಂದು ವಂಚಿಸಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಸೊಂಟ ಸ್ವಾಧೀನವಿಲ್ಲದ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ನಿವಾಸಿ ಜಯಪ್ರಕಾಶ್ ಎಂಬ ವಿಶೇಷಚೇತನ ಗಾಂಧಿ ಸರ್ಕಲ್‌ನಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಾ ಬದುಕು ಕಟ್ಟಿಕೊಂಡಿದ್ದರು. ಅವರಿಗೆ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂದು ಪರಿಚಯ ಮಾಡಿಕೊಂಡ ಮಂಜುನಾಥ್ ಎಂಬಾತ ವಿಕಲಚೇತನರ ವಿಶೇಷ ಸ್ಕೀಂ ಮಾಡಿಸಿಕೊಡುತ್ತೇವೆ. ನೀವು ಕಟ್ಟಿದ ಹಣವನ್ನು ದ್ವಿಗುಣಗೊಳಿಸಿ ಕೊಡುತ್ತೇವೆ. ಅದು ನಿಮ್ಮ ಮುಂದಿನ ಜೀವನೋಪಾಯಕ್ಕೆ ಸಹಕಾರಿಯಾಗಲಿದೆ ಎಂದು ಜಯಪ್ರಕಾಶ್ ರನ್ನು ನಂಬಿಸಿ ವಂಚಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
13,500 ರೂ. ಹಣ ಪಡೆದು ಜಯಪ್ರಕಾಶ್‌ಗೆ ವಂಚಿಸಿದ್ದಾರೆ. ಹಣಕಟ್ಟಿ ಹಲವು ತಿಂಗಳಾದರು ಹಣ ಬಾರದ ಹಿನ್ನೆಲೆಯಲ್ಲಿ ನನ್ನ ಹಣ ನನಗೆ ವಾಪಸ್ ಕೊಡಿ ಎಂದು ಕೇಳಿದಾಗ, ಸರ್ಕಾರವು ಆ ಸ್ಕೀಂ ನಿಲ್ಲಿಸಿದೆ ಎಂದು ಮೋಸ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿದು ಚಿತ್ರದುರ್ಗ ನಗರ ಠಾಣೆ ಪೊಲೀಸರು ಹಾಗೂ ಎಸ್ಪಿಗೆ ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ನನ್ನ ಜೀವನ ಕಷ್ಟಕರವಾಗಿದೆ ಎಂದು ಜಯಪ್ರಕಾಶ್ ಅಸಹಾಯಕತೆ ತೋಡಿಕೊಂಡಿದ್ದಾರೆ.








