ಆಸ್ಪತ್ರೆಯಲ್ಲಿ ಬೆಡ್ ಖಾಲಿ ಮಾಡಲು ರೋಗಿಗಳನ್ನೇ ಬಲಿಪಡೆದ ರಾಕ್ಷಸ – ವೈದ್ಯ.!
ಜನರ ಜೀವ ಉಳಿಸಬೇಕಾದ ವೈದ್ಯನೊಬ್ಬ ಉದ್ದೇಶಪೂರ್ವಕವಾಗಿ ವೃದ್ಧರ ಬಲಿ ಪಡೆದು ಅಮಾನವೀಯತೆ ಮೆರೆದ ಘಟನೆ ಇಟಲಿಯಲ್ಲಿ ನಡೆದಿದೆ. ಈ ವೈದ್ಯ ಹೊಸ ರೋಗಿಗಳಿಗೆ ಬೆಡ್ ನೀಡಬೇಕೆಂದು ಆಸ್ಪತ್ರೆಯಲ್ಲಿ ಮೊದಲೇ ಅಡ್ಮಿಟ್ ಆಗಿದ್ದ ಇಬ್ಬರು ಕೊರೊನಾ ಸೋಂಕಿತ ವೃದ್ಧರನ್ನ ಉದ್ದೇಶ ಪೂರ್ವಕವಾಗಿ ಸಾಯಿಸಿ ರಾಕ್ಷಸ ಕೃತ್ಯವೆಸಗಿದ್ದಾನೆ. ಇದೀಗ ಈತನನ್ನ ಬಂಧಿಸಲಾಗಿದೆ. ಲೊಂಬಾರ್ಡಿಯಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಧರ್ಮಸ್ಥಳಿ ಬಾಗಿಲು ಓಪನ್ : ಆಚಾರ್ಯ ಟೀಸರ್ ರಿಲೀಸ್
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಕೊರೊನಾ ರೋಗಿಗಳನ್ನ ನಿಭಾಯಿಸಲು ಆಸ್ಪತ್ರೆಗಳು ಹೆಣಗಾಡುತ್ತಿದ್ದವು. ಈ ವೇಳೆ ಆಸ್ಪತ್ರೆ ಬೆಡ್ ಖಾಲಿ ಮಾಡಬೇಕು ಎಂಬ ಉದ್ದೇಶದಿಂದ 47 ವರ್ಷದ ವೈದ್ಯ ಇಂತಹ ನೀಚ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ಕೊರೊನಾ ವೈರಸ್ ಮೊದಲ ಅಲೆ ವ್ಯಾಪಕವಾಗಿ ಇದ್ದ ವೇಳೆ 61 ವರ್ಷದ ನಟಾಲ್ ಬಾಸ್ಸಿ ಹಾಗೂ 80 ವರ್ಷದ ಏಂಜೆಲೋ ಪ್ಯಾಲೆಟ್ಟಿ ಎಂಬವರಿಗೆ ಮಿತಿಮೀರಿದ ಡೋಸ್ನ ಅರವಳಿಕೆ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








