ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ರೆಸ್ಟ್ ಕೊಟ್ಟಿರುವುದು ಸರಿನಾ ?

1 min read
rohith sharma team india saakshatv

ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ರೆಸ್ಟ್ ಕೊಟ್ಟಿರುವುದು ಸರಿನಾ ?

#breaking news #rohithsharma #teamindia #viratkohli #saakshatv #indiaengland #kannadasportsnews @sports @cricket #saakshatvsports

rohith sharma team india saakshatvಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದ್ದರು. ಸರಣಿ ಗೆಲುವಿನಲ್ಲಿ ರೋಹಿತ್ ಶರ್ಮಾ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಗಾಯದಿಂದ ಚೇತರಿಸಿಕೊಂಡ ಬಳಿಕ ರೋಹಿತ್ ಶರ್ಮಾ ಮತ್ತೆ ಫಾರ್ಮ್ ಕೂಡ ಕಂಡುಕೊಂಡಿದ್ದರು.
ಆದ್ರೆ ಇಂಗ್ಲೆಂಡ್ ವಿರುದ್ಧದ ಮೊದಲ ಟಿ-ಟ್ವೆಂಟಿ ಪಂದ್ಯದ ಹನ್ನೊಂದರ ಬಳಗದಲ್ಲಿ ರೋಹಿತ್ ಗೆ ಸ್ಥಾನವಿರಲಿಲ್ಲ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಕ್ರಿಕೆಟ್ ಪಂಡಿತರಿಗೂ ಅಚ್ಚರಿಯಾಗಿತ್ತು.

#breaking news #rohithsharma #teamindia #viratkohli #saakshatv #indiaengland #kannadasportsnews @sports @cricket #saakshatvsports
ಆದ್ರೆ ಇದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಟ್ಟ ಕಾರಣ ಮಾತ್ರ ಇನ್ನೂ ಅಚ್ಚರಿಗೊಳ್ಳುವಂತೆ ಮಾಡಿತ್ತು. ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟಿ-ಟ್ವೆಂಟಿ ಪಂದ್ಯಗಳಿಗೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಆದ್ರೆ ಇದು ಎಷ್ಟರ ಮಟ್ಟಿಗೆ ಸರಿ? ಅತ್ಯುತ್ತಮ ಫಾರ್ಮ್ ನಲ್ಲಿರುವ ರೋಹಿತ್ ಶರ್ಮಾಗೆ ಮೊದಲ ಪಂದ್ಯಕ್ಕೆ ರೆಸ್ಟ್ ಕೊಟ್ಟಿರುವುದು ಸರಿನಾ ? ಇವರ ಬದಲಿಗೆ ಧವನ್ ಗೆ ಅವಕಾಶ ಕೊಡಲಾಗಿದೆ. ಧವನ್ ದೇಸಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅದೇ ರೀತಿ ಕೆ.ಎಲ್. ರಾಹುಲ್ ಕೂಡ ಟೆಸ್ಟ್ ಸರಣಿಯಲ್ಲಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲು ವಿಫಲರಾಗಿದ್ದರು.

ಈ ನಡುವೆ ವಿರಾಟ್ ನಿರ್ಧಾರ ಕೂಡ ಆಶ್ಚರ್ಯವನ್ನುಂಟು ಮಾಡುತ್ತಿದೆ. ನಿನ್ನೆಯಷ್ಟೇ ರೋಹಿತ್ ಜತೆ ರಾಹುಲ್ ಇನಿಂಗ್ಸ್ ಆರಂಭಿಸುತ್ತಾರೆ ಅಂತ ಸುಳಿವನ್ನು ನೀಡಿದ್ದರು. ಆದ್ರೆ ಇವತ್ತು ರೋಹಿತ್‍ಗೆ ವಿಶ್ರಾಂತಿ ನೀಡಿ ಧವನ್ ಗೆ ಅವಕಾಶ ನೀಡಿರುವುದು ಹಲವು ಸಂದೇಹಗಳಿಗೂ ಕಾರಣವಾಗುತ್ತಿದೆ.

ಆದೇನೇ ಇರಲಿ, ಪ್ರಮುಖ ಬ್ಯಾಟ್ಸ್ ಮೆನ್ ಆಗಿರುವ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿರುವುದು ತಪ್ಪು ಅಂತ ಟೀಮ್ ಇಂಡಿಯಾದ ಬ್ಯಾಟಿಂಗ್ ವೈಫಲ್ಯವನ್ನು ನೋಡಿದಾಗ ಗೊತ್ತಾಗುತ್ತದೆ.
rohith sharma team india saakshatvಕೆ.ಎಲ್. ರಾಹುಲ್ ಒಂದು ರನ್ ಗಳಿಸಿದ್ರೆ, ಧವನ್ 4 ರನ್ ಗೆ ಸೀಮಿತವಾದ್ರು. ವಿರಾಟ್ ಶೂನ್ಯ ಸುತ್ತಿದ್ದಾರೆ. ಒಟ್ಟಾರೆ ಟೀಮ್ ಇಂಡಿಯಾದ 11ರ ಬಳಗದ ಆಯ್ಕೆ ಸರಿ ಇಲ್ಲ ಅಂತ ಅನ್ನಿಸಿಬಿಡುತ್ತಿದೆ.
ಏನೇ ಆಗ್ಲಿ, ಹಿಟ್ ಮ್ಯಾನ್‍ಗೆ ರೆಸ್ಟ್ ಕೊಟ್ಟಿರುವುದು ನಾಯಕನ ಸರಿಯಾದ ನಿರ್ಧಾರವಲ್ಲ. ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಇದೊಂದು ಬ್ರೇಕಿಂಗ್ ನ್ಯೂಸ್ ಅಂತ ಹೇಳಿದ್ದಾರೆ. ಅಲ್ಲದೆ ರೋಹಿತ್ ಅವರನ್ನು ಹನ್ನೊಂದರ ಬಳಗದಿಂದ ಹೊರಗಿಟ್ಟಿರುವುದು ಅಚ್ಚರಿಯನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

#breaking news #rohithsharma #teamindia #viratkohli #saakshatv #indiaengland #kannadasportsnews @sports @cricket #saakshatvsports

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd