ದೇಶದಲ್ಲಿ ರಾಮನ ಜಪ ಜೋರಾಗಿದ್ದು, ಭಕ್ತರು ರಾಮನ ದರ್ಶನ ಮಾಡುವುದಕ್ಕೆ ಕನಸು ಕಾಣುತ್ತಿದ್ದಾರೆ. ಇಡೀ ಭಾರತೀಯರ ಕನಸಿನ ರಾಮ ಮಂದಿರ (Ayodhya Ram Mandir)ವು ಜನವರಿ 22ರಂದು ಉದ್ಘಾಟನೆಯಾಗಲಿದೆ. ಆದರೆ, ರಾಮನಮೂರ್ತಿ ತಯಾರಿಸಲು ಕರ್ನಾಟಕದಲ್ಲಿಯೇ ಕಲ್ಲು ಸಿಕ್ಕಿದ್ದು ಮಾತ್ರ ರೋಚಕ.
ಬಾಲ ರಾಮನ ಮೂರ್ತಿಯನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಕೆತ್ತನೆ ಮಾಡಿದ್ದಾರೆ ಎಂಬುವುದು ವಿಶೇಷವಾದರೆ, ಮೂರ್ತಿಗೆ ಬಳಸಲಾದ ಶಿಲೆ ಕೂಡ ಮೈಸೂರಿನದ್ದೇ ಎಂಬುವುದು ಇನ್ನೂ ವಿಶೇಷ. ಅಯೋಧ್ಯೆಯ ಬಾಲ ರಾಮನ ಮೂರ್ತಿಗೆ ಮೈಸೂರಿನ ಶಿಲೆಯನ್ನು ಬಳಸಲಾಗಿದೆ.
ಕೃಷ್ಣ ಶಿಲೆ ಮೂರ್ತಿ ಕೆತ್ತನೆಗೆ ಯೋಗ್ಯವಾಗಿದ್ದ ಕಲ್ಲು, ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ರಾಮ್ ದಾಸ್ ಎಂಬುವವರ ಜಮೀನಿನಲ್ಲಿಯೇ ಈ ಕೃಷ್ಣ ಶಿಲೆ ಕಲ್ಲು ಸಿಕ್ಕಿದೆ. ರಾಮ್ ದಾಸ್ ಜಮೀನಲ್ಲಿ 10 ಅಡಿ ಆಳದಲ್ಲಿ ಅಗೆದು ಶಿಲೆ ತೆಗೆಯಲಾಗಿದೆ. ರಾಮನ ಮೂರ್ತಿಗಾಗಿ 19 ಟನ್ ತೂಕದ ಸುಮಾರು 9 ಅಡಿ 8 ಇಂಚು ಉದ್ದದ ಶಿಲೆಯನ್ನು ಅಯೋದ್ಯೆಗೆ ಕಳುಹಿಸಲಾಗಿದೆ. ಕಲ್ಲು ಕಳುಹಿಸುವಾಗ ಗ್ರಾಮಸ್ಥರು ವಿಶೇಷವಾಗಿ ಪೂಜೆ ಸಲ್ಲಿಸಿ ಭಕ್ತಿ, ಗೌರವದೊಂದಿಗೆ ಕಳುಹಿಸಿದ್ದಾರೆ. ಆ ಶಿಲೆ ಸ್ಪರ್ಶ ಮಾಡಿದ ಮಹಾನ್ ಪುಣ್ಯ ಸದ್ಯ ಮೈಸೂರು ಜನೆತೆಗೆ ಸಿಕ್ಕಿದೆ.