ನಾಲ್ಕು ತಿಂಗಳ ಬಳಿಕ ಟೀಮ್ ಇಂಡಿಯಾದ ವಿಕೆಟ್ ಕೀಪರ್ / ಬ್ಯಾಟರ್ À ಶ್ವೇತವಸ್ತ್ರದ ಸಮವಸ್ತ್ರವನ್ನು ಧರಿಸಲಿದ್ದಾರೆ. ನವೆಂಬರ್ 14ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪಂತ್ ಆಡಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದ ರಿಷಬ್ ಪಂತ್ ಈಗ ಫುಲ್ ಫಿಟ್ ಆಗಿದ್ದಾರೆ. ಇದೀಗ ಗಾಯಗೊಂಡ ನಂತರದ ದಿನಗಳನ್ನು ನೆನಪು ಮಾಡಿಕೊಂಡಿರುವ ಪಂತ್, ತಾನು ಚೇತರಿಸಿಕೊಂಡು ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯವಾಯ್ತು ಅಂತ ಹೇಳಿಕೊಂಡಿದ್ದಾರೆ.
ಹೌದು, ಗಾಯದಿಂದ ಚೇತರಿಸಿಕೊಳ್ಳುವುದು ಅಷ್ಟೊಂದು ಸುಲಭವಿರಲಿಲ್ಲ. ಅದರಲ್ಲೂ ಮತ್ತೆ ಕಮ್ ಬ್ಯಾಕ್ ಮಾಡೋದು ಕೂಡ ಸುಲಭದದ ಸಂಗತಿಯಲ್ಲ. ಪ್ರತಿ ಬಾರಿಯೂ ದೇವರು ನನ್ನನ್ನು ಕೈ ಹಿಡಿದಿದ್ದಾನೆ. ದೇವರ ಆಶೀರ್ವಾದ ಸದಾ ನನ್ನ ಮೇಲಿದೆ. ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳು ಹೀಗೆ ಪ್ರತಿಯೊಬ್ಬರು ನನಗೆ ಆತ್ಮಸೈರ್ಯವನ್ನು ತುಂಬಿದ್ದರು. ಈ ಹಿಂದೆ ನನಗೆ ಕಾರು ಅಪಘಾತವಾಗಲೂ ಕೂಡ ಇದೇ ರೀತಿಯ ಬೆಂಬಲವನ್ನು ನೀಡಿದ್ದರು ಎಂದು ರಿಷಬ್ ಪಂತ್ ಹೇಳಿದ್ದಾರೆ.
ನಮ್ಮ ಗುರಿಯತ್ತ ನಾವು ಗಮನಹರಿಸಬೇಕು. ಅದೃಷ್ಟ ನಮ್ಮ ಕೈಯಲಿಲ್ಲ. ನಾವು ಗಣನೆಗೆಎ ತೆಗೆದುಕೊಳ್ಳದ ಹಲವು ವಿಷಯಗಳ ಬಗ್ಗೆ ನಾವು ಹೆಚ್ಚು ಯೋಚಿಸಬಾರದು. ನಮ್ಮ ಭವಿಷ್ಯದ ಊಹಾಪೋಹಗಳ ಬಗ್ಗೆ ಚಿಂತಿಸುವುದರ ಬದಲು ನಮ್ಮ ಗಮನ ನಮ್ಮ ಗುರಿಯತ್ತ ಇರಬೇಕು. ಶಿಸ್ತು ಮತ್ತು ಪರಿಶ್ರಮದದಿಂದ ನಾವು ಸಂತೋಷವನ್ನು ಕಾಣಬಹುದು. ನೀವು ಏನೇ ಮಾಡಿದ್ರೂ ಆ ಕ್ಷಣವನ್ನು ಆನಂದಿಸಬೇಕು ಎಂಬುದು ರಿಷಬ್ ಪಂತ್ ಅವರ ಅಭಿಪ್ರಾಯವಾಗಿದೆ.
ಫಿಯರ್‍ಲೆಸ್ ಕ್ರಿಕೆmರ್ ಖ್ಯಾತಿಯ ರಿಷಬ್ ಪಂತ್, ವೃತ್ತಿಪರ ಕ್ರಿಕೆಟ್ ಬದುಕು ಏರಿಳಿತಗಳ ನಡುವೆಯೇ ಸಾಗಿಬಂದಿದೆ. ಅಪಘಾತ, ಗಾಯ, ಕೆಲವೊಂದು ಸಲ ಕೆಟ್ಟ ಫಾರ್ಮ್ ಹೀಗೆ ಕ್ರಿಕೆಟ್ ಬದುಕಿನ ಪ್ರತಿಯೊಂದು ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ವಿಶ್ವ ಕ್ರಿಕೆಟ್‍ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ರಿಷಬ್ ಪಂತ್ ಪಾಲಿಗೆ ಟೆಸ್ಟಿಂಗ್ ಟೈಮ್ ಆಗಿದೆ. ಪಂತ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಧ್ರುವ್ ಜುರೇಲ್ ಅತ್ಯುತ್ತಮ ಫಾರ್ಮ್‍ನಲ್ಲಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪಂತ್‍ಗೆ ಮತ್ತೊಂದು ಅವಕಾಶ ಸಿಕ್ಕಿದೆ. ಇದನ್ನು ಹೇಗೆ ಸದುಪಯೋಗಪಡಿಸಿಕೊಳ್ತಾರೆ ಅನ್ನೋದನ್ನು ಕಾದು ನೋಡೋಣ.
ಇಂದರ್ಜಿತ್ ಸಿಂಗ್ ಬಿಂದ್ರಾ : ಭಾರತೀಯ ಕ್ರಿಕೆಟ್ನ ಚಿತ್ರಣ ಬದಲಾಯಿಸಿದ ದಿಟ್ಟ ಆಡಳಿತಗಾರ..!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅರ್ಥಾತ್ ಬಿಸಿಸಿಐ.. ಇವತ್ತು ವಿಶ್ವ ಕ್ರಿಕೆಟ್ನ ಕುಬೇರ. ಕೈ ಬೆರಳಿನಲ್ಲಿ ವಿಶ್ವ ಕ್ರಿಕೆಟ್ ಅನ್ನು ಆಳುತ್ತಿರುವ ಬಿಸಿಸಿಐ ಇಷ್ಟೊಂದು ಶ್ರೀಮಂತಗೊಳ್ಳಲು ಪ್ರಮುಖ...








