ಬೆಂಗಳೂರು : ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ 73ನೇ ಹುಟ್ಟುಹಬ್ಬಕ್ಕೆ ರಾಜಕೀಯ ಗಣ್ಯರು, ಸಿನಿ ತಾರೆಯರು ಸೇರಿದಂತೆ ಅನೇಕರು ಶುಭಾಶಯಗಳ ಸುರಿಮಳೆಯನ್ನೇ ಗೈದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತನಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ನನ್ನ ಹುಟ್ಟುಹಬ್ಬಕ್ಕೆ ರಾಜ್ಯದಾದ್ಯಂತ ಹಿರಿಯ-ಕಿರಿಯ ಸ್ನೇಹಿತರು, ಹಿತೈಷಿಗಳು ಶುಭಾಶಯ ಕೋರಿದ್ದಾರೆ. ಅವರೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಹಾರೈಕೆ ಜನರ ಸೇವೆ ಮಾಡುವ ನನ್ನ ಮನೋಬಲವನ್ನು ಹೆಚ್ಚಿಸಿದೆ. ನಿಮ್ಮ ಸೇವೆಯ ಮೂಲಕವೇ ನಿಮ್ಮ ಪ್ರೀತಿಯ ಋಣ ತೀರಿಸಲು ಪ್ರಯತ್ನಿಸುವೆ” ಎಂದು ಬರೆದುಕೊಂಡಿದ್ದಾರೆ.
ನನ್ನ ಹುಟ್ಟು ಹಬ್ಬಕ್ಕೆ ರಾಜ್ಯದಾದ್ಯಂತ ಹಿರಿಯ-ಕಿರಿಯ ಸ್ನೇಹಿತರು,ಹಿತೈಷಿಗಳು ಶುಭಾಶಯ ಕೋರಿದ್ದಾರೆ. ಅವರೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು.
ನಿಮ್ಮ ಹಾರೈಕೆ ಜನರ ಸೇವೆ ಮಾಡುವ ನನ್ನ ಮನೋಬಲವನ್ನು ಹೆಚ್ಚಿಸಿದೆ.
ನಿಮ್ಮ ಸೇವೆಯ ಮೂಲಕವೇ ನಿಮ್ಮ ಪ್ರೀತಿಯ ಋಣ ತೀರಿಸಲು ಪ್ರಯತ್ನಿಸುವೆ. pic.twitter.com/kf8qqSIH45
— Siddaramaiah (@siddaramaiah) August 12, 2020