ಅತ್ತೆ ಮಾವ ವ್ಯಂಗ್ಯವಾಡಿದರೆ ತಪ್ಪಲ್ಲ.. ಅದು ದಾಂಪತ್ಯ ಜೀವನದ ಭಾಗವೆಂದ ನ್ಯಾಯಾಲಯ..!
ಮುಂಬೈ: ಮದುವೆಯಾದ ನಂತರ ಗಂಡನ ಮನೆಯಲ್ಲಿ ಪತ್ನಿಗೆ ಹಿಂಸೆ ಇಲ್ಲವೇ ಸೊಸೆಯಿಂದ ಅತ್ತೆ ಮಾವನಿಗೆ ಹಿಂಸೆಯಾಗುವಂತಹ ಪ್ರಕರಣಗಳು ಸಾಕಷ್ಟು ಬೆಲಕಿಗೆ ಬಂದಿವೆ. ಅದರಂತೆ ತನಗೆ ಅತ್ತೆ ಮಾವನಿಂದ ಹಿಂಸೆಯಾಗುತ್ತಿದೆ ಎಂದು ಮಹಿಳೆಯೊಬ್ಬಳು ಕೋರ್ಟ್ ಮೊರೆ ಹೋಗಿದ್ದಳು. ಆದ್ರೆ ನ್ಯಾಯಾಲಯವು ವೃದ್ಧ ದಂಪತಿ ( ಅತ್ತೆ – ಮಾವ) ಪರ ತೀರ್ಪು ನೀಡಿದೆ. ಅಲ್ಲದೇ ಮದುವೆಯಾದ ಮೇಲೆ ಅತ್ತೆ ಮಾವ ವ್ಯಂಗ್ಯ ಮಾತುಗಳನ್ನು ಸೊಸೆಗೆ ಹೇಳಿದರೆ ಅಥವಾ ವ್ಯಂಗ್ಯವಾಗಿ ಮಾತನಾಡಿದರೆ ಅದು ತಪ್ಪಲ್ಲ ಎಂದು ಮುಂಬೈ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ವೃದ್ಧ ದಂಪತಿಗೆ ಜಾಮೀನು ಮಂಜೂರು ಮಾಡಿದೆ. ಅಷ್ಟೇ ಅಲ್ಲ ಮದುವೆಯಾದ ಮೇಲೆ ವ್ಯಂಗ್ಯ ಮಾತುಗಳನ್ನು ಕೇಳುವುದು ದಾಂಪತ್ಯ ಜೀವನದ ಭಾಗವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.
ವಿಶ್ವದ ಅತಿದೊಡ್ಡ ಲಸಿಕಾ ಕಾರ್ಯಕ್ರಮಕ್ಕೆ ಭಾರತ ತಯಾರಿ
ಅಂದ್ಹಾಗೆ ಮುಂಬೈನಲ್ಲಿ ಈ ಘಟನೆ ನಡೆದಿದೆ. ಈಕೆ ದುಬೈನಲ್ಲಿ ವಿದ್ಯಾಭ್ಯಾಸ ನಡೆಸುವಾಗ ಸಹಪಾಠಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಈ ದಂಪತಿ ಮುಂಬೈನಲ್ಲಿರುವ ಸಾಕು ತಂದೆ ತಾಯಿ ಮನೆಗೆ ಬಂದಿದದ್ದರು. ಬಳಿಕ ಪತಿ ವಾಪಸ್ ದುಬೈಗೆ ಕೆಲಸಕ್ಕಾಗಿ ಹೋಗಿದ್ದ ಸಂದರ್ಭದಲ್ಲಿ ಸೊಸೆಗೆ ಅತ್ತೆ ಮಾವ ಬಹಳ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ.
ಡ್ಯಾನ್ಸರ್ ಆಗಿದ್ದೇ ತಪ್ಪಾ, ಬಾಲಿವುಡ್ ನಲ್ಲಿರೋದೇ ಅಪರಾಧಾನಾ: ರಾಖಿ ಸಾವಂತ್..!
ಸೊಸೆ ಆರೋಪದ ಪ್ರಕಾರ ಫ್ರಿಜ್ ಮುಟ್ಟಲು ಕೊಡುತ್ತಿರಲಿಲ್ಲ, ನಿನ್ನೆ ಮೊನ್ನೆ ಮಾಡಿದ್ದ ಅಡುಗೆಯನ್ನೇ ಊಟಕ್ಕೆ ಕೊಡುತ್ತಿದ್ದರು. ರೂಮಿನಲ್ಲಿ ಮಲಗಲೂ ಬಿಡದೆ, ಹಾಲ್ನಲ್ಲಿಯೇ ಮಲಗಲು ಕಿರುಕುಳ ನೀಡ್ತಿದ್ರು. ತವರಿಗೂ ಹೋಗಲೂ ಬಿಡುತ್ತಿರಲಿಲ್ಲ ಎಂದಿದ್ದಾಳೆ. ಅಷ್ಟೇ ಅಲ್ದೇ ದುಬೈನಿಂದ ಊರಿಗೆ ಬರುವಾಗ 15 ಕೆ.ಜಿ ಡ್ರೈಫ್ರೂಟ್ಸ್ ಅನ್ನು ಅವರ ಮಗ ನನ್ನೊಂದಿಗೆ ಕಳುಹಿಸಿಕೊಟ್ಟಿದ್ದರು. ಅದನ್ನೂ ಕೂಡ ಅತ್ತೆ ಮಾವ ತೂಕ ಹಾಕಿ ಖಚಿತಪಡಿಸಿಕೊಳ್ಳುವ ಮೂಲಕ ನನಗೆ ಅವಮಾನಿಸಿದ್ದರು ಎಂದು ಹೇಳಿಕೊಂಡು ಬೆಸರ ಹೊರಹಾಕಿದ್ದಳು. ಕೊನೆಗೆ ವೃದ್ಧ ದಂಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಈ ಕುರಿತು ವಿಚಾರಣೆ ನಡೆಸಿರುವ ನ್ಯಾಯಾಲಯವು ವೃದ್ಧ ದಂಪತಿಗೆ ಜಾಮೀನು ಮಂಜೂರು ಮಾಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








