ಆಮ್ಲಜನಕ ಕೊರತೆಯಿಂದ ಸೋಂಕಿತ ಸಾವು ಕೊಲೆ ಅಪರಾಧಕ್ಕೆ ಸಮ : ಹೈಕೋರ್ಟ್
ಅಲಹಾಬಾದ್ : ದೇಶಾದ್ಯಂತ ಕೊರೊನಾ 2ನೇ ಅಲೆ ಅತಿ ಭಯನಾಕರೂಪ ಪಡೆದಿದ್ದು, ಸಾವು ನೋವುಗಳ ಸಂಖ್ಯೆ , ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೇ ಇದೆ. ಈ ನಡುವೆ ಆಮ್ಲಜನಕ ಕೊರತೆಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಇಂದು ಹರಿದ್ವಾರದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಐವರು ಮೃತೊಟ್ಟಿದ್ದಾರೆ. ಇತ್ತೀಚೆಗೆ ಕರ್ನಾಟಕದ ಚಾಮರಾಜನಗರದಲ್ಲಿ 24 ಸೋಂಕಿತರು ಮೃತಪಟ್ಟಿದ್ದರು. ಅಲ್ಲದೇ ಕಳೆದ ಭಾನುವಾರ ಮೀರತ್ ವೈದ್ಯಕೀಯ ಕಾಲೇಜಿನಲ್ಲಿ ಐದು ರೋಗಿಗಳು ಆಕ್ಸಿಜನ್ ಇಲ್ಲದೆಯೇ ಸಾವನ್ನಪ್ಪಿರುವ ಸುದ್ದಿ ಹರಿದಾಡಿತ್ತು.
ಕೊರೊನಾ 2ನೇ ಅಲೆಯ ಸಂಬಂಧ ಪ್ರಕರಣ ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟ್ ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಕೋವಿಡ್ ರೋಗಿಯು ಸಾವನ್ನಪ್ಪಿದರೆ ಅದು ಅಪರಾಧ ಕೃತ್ಯದಲ್ಲಿ ಬರಲಿದೆ ಹಾಗೂ ಇದು ಯಾವುದೇ ಕೊಲೆ ಪ್ರಕರಣಕ್ಕಿಂತ ಕಡಿಮೆಯಲ್ಲ ಎಂದು ಹೇಳಿದೆ. ಕೋವಿಡ್ 19 ಸೋಂಕು ಹೆಚ್ಚುತಿರುವ ಸಂದರ್ಭದಲ್ಲೇ ವೈದ್ಯಕೀಯ ಆಮ್ಲಜನಕದ ಅಭಾವ ಉಂಟಾಗಿದ್ದನ್ನ ಗಮನಿಸಿರುವ ಅಲಹಾಬಾದ್ ಹೈಕೋರ್ಟ್ ಈ ಹೇಳಿಕೆಯನ್ನ ನೀಡಿದೆ.
ವೈದ್ಯಕೀಯ ಆಮ್ಲಜನಕದ ಅಭಾವದಿಂದಾಗಿ ದೇಶದಲ್ಲಿ ಕೊರೊನಾ ರೋಗಿಗಳು ಸಾವಿಗೀಡಾಗುತ್ತಿರೋದು ನಿಜಕ್ಕೂ ಒಂದು ಆಘಾತಕಾರಿ ಪ್ರಕರಣವಾಗಿದೆ. ಇಂತಹ ಆಸ್ಪತ್ರೆಗಳು ಅಪರಾಧದ ಕೃತ್ಯಗಳನ್ನ ಎಸಗುತ್ತಿವೆ ಹಾಗೂ ಇದು ಯಾವುದೇ ಕೊಲೆ ಪ್ರಕರಣಕ್ಕಿಂತ ಕಡಿಮೆಯಲ್ಲ ಎಂದು ನ್ಯಾಯಮೂರ್ತಿ ಅಜಿತ್ ಕುಮಾರ್ ಹಾಗೂ ಸಿದ್ಧಾರ್ಥ ವರ್ಮಾ ನೇತೃತ್ವದ ಪೀಠ ಹೇಳಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,80,000 ಹೊಸ ಪ್ರಕರಣಗಳು ವರದಿಯಾಗಿದೆ. ಮಾತ್ರವಲ್ಲದೇ ಒಂದು ದಿನದಲ್ಲಿ 3,783 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಕೊರೊನಾಗೆ ಲೆಕ್ಕವಿಲ್ಲದಷ್ಟು ಮಂದಿ ಬಲಿಯಾಗ್ತಿದ್ದಾರೆ. ಅದೆಷ್ಟೋ ಜನರು ತಮ್ಮವರನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸಿನಿ ತಾರಯರು ಸಹ ತಮ್ಮರನ್ನ ಕಳೆದುಕೊಂಡು ನೋವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ತಿದ್ದಾರೆ. ಸೋಂಕಿತರು ಬೆಡ್ ಸಿಗದೇ ಆಕ್ಸಿಜನ್ ಕೊರತೆಯಿಂದ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಗೆ ಬಂದು ದೇಶ ತಲುಪಿದೆ. ಅಂತಹದ್ರಲ್ಲಿ ತೀರಾ ಮನಕಲಲಕುಂತಹ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇದೆ.. ಸರ್ಕಾರದ ಜೊತೆ ಕೊರೊನಾ ವಿರುದ್ಧ ಹೋರಾಟದಲ್ಲಿ ಜನರು ಕೈಜೋಡಿಸಬೇಕಾಗಿದೆ. ಜನರು ಸುಖಾಸುಮ್ಮನೆ ಅನಗತ್ಯವಾಗಿ ಹೊರಗಡೆ ಓಡಾಡದೇ , ಗುಂಪಿನಲ್ಲಿ ಬೆರೆಯದೇ , ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ.








