ಮಾಜಿ ಸಿಎಂ ಬಿಎಸ್ ವೈ ಆಪ್ತನಿಗೆ ಐಟಿ ಶಾಕ್

1 min read
IT raid saaksha tv

ಮಾಜಿ ಸಿಎಂ ಬಿಎಸ್ ವೈ ಆಪ್ತನಿಗೆ ಐಟಿ ಶಾಕ್ IT raid saaksha tv

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತರಾಗಿದ್ದ ಉಮೇಶ್ ಗೆ ಐಟಿ ಅಧಿಕಾರಿಗಳ ಶಾಕ್ ನೀಡಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಉಮೇಶ್ ಸೇರಿದಂತೆ ಮೂವತ್ತುಕ್ಕೂ ಹೆಚ್ಚು ಕಾಂಟ್ರ್ಯಾಕ್ಟರ್ ಗಳ ಮನೆ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಉಮೇಶ್ ಮನೆಯಲ್ಲಿ ಐಟಿ ದಾಳಿ ಮುಕ್ತಯವಾಗಿದ್ದು, ಇನ್ನುಳಿದ ಕಡೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

IT raid saaksha tv

ಅಂದಹಾಗೆ ಬಿಎಂಟಿಸಿ ಕಂಡೆಕ್ಟರ್ ಆಗಿದ್ದ ಉಮೇಶ್ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ಆಪ್ತ ಸಹಾಯಕನಾಗಿ ಕಾರ್ಯನಿರ್ವಹಿಸಿದ್ದರು.

ಇದಲ್ಲದೆ ಬಿಎಸ್ ವೈ, ವಿಜಯೇಂದ್ರ ವ್ಯವಹಾರಗಳನ್ನು ಉಮೇಶ್ ನೋಡಿಕೊಳ್ಳುತ್ತಿದ್ದರು.

ಇಂತಹ ಉಮೇಶ್ ಮೇಲೆ ದಾಳಿ ನಡೆದಿರೋದು ಕುತೂಹಲ ಕೆರಳಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd