‘ಏ ಮೇರೆ ವತನ್ ಕೆ ಲೋಗೋ’ ನುಡಿಸುವ ಮೂಲಕ ಗಾನ ಕೋಗಿಲೆಗೆ ITBP ಕಾನ್ಸ್ಟೇಬಲ್ ಗೌರವ
ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಯ ಕಾನ್ಸ್ಟೇಬಲ್ ಒಬ್ಬರು ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್ ಅವರ ‘ಏ ಮೇರೆ ವತನ್ ಕೆ ಲೋಗೋನ್’ ಹಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ITBP ಅಫಿಶಿಯಲ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಕಾನ್ಸ್ಟೆಬಲ್ ಮುಜಮ್ಮಲ್ ಹಕ್ ಸ್ಯಾಕ್ಸೋಫೋನ್ನಲ್ಲಿ ಹಾಡನ್ನು ನುಡಿಸುವುದನ್ನು ಕಾಣಬಹುದು.
“‘ಏ ಮೇರೆ ವತನ್ ಕೆ ಲೋಗೋನ್… ITBP ಯ ಕಾನ್ಸ್ಟೇಬಲ್ ಮುಜಮ್ಮಲ್ ಹಕ್ ಅವರು ಸ್ವರ ಕೋಕಿಲಾ ಭಾರತ ರತ್ನ ಲತಾ ಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸಿದ್ದಾರೆ,” ಎಂದು ITBP ಅಧಿಕೃತ ಹ್ಯಾಂಡಲ್ ಟ್ವೀಟ್ ಮಾಡಿದೆ.
ए मेरे वतन के लोगों…
स्वर कोकिला भारत रत्न लता मंगेशकर को कांस्टेबल मुजम्मल हक़, आईटीबीपी की भावभीनी श्रद्धांजलि।
Ae Mere Watan Ke Logon…
Constable Mujammal Haque of ITBP pays tribute to Swar Kokila Bharat Ratna Lata Mangeshkar.#LataMangeshkar pic.twitter.com/PKUfc47jK4
— ITBP (@ITBP_official) February 6, 2022
ಕವಿ ಪ್ರದೀಪ್ ಬರೆದಿರುವ ಮತ್ತು ಸಿ ರಾಮಚಂದ್ರ ಅವರು ಸಂಯೋಜಿಸಿದ ಈ ದೇಶಭಕ್ತಿ ಗೀತೆಯು 1962 ರ ಸಿನೋ-ಇಂಡಿಯನ್ ಯುದ್ಧದ ಸಮಯದಲ್ಲಿ ಮಡಿದ ಭಾರತೀಯ ಸೈನಿಕರನ್ನು ಸ್ಮರಿಸುತ್ತದೆ. ಲತಾ ಮಂಗೇಶ್ಕರ್ ಅವರು ಮೊದಲ ಬಾರಿಗೆ 1963 ರ ಗಣರಾಜ್ಯೋತ್ಸವ ದಿನದಂದು ಗೀತೆಯನ್ನ ಹಾಡಿದ್ದರು.
ಗಾನ ಕೋಗಿಲೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.