2000 ವರ್ಷಗಳ ಹಳೆಯ ರೋಮನ್ ಕಾಲದ ಫಾಸ್ಟ್ ಫುಡ್ ಸ್ಟಾಲ್ ಪತ್ತೆ
ರೋಮ್ : ಇಟಲಿಯ ಪಾಂಪೆ ನಗರದಲ್ಲಿ 2000 ವರ್ಷಗಳ ಹಳೆಯ ರೋಮನ್ ಕಾಲದ ಪುರಾತನ ಫಾಸ್ಟ್ ಫುಡ್ ಸ್ಟಾಲ್ ರೀತಿಯ ಅಂಗಡಿ ಪತ್ತೆಯಾಗಿದೆ.
ಇದು ಕ್ರಿಸ್ತಶಕ 79ರಲ್ಲಿ ಮೌಂಟ್ ವೆಸುವಿಯಸ್ ಸ್ಫೋಟಿಸಿದ ಜ್ವಾಲಾಮುಖಿಯ ಬೂದಿಯಲ್ಲಿ ಹೂತುಹೋಗಿತ್ತು ಎಂದು ಹೇಳಲಾಗುತ್ತಿದೆ.
ಸದ್ಯ ಪತ್ತೆಯಾಗಿರುವ ಸ್ಟಾಲ್ ಸಂಶೋಧಕರಲ್ಲಿ ಬೆರಗು ಮೂಡಿಸಿದ್ದು, ವಿವಿಧ ರೀತಿಯ ಪೇಂಟಿಂಗ್ಸ್ ನಿಂದ ಅಲಂಕಾರ ಮಾಡಿದ ಬಾರ್ ಕೌಂಟರ್ ಇದಾಗಿದೆ.
ಸ್ಥಳದಲ್ಲಿ ಬಾತುಕೋಳಿ ಮೂಳೆಯ ಚೂರು, ಮಣ್ಣಿನ ಮಡಿಕೆ, ಮೇಕೆ ಹಾಗೂ ಮೀನಿನ ಅವಶೇಷಗಳು ಪತ್ತೆಯಾಗಿವೆ.
ಅಲ್ಲದೆ ಸ್ಟಾಲ್ ಗೋಡೆಗಳ ಮೇಲೆ ಕೋಳಿ ಹಾಗೂ ಬಾತುಕೋಳಿ ಚಿತ್ರಗಳನ್ನು ಬಿಡಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel